ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಮಂಗಳವಾರ ನಾಮಪತ್ರ ಸಲ್ಲಿಕೆಗೆ 5 ನಿಮಿಷ ಬಾಕಿಯಿರುವ ವೇಳೆ ಅಜಿತ್ ಪವಾರ್ ಬಣದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ನಾಯಕ ನವಾಬ್ ಮಲಿಕ್ (Nawab Malik) ಅವರು ಪಕ್ಷದ `ಬಿ’ ಫಾರಂ ಅನ್ನು ಪಡೆದುಕೊಂಡರು.
ಇದೇ ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ (Maharashtra Assembly Poll) ಮನ್‌ಖುರ್ದ್ ಶಿವಾಜಿ ನಗರ ಕ್ಷೇತ್ರದಿಂದ ಅಧಿಕೃತವಾಗಿ ಸ್ಪರ್ಧಿಸಲು ಪಕ್ಷ ಅವಕಾಶ ಕಲ್ಪಿಸಿದೆ. ಅಜಿತ್ ಪವಾರ್ ಎನ್‌ಸಿಪಿ ಬಣದ ಪ್ರಮುಖ ನಾಯನಾಗಿರುವ ನವಾಬ್ ಮಲಿಕ್, ಸಮಾಜವಾದಿ ಪಕ್ಷದ ಪ್ರಭಾವಿ ಅಬು ಅಜ್ಮಿ ವಿರುದ್ಧ ಮುಖಾಮುಖಿಯಾಗಿದ್ದಾರೆ.
Advertisement
Advertisement
ಈ ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನವಾಬ್ ಮಲಿಕ್, ಮಂಗಳವಾರ ಕೊನೇಕ್ಷಣದಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಬಳಿಕ ನಾನು ಮನ್‌ಖುರ್ದ್ ಶಿವಾಜಿ ನಗರದಿಂದ ಅಧಿಕೃತವಾಗಿ ಎನ್‌ಸಿಪಿ ಅಭ್ಯರ್ಥಿಯಾಗಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ವಕ್ಫ್ ಕ್ಯಾತೆ ವಿರೋಧಿಸಿ ರೈತರ ಹೋರಾಟ – ರಾತ್ರೋರಾತ್ರಿ ಪ್ರತಿಭಟನೆಗೆ ಧುಮುಕಿದ ರೈತರು
Advertisement
ನವಾಬ್ ಸ್ಪರ್ಧೆಗೆ ಬಿಜೆಪಿ ಆಕ್ಷೇಪ:
ಮಹಾಯುತಿಯಲ್ಲಿನ ಪಾಲುದಾರರು ತಮ್ಮ ಅಭ್ಯರ್ಥಿಗಳನ್ನಾಗಿ ಯಾರನ್ನ ಬೇಕದರೂ ಘೋಷಣೆ ಮಾಡಬಹುದು. ಆದ್ರೆ ನವಾಬ್ ಮಲಿಕ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ರೆ, ಪಕ್ಷದ ಕಾರ್ಯಕರ್ತರು ಅವರ ಪರ ಪ್ರಚಾರ ನಡೆಸುವುದಿಲ್ಲ. ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಪರ್ಕ ಹೊಂದಿದವರ ಬಗ್ಗೆ ಅವರ ನಿಲುವು ಸ್ಪಷ್ಟವಾಗಿದೆ ಎಂದು ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಶ್ ಶೆಲಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಸತತ 35 ಗಂಟೆಗಳ ಇಡಿ ದಾಳಿ ಅಂತ್ಯ – 2 ದಿನ, 5 ಅಧಿಕಾರಿಗಳಿಂದ ಮಹತ್ವದ ದಾಖಲೆ ಸಂಗ್ರಹ!
Advertisement
ಸದ್ಯ 288 ಕ್ಷೇತ್ರದ ಸದಸ್ಯ ಬಲದ ಮಹಾರಾಷ್ಟ್ರದಲ್ಲಿ ಬಿಜೆಪಿ 152, ಎನ್‌ಸಿಪಿ ಅಜಿತ್ ಪವಾರ್ ಬಣದ 52 ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆ 80 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನೂ ಮಹಾವಿಕಾಸ್ ಅಘಾಡಿ ಮೈತ್ರಿಕೂಟದಿಂದ ಕಾಂಗ್ರೆಸ್ 103 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಶಿವಸೇನೆಯ ಉದ್ಧವ್ ಠಾಕ್ರೆ ಬಣ ಮತ್ತು ಎನ್‌ಸಿಪಿ ಶರದ್ ಪವಾರ್ ಬಣದಿಂದ 87 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಹಾರಾಷ್ಟ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 20 ರಂದು ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಭಾರತದಲ್ಲಿ ವಾಯು ಮಾಲಿನ್ಯದಿಂದ ವರ್ಷಕ್ಕೆ 33,000 ಸಾವು – ಬೆಂಗ್ಳೂರಿನ ಸ್ಥಿತಿ ಏನು?