– ಮಡಿಕೇರಿಯಲ್ಲೂ ದೂರು ದಾಖಲು
ಮಡಿಕೇರಿ: ರಾಜ್ಯದಲ್ಲಿ ಮತ್ತೆ ಡೆತ್ ಪಾಲಿಟಿಕ್ಸ್ ಮುನ್ನಲೆಗೆ ಬಂದಿದೆ. ಕಾಂಗ್ರೆಸ್(Congress) ಮುಖಂಡರ ವಿರುದ್ಧ ರಾಜಕೀಯ ಕಿರುಕುಳ ಆರೋಪ ಮಾಡಿ ಕೊಡಗಿನ(Kodagu) ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ(Vinay Somaiah) ಬೆಂಗಳೂರಿನಲ್ಲಿ (Bengaluru) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾವಿಗೂ ಮುನ್ನ ವಾಟ್ಸಪ್‌ನಲ್ಲಿ ಡೆತ್‌ನೋಟ್ ಹಾಕಿದ್ದಾರೆ. ಇದರಲ್ಲಿ ಕಾಂಗ್ರೆಸ್ ಶಾಸಕರಾದ ಪೊನ್ನಣ್ಣ(Ponanna), ಮಂಥರ್ ಗೌಡ ಹೆಸರು ಉಲ್ಲೇಖಿಸಿದ್ದಾರೆ. ರಾಜಕೀಯ ಪ್ರೇರಿತ ಎಫ್‌ಐಆರ್‌ನಿಂದ ನೊಂದು ಸಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಏ.10ರಿಂದ ಅಮೆರಿಕದ ಸರಕುಗಳ ಮೇಲೆ 34% ಆಮದು ಸುಂಕ – ಚೀನಾ ಪ್ರತೀಕಾರದ ಸುಂಕಕ್ಕೆ ದೊಡ್ಡಣ್ಣ ಗರಂ
ಮೃತ ವಿನಯ್ ಅಡ್ಮಿನ್ ಆಗಿದ್ದ, ಕೊಡಗಿನ ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳ ಹೆಸರಿನ ವಾಟ್ಸಪ್ ಗ್ರೂಪ್‌ನಲ್ಲಿ ಶಾಸಕ ಪೊನ್ನಣ್ಣ ಬಗ್ಗೆ ಅಪಹಾಸ್ಯದ ಪೋಸ್ಟ್ ಹಾಕಲಾಗಿತ್ತು. ಹೀಗಾಗಿ ವಿನಯ್ ವಿರುದ್ಧ ಪೊನ್ನಣ್ಣ ಆಪ್ತ ತೆನ್ನೀರ ಮಹೀನಾ ದೂರು ಕೊಟ್ಟಿದ್ದರು. ವಿನಯ್ ಬೇಲ್ ಪಡೆದಿದ್ದರೂ ರಾಜಕೀಯ ಕಿರುಕುಳ ಮುಂದುವರೆದಿತ್ತು ಎನ್ನಲಾಗಿದೆ. ಆದರೆ ಆತ ಯಾರು ಎಂದು ನನಗೇ ಗೊತ್ತೇ ಇಲ್ಲ ಎಂದು ಶಾಸಕ ಪೊನ್ನಣ್ಣ ಹೇಳಿದ್ದಾರೆ. ದೂರು ಕೊಟ್ಟಿದ್ದನ್ನು ತಪ್ಪು ಎನ್ನಲಾಗಲ್ಲ, ತನಿಖೆಯಾಗಲಿ ಎಂದು ತೆನ್ನೀರ ಮಹೀನಾ ಹೇಳಿದ್ದಾರೆ. ಶಾಸಕರ ಹೆಸರನ್ನು ಸೇರಿಸಿ ವಿನಯ್ ಸಹೋದರ ಹೆಣ್ಣೂರು ಠಾಣೆಗೆ(Hennur Police Station) ದೂರು ಕೊಟ್ಟಿದ್ದಾರೆ. ಇದನ್ನೂ ಓದಿ: ಚಿನ್ನ ತರಲು 5 ಸ್ಟೆಪ್ ಕೋಡ್‌ವರ್ಡ್ ಬಳಕೆ – ಚಿನ್ನದ ಚೋರಿಯ ನಾಟಕ ಬಯಲು
ಪೊಲೀಸರು ಪೊನ್ನಣ್ಣ, ಮಂಥರ್‌ಗೌಡ ಹೆಸರು ಕೈಬಿಟ್ಟು ಎಫ್‌ಐಆರ್ ದಾಖಲಿಸಿದ್ದು, ಇದು ಆಕ್ರೋಶಕ್ಕೆ ಕಾರಣವಾಗಿತ್ತು. ಕಡೆಗೆ ಶಾಸಕರ ಹೆಸರು ಸೇರ್ಪಡೆಗೆ ಪೊಲೀಸ್ ಇಲಾಖೆ ಒಪ್ಪಿದ ಕಾರಣ, ಕುಟುಂಬಸ್ಥರು ಪ್ರತಿಭಟನೆ ಕೈಬಿಟ್ಟರು. ಈ ಪ್ರಕರಣ ಸಂಬAಧ ಮಡಿಕೇರಿಯಲ್ಲೂ ದೂರು ದಾಖಲಾಗಿದೆ. ಇದನ್ನೂ ಓದಿ: ಹಾಯ್ ಎಂದವರಿಗೆ ರಾಜಣ್ಣನೂ ಹಾಯ್ ಎಂದಿರಬಹುದು: ಸತೀಶ್ ಜಾರಕಿಹೊಳಿ
ವಿನಯ್ ಡೆತ್‌ನೋಟ್‌ನಲ್ಲಿ ಏನಿದೆ?
* ರಾಜಕೀಯ ಷಡ್ಯಂತ್ರಕ್ಕೆ ನನ್ನ ಮೇಲೆ ಎಫ್‌ಐಆರ್
* ಬೇಲ್ ಸಿಕ್ಕ ನಂತರವೂ ಬಂಧಿಸಲು ಹುಡುಕಾಟ
* ನನ್ನ ಮೇಲೆ ರೌಡಿಶೀಟ್ ಓಪನ್ ಮಾಡಲು ಹುನ್ನಾರ
* ಎಂಎಲ್‌ಎ ಪೊನ್ನಣ್ಣ ಆದೇಶದಂತೆ ಕ್ರಮ ಎಂದು ಓರ್ವ ಪಿಸಿ ಹೇಳಿದ್ದಾರೆ
* ಮಂಥರ್‌ಗೌಡ ಫೋನ್ ಮಾಡಿ, ಯಾಕೆ ಮೆಸೇಜ್ ಹಾಕ್ತೀಯಾ ಅಂದ್ರು
* ಏನಿದ್ರೂ ನನಗೆ ಹೇಳು. ಗ್ರೂಪ್‌ನಲ್ಲಿ ಹಾಕಿದ್ರೆ ಸರಿ ಇರಲ್ಲ ಅಂದ್ರು
* ನನ್ನ ಸಾವಿಗೆ ತೆನ್ನೀರ ಮಹೀನಾ ಅವರೇ ಹೊಣೆ
* ಎಫ್‌ಐಆರ್ ಹಾಕಿಸಿ ಕೊಡಗಿನಲ್ಲಿ ವೈರಲ್ ಮಾಡಿದ್ರು
* ತೆನ್ನೀರ್ ಕಿರುಕುಳಕ್ಕೆ ಸಾಯ್ತಿರೋದು ನಾನೇ ಮೊದಲಲ್ಲ
* ಆತ್ಮಹತ್ಯೆ ಬಗ್ಗೆ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು