– ಜಿಲ್ಲಾ ಪಂಚಾಯಿತಿ ಸಭಾಂಗಣದೊಳಗೆ ನುಗ್ಗಿ ಕಪ್ಪು ಪಟ್ಟಿ ಪ್ರದರ್ಶನ
ಶಿವಮೊಗ್ಗ: ಮಳೆ ಹಾನಿ ಸಂಬಂಧ ನಡೆಯುತ್ತಿದ್ದ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ಅವರಿಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡಿ ಬಿಜೆಪಿ (BJP) ಯುವ ಮೋರ್ಚಾ ಕಾರ್ಯಕರ್ತರು (Activists) ಪ್ರತಿಭಟನೆ ನಡೆಸಿದ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ.
ಜಿಲ್ಲಾ ಪಂಚಾಯತ್‌ನಲ್ಲಿ ಸಭೆ ಆರಂಭವಾಗುತ್ತಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಭಾಂಗಣದ ಒಳಗೆ ಪ್ರವೇಶ ಮಾಡಿದರು. ವೇದಿಕೆಯ ಸಮೀಪದವರೆಗೂ ಘೋಷಣೆಗಳನ್ನು ಕೂಗುತ್ತಾ ಬಂದ ಪ್ರತಿಭಟನಾಕಾರರು ಸಭೆಯಲ್ಲಿ ಕರಪತ್ರಗಳನ್ನು ಎಸೆದರು. ಅಲ್ಲದೆ ಕಪ್ಪು ಪಟ್ಟಿಗಳನ್ನು ಪ್ರದರ್ಶನ ಮಾಡಿ ಸಚಿವರ ವಿರುದ್ಧ ಧಿಕ್ಕಾರ ಕೂಗಿದರು. ಇದನ್ನೂ ಓದಿ: ಸೌಜನ್ಯ ಕೇಸ್ ಮರು ತನಿಖೆ ನಡೆಸಿ: ಸಿಎಂಗೆ ಕುಟುಂಬ ಸದಸ್ಯರ ಮನವಿ
ವೀರ ಸಾವರ್ಕರ್ (Veer Savarkar) ಅವರ ಪಠ್ಯವನ್ನು ಶಾಲಾ ಪುಸ್ತಕಗಳಲ್ಲಿ ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಹರಿಕೃಷ್ಣ ಮತ್ತು ಕಾರ್ಯಕರ್ತರಾದ ಜಗದೀಶ್, ದರ್ಶನ್, ಪ್ರದೀಪ್ ವಿಶ್ವನಾಥ್ ಮೊದಲಾದವರು ಸಭೆಗೆ ಸಚಿವರು ಬರುತ್ತಿದ್ದಂತೆ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಇಲ್ಲಿದ್ದುಕೊಂಡೇ ಹೆಚ್‌ಡಿಕೆ ಏನೂ ಮಾಡಲ್ಲ, ಸಿಂಗಾಪುರಕ್ಕೆ ಹೋಗಿ ಏನು ಮಾಡುತ್ತಾರೆ: ಬಿ.ನಾಗೇಂದ್ರ ಲೇವಡಿ
ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಏಕಾಏಕಿ ಸಭಾಂಗಣದ ಒಳಗೆ ಪ್ರವೇಶ ಮಾಡಿ ಪ್ರತಿಭಟನೆ ನಡೆಸಿದ್ದು, ನೆರೆದವರಿಗೆ ಇರುಸುಮುರುಸು ಉಂಟು ಮಾಡಿತ್ತು. ಅಲ್ಲದೇ ಸೂಕ್ತ ಭದ್ರತೆಯನ್ನು ಒದಗಿಸಿರಲಿಲ್ಲವೇ ಎಂಬ ಅನುಮಾನ ಮೂಡಿಸಿತ್ತು. ಸ್ವತಃ ಎಸ್‌ಪಿ ಮಿಥುನ್ ಕುಮಾರ್ ವೇದಿಕೆಯಿಂದ ಎದ್ದು ಬಂದು ಪ್ರತಿಭಟನಾಕಾರರನ್ನು ಹೊರಕ್ಕೆ ತಳ್ಳಿದರು. ಪ್ರತಿಭಟನಾಕಾರರು ಹೊರಕ್ಕೆ ಬರುತ್ತಲೇ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಇದನ್ನೂ ಓದಿ: ಮುಸ್ಲಿಂ ಯುವಕ, ಯುವತಿಯರನ್ನು ಬಚಾವ್ ಮಾಡಲು ಪ್ರಕರಣ ಮುಚ್ಚಿಡಲಾಗ್ತಿದ್ಯಾ – ಮುತಾಲಿಕ್ ಪ್ರಶ್ನೆ
Web Stories