ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತಲೆ ಕಡಿದವರಿಗೆ ರೂ.11 ಲಕ್ಷ ಬಹುಮಾನ ನೀಡುತ್ತೇನೆಂದು ಎಂದು ಬಿಜೆಪಿ ಯುವ ಮೋರ್ಚಾ ಮುಖಂಡ ಯೋಗೇಶ್ ವಾರ್ಶ್‍ನೇ ಎಂಬವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾನುವಾರದಂದು ಹನುಮಾನ್ ಜಯಂತಿ ಪ್ರಯುಕ್ತ ಬಿರ್ಭುಮ್ ಜಿಲ್ಲೆಯಲ್ಲಿ ನಡೆದ ಮೆರವಣಿಗೆ ವೇಳೆ ಪೊಲೀಸರ ಲಾಠಿ ಚಾರ್ಜ್ ವಿರೋಧಿಸಿ ಯೋಗೇಶ್ ಈ ಹೇಳಿಕೆ ನೀಡಿದ್ದಾರೆ.
Advertisement
ಲಾಠಿಜಾರ್ಜ್ ವೇಳೆ ಪೊಲೀಸರು ಜನರನ್ನ ಅಮಾನುಷವಾಗಿ ಹೊಡೆದಿದ್ದಾರೆಂದು ಆರೋಪಿಸಿದ ಯೋಗೇಶ್, ಮಮತಾ ಅವರನ್ನು ರಾಕ್ಷಸಿ ಎಂದು ಕರೆದಿದ್ದಾರೆ. ವಿಡಿಯೋ ನೋಡಿದಾಗ ನನಗೆ ಅನ್ನಿಸಿದ್ದು ಒಂದೇ. ಯಾರಾದ್ರೂ ಮಮತಾ ಬ್ಯಾನರ್ಜಿ ತಲೆ ಕಡಿದು ತಂದ್ರೆ ನಾನು ಅವರಿಗೆ 11 ಲಕ್ಷ ರೂ. ಕೊಡ್ತೀನಿ ಅಂತ ಯೋಗೇಶ್ ಹೇಳಿದ್ದಾರೆ.
Advertisement
ಮೆರವಣಿಗೆಯಲ್ಲಿ ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದ್ದು ಭಕ್ತರೇ ಹೊರತು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಮಮತಾ ಬ್ಯಾನರ್ಜಿ ಹಿಂದೂಗಳನ್ನ ಟಾರ್ಗೆಟ್ ಮಾಡ್ತಿದ್ದಾರೆ ಅಂತ ಯೋಗೇಶ್ ಆರೋಪಿಸಿದ್ದಾರೆ.
Advertisement
ಭಾನುವಾರದಂದು ಹನುಮಾನ್ ಜಯಂತಿ ಪ್ರಯುಕ್ತ ಬಿರ್ಭುಮ್ ಜಿಲ್ಲೆಯಲ್ಲಿ ಮೆರವಣಿಗೆ ಹಮ್ಮಿಕೊಳ್ಳಲು ಪೊಲೀಸರು ಅನುಮತಿ ನಿರಾಕರಿಸಿದ್ದರು. ಮೆರವಣಿಗೆ ಮದ್ರಾಸಾ ರೋಡ್ ಬೀದಿ ಪ್ರವೇಶಿದುತ್ತಿದ್ದಂತೆ ಲಾಠಿ ಚಾರ್ಜ್ ಮಾಡಲಾಯಿತು ಎಂದು ವರದಿಯಾಗಿದೆ.