ಬೆಂಗಳೂರು: ಸಮ್ಮಿಶ್ರ ಸರ್ಕಾರ 100 ದಿನಗಳನ್ನು ಪೂರೈಸಿರುವುದಕ್ಕೆ ರಾಜ್ಯ ಬಿಜೆಪಿಯು ವ್ಯಂಗ್ಯವಾದ ಹೇಳಿಕೆಗಳನ್ನು ನೀಡುವ ಮೂಲಕ ಸಿಎಂ ಕುಮಾರಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿಯೊಂದಿಗೆ ರಚನೆಯಾದ ಸಮ್ಮಿಶ್ರ ಸರ್ಕಾರಕ್ಕೆ ಗುರುವಾರ 100 ದಿನಗಳನ್ನು ಪೂರ್ಣಗೊಳಿಸಿದೆ. ಇದರ ಸಂಭ್ರಮದಲ್ಲಿರುವ ಮೈತ್ರಿ ಪಕ್ಷಗಳಿಗೆ ರಾಜ್ಯ ಬಿಜೆಪಿಯು ವ್ಯಂಗ್ಯವಾಗಿ ಅಭಿನಂದನೆ ಸಲ್ಲಿಸಿ, ಆಡಳಿತಾರೂಢ ಸಿಎಂ ಕುಮಾರಸ್ವಾಮಿ ಸರ್ಕಾರದ ಕಾಲೆಳೆದಿದ್ದಾರೆ.
Advertisement
ದಿನಗಳು ನೂರು,
ಹೋದಲೆಲ್ಲ ಕಣ್ಣೀರು,
ಅಭಿವೃದ್ಧಿಗೆ ಎಳ್ಳುನೀರು!
ಮಾನ್ಯ ಕುಮಾರಸ್ವಾಮಿಯವರೇ,
ಅಪವಿತ್ರ ಮೈತ್ರಿಯಲ್ಲಿನ ತೀವ್ರ ಭಿನ್ನಮತದ ನಡುವೆಯೂ ನಿಮ್ಮ ಸರ್ಕಾರ 100 ದಿನಗಳನ್ನು ಪೂರೈಸಿರುವುದಕ್ಕೆ ಅಭಿನಂದನೆಗಳು. ಇನ್ನಾದರೂ ನಿಮ್ಮ ಸರ್ಕಾರ ಟೇಕ್ ಆಫ್ ಆಗಲಿ, ಸ್ಥಗಿತಗೊಂಡಿರುವ ರಾಜ್ಯದ ಅಭಿವೃದ್ಧಿಗೆ ಚಾಲನೆ ಸಿಗಲಿ ಎಂದು ಹಾರೈಸುತ್ತೇವೆ.
— BJP Karnataka (@BJP4Karnataka) August 30, 2018
Advertisement
ಬಿಜೆಪಿಯು ತನ್ನ ಟ್ವಿಟ್ಟರಿನಲ್ಲಿ, ದಿನಗಳು ನೂರು, ಹೋದಲೆಲ್ಲಾ ಕಣ್ಣೀರು, ಅಭಿವೃದ್ಧಿಗೆ ಎಳ್ಳುನೀರು ಎಂದು ಬರೆದು ಕೊಂಡು ಸಮ್ಮಿಶ್ರ ಸರ್ಕಾರವನ್ನು ಕವನದ ರೂಪದಲ್ಲಿ ಕಿಚಾಯಿಸಿದೆ. ಅಪವಿತ್ರ ಮೈತ್ರಿಯಲ್ಲಿ ತೀವ್ರ ಭಿನ್ನಮತದ ನಡುವೆಯೂ ನಿಮ್ಮ ಸರ್ಕಾರ 100 ದಿನಗಳನ್ನು ಪೂರೈಸಿರುವುದಕ್ಕೆ ಅಭಿನಂದನೆಗಳು. ಇನ್ನಾದರೂ ನಿಮ್ಮ ಸರ್ಕಾರ ಟೇಕ್ ಆಫ್ ಆಗಲಿ, ಸ್ಥಗಿತಗೊಂಡಿರುವ ರಾಜ್ಯದ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಸಿಗಲಿ ಎಂದು ಬರೆದುಕೊಳ್ಳುವ ಮೂಲಕ ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರಸ್ವಾಮಿಯವರಿಗೆ ಟಾಂಗ್ ನೀಡಿದೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv