ಚಿತ್ರದುರ್ಗ: ಕಳೆದ ಒಂದು ವಾರದ ಹಿಂದೆ ಕೇದಾರನಾಥಕ್ಕೆ (Kedarnath) ಪ್ರವಾಸಕ್ಕೆ ತೆರಳಿದ್ದ ಚಿತ್ರದುರ್ಗದ (Chitradurga) ಮೂವರು ಮಹಿಳೆಯರು ಅಪಾಯದಲ್ಲಿ ಸಿಲುಕಿದ್ದಾರೆ.
ಚಿತ್ರದುರ್ಗದ ಬಿಜೆಪಿ ಮುಖಂಡರಾದ (BJP Leader) ರತ್ನಮ್ಮ, ಅಂಬಿಕಾ, ಗೀತಾ ಮತ್ತು ಇನ್ನಿತರರು ಅಪಾಯಕ್ಕೆ ಸಿಲುಕಿದ್ದಾರೆ. ಕೇದಾರದ ಬಳಿ ವಿಪರೀತ ಮಳೆ, ಗುಡ್ಡಕುಸಿತ ಹಿನ್ನೆಲೆಯಲ್ಲಿ 40 ಜನರ ತಂಡದೊಂದಿಗೆ ಪ್ರವಾಸಕ್ಕೆ ತೆರಳಿದ್ದ ಮಹಿಳೆಯರು ಕೇದಾರದಿಂದ 30 ಕಿ.ಮೀ ದೂರದಲ್ಲಿ ಅಪಾಯಕ್ಕೆ ಸಿಲುಕಿಕೊಂಡಿದ್ದಾರೆ. ಇದನ್ನೂ ಓದಿ: ಮುಂದಿನ ವರ್ಷ ಸಿಗೋಣ; ಸ್ವಾತಂತ್ರ‍್ಯ ದಿನದ ಭಾಷಣದಲ್ಲಿ ಲೋಕಸಭೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಮೋದಿ
ಚಿತ್ರದುರ್ಗ, ಬೆಂಗಳೂರು (Bengaluru), ಭದ್ರಾವತಿ ಮೂಲದ 40 ಜನ ಪ್ರವಾಸಿಗರ ತಂಡ ಕೇದಾರನಾಥಕ್ಕೆ ಪ್ರವಾಸ ಹೊರಟಿತ್ತು. ಆದ್ರೆ ಕೇದಾರದ ಗುಪ್ತಕಾಶಿಯಿಂದ ಸೀತಾಪುರದವರೆಗಿನ ರಸ್ತೆ ಸಂಪೂರ್ಣ ಕುಸಿತವಾಗಿದ್ದು, ಜನರು ನಡುಗಡ್ಡೆಯಲ್ಲಿ ಸಿಲುಕಿದ್ದಾರೆ. ಕ್ಷಣ ಕ್ಷಣಕ್ಕೂ ಎದುರಾಗುತ್ತಿರುವ ಭೂ ಕುಸಿತದಿಂದಾಗಿ ಆತಂಕ ಹೆಚ್ಚಾಗಿದೆ. ಇದನ್ನೂ ಓದಿ: ಮಕ್ಕಳಾಗಿಲ್ಲ ಅಂತ ದೇವರ ಮೊರೆ ಹೋಗಿದ್ದ 24ರ ವಿವಾಹಿತೆ 54ರ ಪೂಜಾರಿ ಜೊತೆಯೇ ಜೂಟ್!
ಎರಡೂ ಕಡೆಯ ರಸ್ತೆಗಳಲ್ಲೂ ರೆಡ್ ಜೋನ್‌ನಿಂದಾಗಿ ಪ್ರವಾಸಿಗರಿಗೆ (Tourists) ದಿಕ್ಕು ತೋಚದಂತಾಗಿದೆ. ಅತ್ತ ಕೇದಾರನಾಥಕ್ಕೂ ತಲುಪಲಾಗದೇ ಇತ್ತ ವಾಪಸ್ ಕೂಡ ಬರಲಾಗದ ಸ್ಥಿತಿಯಲ್ಲಿದ್ದಾರೆ. ಶೀಘ್ರದಲ್ಲೇ ಮಹಿಳೆಯರನ್ನ ವಾಪಸ್ ಕರೆತರುವಂತೆ ಮನವಿ ಮಾಡಿದ್ದಾರೆ.
Web Stories