– ಉಟ್ಟ ಬಟ್ಟೆಯಲ್ಲೇ ಬೆಂಗಳೂರಿಗೆ ಕರೆದುಕೊಂಡು ಹೋದ್ರು ಅಂತ ಗರಂ
ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddarmaiah) ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಾಕಿ ಬಂಧನಕ್ಕೊಳಗಾಗಿ ನಂತರ ಬಿಡುಗಡೆಯಾದ ಬಿಜೆಪಿ ಕಾರ್ಯಕರ್ತೆ (BJP Worker) ಶಕುಂತಲಾ ನಟರಾಜ್ (Shakunthala) ಈಗ ಪೊಲೀಸರ ವಿರುದ್ಧ ಕಿಡಿಕಾರಿದರು.
Advertisement
ತುಮಕೂರಿನ ವಿಜಯನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನನ್ನ ಮನೆಗೆ ಬಂದು ಪೊಲೀಸರು ಅಮಾನುಷವಾಗಿ ನಡೆದುಕೊಂಡರು. ಮುಖ ತೊಳೆಯಲೂ ಅವಕಾಶ ಕೊಟ್ಟಿಲ್ಲ. ಬಟ್ಟೆ ಬದಲಾಯಿಸಲೂ ಬಿಟ್ಟಿಲ್ಲ. ಉಟ್ಟ ಬಟ್ಟೆಯಲ್ಲೇ ಬೆಂಗಳೂರಿಗೆ ಕರೆದುಕೊಂಡು ಹೋದರು ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಉಡುಪಿ ವೀಡಿಯೋ ಕೇಸ್ – ಸಿಎಂ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಬಿಜೆಪಿ ಕಾರ್ಯಕರ್ತೆ ಬಂಧನ
Advertisement
Advertisement
ರಾಜ್ಯ ಕಾಂಗ್ರೆಸ್ ಸರ್ಕಾರ ಹಿಟ್ಲರ್ ರೀತಿ ವರ್ತನೆ ಮಾಡುತ್ತಿದೆ. ಪ್ರಶ್ನೆ ಮಾಡುವ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷ ಉಡುಪಿ ಘಟನೆಯನ್ನು ಮಕ್ಕಳಾಟ ಎಂದು ಟ್ವೀಟ್ ಮಾಡಿತ್ತು. ಇದನ್ನ ನಾನು ಪ್ರಶ್ನೆ ಮಾಡಿದ್ದೇ ಅಷ್ಟೇ ಅದರಲ್ಲಿ ಸುಳ್ಳು ಸುದ್ದಿ ಏನಿತ್ತು, ಅವಮಾನ ಏನಿತ್ತು? ಕಾಂಗ್ರೆಸ್ ಸರ್ಕಾರ ಪೋಲಿಸ್ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
Advertisement
ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಅವರ ಮನೆ ಹಾಳಾಗ ಅಂತ ಸಿದ್ದರಾಮಯ್ಯರು ಹೇಳಿದ್ದರು. ಆಗ ಸಿದ್ದರಾಮಯ್ಯರಿಗೆ ಅವಮಾನ ಅನಿಸಲೇ ಇಲ್ವಾ? ಆದರೆ ಇದು ತುಘಲಕ್ ಸರ್ಕಾರ ಆಗಿದೆ. ಉಡುಪಿ ವಿಚಾರ ಹಾಗೂ ನನ್ನ ವಶಕ್ಕೆ ಪಡೆದ ವಿಚಾರದಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಂ ಹೆಣ್ಣುಮಕ್ಕಳ ಮಾನಸಿಕತೆಯೂ ಜಿಹಾದಿ ಕಡೆಗೆ ಹೊರಟಿರೋದು ಸಮಾಜಕ್ಕೆ ಮಾರಕ: ಸುನೀಲ್ ಕುಮಾರ್
Web Stories