– ನಡುರಸ್ತೆಯಲ್ಲೇ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ
ಬೆಂಗಳೂರು: ಶಾಸಕ ಎಸ್‌ಟಿ ಸೋಮಶೇಖರ್ (ST Somashekar) ಕಾಂಗ್ರೆಸ್‌ಗೆ (Congress) ಅಡ್ಡಮತದಾನ (Cross Vote) ಮಾಡಿದ ಹಿನ್ನೆಲೆ ಆಕ್ರೋಶಗೊಂಡ ಬಿಜೆಪಿ (BJP) ಕಾರ್ಯಕರ್ತರು ಯಶವಂತಪುರದಲ್ಲಿರುವ (Yeswanthpur) ಸೋಮಶೇಖರ್ ಕಚೇರಿ ಮುಂದೆ ಪ್ರತಿಭಟನೆ (Protest) ನಡೆಸಿದ್ದಾರೆ.
ಭಾವಚಿತ್ರಕ್ಕೆ ಮಸಿ ಬಳಿದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಡುರಸ್ತೆಯಲ್ಲೇ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದು, ಜೆಡಿಎಸ್ ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಕೆಂಗೇರಿ ಹೊಯ್ಸಳ ಸರ್ಕಲ್‌ನಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಗಿದೆ. ಇದನ್ನೂ ಓದಿ: ಲೋಕಸಮರ ಹೊತ್ತಲ್ಲಿ ದೋಸ್ತಿಗಳಿಗೆ ಮತ್ತೆ ಶಾಕ್- ಕಾಂಗ್ರೆಸ್ಸಿನ ಮೂವರು, ಬಿಜೆಪಿಯ ಒಬ್ಬರಿಗೆ ಗೆಲುವು
ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ಮತ್ತು ಯಶವಂತಪುರ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿ ಜವರಾಯೀಗೌಡ ಭಾಗಿಯಾಗಿದ್ದರು. ಇದನ್ನೂ ಓದಿ: ಸೋಲು ನಮಗೆ, ನಮ್ಮ ಕುಟುಂಬಕ್ಕೆ ಹೊಸದೇನು ಅಲ್ಲ: ಹೆಚ್‌ಡಿಕೆ
ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ವಿರುದ್ಧ ಬಿಜೆಪಿ ನಾಯಕರು ಬುಧವಾರ ಸ್ಪೀಕರ್‌ಗೆ ದೂರು ನೀಡಲಿದ್ದಾರೆ. ಇಬ್ಬರ ಶಾಸಕತ್ವ ಅನರ್ಹತೆ ಮಾಡುವಂತೆ ಬಿಜೆಪಿ ಸ್ಪೀಕರ್‌ಗೆ ದೂರು ಕೊಡಲಿದೆ. ಇದನ್ನೂ ಓದಿ: ಇವರು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಮತ ಹಾಕಬಹುದಿತ್ತು: ಸೋಮಶೇಖರ್ ವಿರುದ್ಧ ಅಶೋಕ್ ಕಿಡಿ