ಬೆಂಗಳೂರು: ಉರ್ದು ಭಾಷಾ ಅಭಿವೃದ್ಧಿಗೆ ಬಜೆಟ್‌ನಲ್ಲಿ 100 ಕೋಟಿ ಹಣ ಕೊಟ್ಟಿರುವ ಸರ್ಕಾರದ ನಡೆಯನ್ನು ಸಚಿವ ಶರಣಪ್ರಕಾಶ್ ಪಾಟೀಲ್ (Sharanprakash Patil) ಸಮರ್ಥನೆ ಮಾಡಿಕೊಂಡಿದ್ದಾರೆ.
ಬಿಜೆಪಿ (BJP) ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರಿಗೆ ಇಂತಹ ವಿಷಯ ಬಿಟ್ಟು ಬೇರೆ ವಿಷಯ ಇಲ್ಲ. ಯಾವುದೋ ವಿಷಯಕ್ಕೆ ಬೇರೆ ರೀತಿಯಲ್ಲಿ ಮಾತನಾಡುತ್ತಾರೆ. ಲೋಕೋಪಯೋಗಿ, ಶಾಲಾ ಶಿಕ್ಷಣ, ಆರೋಗ್ಯ ಇಲಾಖೆಗೆ ಹಣ ಕೊಟ್ಟಿಲ್ಲ ಎಂದು ಕೇಳುತ್ತಿಲ್ಲ. ಇಂತಹ ಪ್ರಶ್ನೆ ಕೇಳುತ್ತಾರೆ. ಬಿಜೆಪಿ ಅವರು ಯಾವತ್ತೂ ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಶ್ನೆ ಕೇಳಲ್ಲ. ಸಮಾಜದಲ್ಲಿ ಒಡಕು, ಅಶಾಂತಿ ಸೃಷ್ಟಿ ಮಾಡೋದು ಬಿಜೆಪಿ ಉದ್ದೇಶ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೈಸೂರು ರಾಜವಂಶಸ್ಥರಿಗೆ ಟಿಡಿಆರ್ – ಸಿಜೆಐ ಪೀಠಕ್ಕೆ ಪ್ರಕರಣ ವರ್ಗಾವಣೆ
ಬಿಜೆಪಿಯವರ ಮಾತು ಜನ ಈಗ ಕೇಳಲ್ಲ. ಕರ್ನಾಟಕದ ಜನರು ಪ್ರಬುದ್ಧರು ಇದ್ದಾರೆ. ಹಲಾಲ್, ಹಿಜಾಬ್ ಎಲ್ಲವೂ ಮಾಡಿದ್ರು. ಜನರು ಬಿಜೆಪಿ ಅವರಿಗೆ ಈಗ ಶಿಕ್ಷೆ ಕೊಟ್ಟಿದ್ದಾರೆ. ಬಿಜೆಪಿಯವರು ಜನರ ಸಮಸ್ಯೆ ಬಗ್ಗೆ ಮಾತಾಡಲಿ. ಸರ್ಕಾರದ ತಪ್ಪು ಇದ್ದರೆ ಸರಿ ಮಾಡೋಣ. ಇಂತಹ ವರ್ತನೆ ಸರಿಯಲ್ಲ. ಇದು ಬಿಜೆಪಿ, ರಾಜ್ಯಕ್ಕೆ, ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲಾ ಎಂದು ಹರಿಹಾಯ್ದರು. ಇದನ್ನೂ ಓದಿ: ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಕೊರೊನಾ ಚಿಕಿತ್ಸೆ: ಶರಣಪ್ರಕಾಶ್ ಪಾಟೀಲ್