ಪಾಟ್ನಾ: ಲೋಕಸಭಾ ಚುನಾವಣೆಯಲ್ಲಿ (Lok Sabha Elections 2024) ಬಿಜೆಪಿ 150 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ತಿಳಿಸಿದ್ದಾರೆ.
ಭಾಗಲ್ಪುರದಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಿಜೆಪಿಯವರು ಇಷ್ಟು ಸ್ಥಾನಗಳನ್ನು ಭದ್ರಪಡಿಸುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಅವರು 150 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ನಾನು ಖಚಿತಪಡಿಸುತ್ತೇನೆ. 150 ಕ್ಕಿಂತ ಒಂದೇ ಒಂದು ಸ್ಥಾನವೂ ಬರಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಲೋನ್ ಮಸ್ಕ್ ಭಾರತ ಭೇಟಿ ಮುಂದಕ್ಕೆ – ಸದ್ಯಕ್ಕಿಲ್ಲ ಮೋದಿ ಜೊತೆಗೆ ಮಾತುಕತೆ
Advertisement
Advertisement
ಭಾರತಕ್ಕೆ ಎರಡು ರೀತಿಯ ಹುತಾತ್ಮರ ಅಗತ್ಯವಿಲ್ಲ. ಭಾರತದಲ್ಲಿ ಮೈತ್ರಿ ಸರ್ಕಾರ ಬಂದ ತಕ್ಷಣ ನಾವು ಅಗ್ನಿವೀರ್ ಯೋಜನೆಯನ್ನು ಕೊನೆಗೊಳಿಸುತ್ತೇವೆ. ಭಾರತಕ್ಕೆ ಎರಡು ರೀತಿಯ ಹುತಾತ್ಮರ ಅಗತ್ಯವಿಲ್ಲ. ಎಲ್ಲರಿಗೂ ಪಿಂಚಣಿ ಸಿಗಬೇಕು ಎಂದು ಹೇಳಿದ್ದಾರೆ.
Advertisement
ಅಧಿಕಾರಕ್ಕೆ ಬಂದರೆ ಕನಿಷ್ಠ ತೆರಿಗೆ ಜಾರಿಗೆ ತರಲಾಗುವುದು. ಜಿಎಸ್‌ಟಿ ಬದಲಾವಣೆ ಮಾಡುತ್ತೇವೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನ ದ್ವಿಗುಣಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಲಾರೆನ್ಸ್ ಹೆಸರಲ್ಲಿ ಸಲ್ಮಾನ್ ಖಾನ್ ಮನೆಯಿಂದ ಕ್ಯಾಬ್ ಬುಕ್ ಮಾಡಿದ್ದ ವ್ಯಕ್ತಿ ಬಂಧನ
Advertisement
ಭಾರತದಲ್ಲಿ ‘ಇಂಡಿಯಾ’ ಮೈತ್ರಿ ಸರ್ಕಾರ ರಚನೆಯಾದರೆ ರೈತರ ಸಾಲ ಮನ್ನಾ ಮಾಡಲಾಗುವುದು. ರೈತನಿಗೆ ಕನಿಷ್ಠ ಬೆಂಬಲ ಬೆಲೆ ನೀಡಲಾಗುವುದು. ನಾವು ರೈತರಿಗೆ ಎರಡು ಭರವಸೆಗಳನ್ನು ನೀಡುತ್ತೇವೆ. ಕಾಂಗ್ರೆಸ್ ಪಕ್ಷವು ರೈತರ ಸಾಲವನ್ನು ಮನ್ನಾ ಮಾಡಲು ಹೊರಟಿದೆ. ನಾವು ಭಾರತದ ರೈತರಿಗೆ ಖಾತರಿಯ ಕನಿಷ್ಠ ಬೆಂಬಲ ಬೆಲೆಯನ್ನು ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.