ಚಿತ್ರದುರ್ಗ: ಶಾಸಕರನ್ನು ಅಡ್ಡದಾರಿಯಲ್ಲಿ ಖರೀದಿಸಿ, ಪ್ರಜಾಪ್ರಭುತ್ವ ವಿರೋಧಿ ನೀತಿಯಿಂದ ಅಧಿಕಾರ ಹಿಡಿಯೋದು ಬಿಜೆಪಿಯವರ (BJP) ಕೆಲಸ ಎಂದು ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ (RB Timmapur) ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾದಿಗ ನೌಕರರ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದ ಬಳಿಕ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡೋದು ಅವರ ಕನಸಾಗಿದೆ. ಅಡ್ಡದಾರಿಯಲ್ಲಿ ಶಾಸಕರನ್ನು ಖರೀದಿಸಿ, ಪ್ರಜಾಪ್ರಭುತ್ವ ವಿರೋಧಿ ನೀತಿಯಿಂದ ಬಿಜೆಪಿ ಅಧಿಕಾರ ಹಿಡಿದಿತ್ತು. ಅವರೆಂದು ಬಿಜೆಪಿ ಜನರಿಂದ ಆಯ್ಕೆಯಾಗಿ ಅಧಿಕಾರ ಹಿಡಿಯಲು ಆಗಿಲ್ಲ. ಅಸಹ್ಯದ ನಡವಳಿಕೆಯಿಂದ ಬಿಜೆಪಿ ಸಿಎಂ ಆಗಿದ್ದರೆಂದು ಕಿಡಿಕಾರಿದರು.
Advertisement
Advertisement
ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ಶಾಸಕ ರವಿ ಗಣಿಗ ಹೇಳಿರುವ ಬಗ್ಗೆಯೂ ಸಚಿವ ಆರ್‌ಬಿ ತಿಮ್ಮಾಪುರ ಪ್ರತಿಕ್ರಿಯಿಸಿದರು. ಅದು ಅವರೊಬ್ಬರ ಅಭಿಪ್ರಾಯವಾಗಿದೆ. ನಾನು ಸಹ ಮಾಧ್ಯಮದಿಂದ ಈ ವಿಚಾರ ಕೇಳುತ್ತಿದ್ದೇನೆ. ನಮ್ಮ ಪಕ್ಷದಲ್ಲಿ ಆ ರೀತಿ ಅಭಿಪ್ರಾಯ ಇಲ್ಲ. ನಮ್ಮಲ್ಲಿ ಹೈಕಮಾಂಡ್ ಇದೆ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಅಲ್ಲಿ ನಡೆಯುತ್ತದೆ. ಆದರೆ ನಾನು, ಮತ್ತೊಬ್ಬರು ಹೇಳುವುದರಿಂದ ಸಿಎಂ ಬದಲಾವಣೆ ಆಗಲ್ಲ ಎಂದರು. ಇದನ್ನೂ ಓದಿ: ಲಾ ಓದ್ಬೇಡ ಎಂದಿದ್ದ ಶಾನುಭೋಗರ ಆಸ್ತಿಗೆ ನಾನೇ ಲಾಯರ್ ಆದೆ: ಸಿಎಂ
Advertisement
ಇನ್ನು ರಾಜ್ಯದಲ್ಲಿ ದಲಿತ ಸಿಎಂ ಆಯ್ಕೆ ಬಗ್ಗೆ ಸಭೆ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ರಾಜ್ಯದ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆ ಮತ್ತು ಲೋಕಸಭಾ ಚುನಾವಣೆ ದೃಷ್ಟಿಯಿಂದ ಅಳೆದು, ತೂಗಿ ಪಕ್ಷವು ಜನರ ಹಿತದೃಷ್ಟಿಯಿಂದ ನಿಗಮ ಮಂಡಳಿ ಅಧ್ಯಕ್ಷರನ್ನು ಆಯ್ಕೆ ಮಾಡಿದೆ. ಜೊತೆಗೆ ಪರಮೇಶ್ವರ್ ಜೊತೆ ಸಿಎಂ ಸಭೆ ನಡೆಸಿದ್ದಕ್ಕೆ ಇಲ್ಲದ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ರಾಜ್ಯದ ಅಭಿವೃದ್ಧಿ, ಪಕ್ಷ ಸಂಘಟನೆ ಮತ್ತು ಆಡಳಿತ ವಿಚಾರದ ಚರ್ಚೆಗಾಗಿ ಸಿಎಂ ಸಿದ್ಧರಾಮಯ್ಯ ಸಚಿವರ ಮನೆಗೆ ಆಗಾಗ ಬರ್ತಿರ್ತಾರೆ. ಜಾರ್ಜ್ ಹಾಗೂ ಮಹದೇವಪ್ಪ ಅವರ ಮನೆಗೆ ಹೋಗಿದ್ದರು. ಈ ಹಿಂದೆ ಮಾಜಿ ಸಚಿವ ಆಂಜನೇಯ ಮನೆಗೂ ಹೋಗ್ತಿದ್ರು. ಅಂತೆಯೇ ಪರಮೇಶ್ವರ್ ಮನೆಗೂ ಹೋಗಿದ್ದಾರೆ ಎಂದು ಹೇಳಿದರು.
Advertisement
ಸಿಎಂ, ಸಚಿವರೊಂದಿಗೆ, ಶಾಸಕರೊಂದಿಗೆ ಊಟ ಮಾಡಿದ್ರೆ, ಚಹಾ ಕುಡಿದ್ರೆ ಭಿಮ್ನಮತ ಅನ್ನೋದು ಸರಿಯಲ್ಲ. ನಾವು ಸಹ ಆಗಾಗ ಸ್ನೇಹಿತರೊಂದಿಗೆ ಶಾಸಕರೊಂದಿಗೆ ಊಟ ಮಾಡ್ತಿವಿ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಪ್ರತ್ಯೇಕ ಸಭೆಯು ನಡೆಸಿಲ್ಲ. ಆದರೆ ಮಾಧ್ಯಮಗಳಿಗೆ ಅದೆಲ್ಲವು ಭಿನ್ನ, ವಿಭಿನ್ನವಾಗಿ ಕಾಣುತ್ತದೆ ಎಂದು ಸಚಿವ ತಿಮ್ಮಾಪುರ ವ್ಯಂಗ್ಯವಾಡಿದರು. ಈ ವೇಳೆ ಕೈ ಮುಖಂಡರಾದ ಕರಿಯಪ್ಪ, ಹಫೀಸ್ ಇದ್ದರು. ಇದನ್ನೂ ಓದಿ: ಜನವರಿಯಲ್ಲಿ ಜಾತಿಗಣತಿ ವರದಿ ಸ್ವೀಕಾರ: ಸಿದ್ದರಾಮಯ್ಯ
Web Stories