ಹುಬ್ಬಳ್ಳಿ: ಕಳೆದ 3 ವರ್ಷ 9 ತಿಂಗಳಿನಿಂದ ಅನಾಥವಾಗಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್‍ಗೆ ಇಂದು ಚುನಾವಣೆ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಕೈ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
Advertisement
ಈಗಾಗಲೇ ಮೇಯರ್ ಹುದ್ದೆ ಸಾಮಾನ್ಯ ಹಾಗೂ ಉಪಮೇಯರ್ ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ. ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಕಾಂಗ್ರೆಸ್ ತೀವ್ರ ಪೈಪೋಟಿ ನಡೆಸಿವೆ. ಪಾಲಿಕೆ ಒಟ್ಟು 82 ಇದ್ದು ಮ್ಯಾಜಿಕ್ ನಂಬರ್ 42 ರ ಇದೆ. ಚುನಾವಣೆಯಲ್ಲಿ ಕ್ರಮವಾಗಿ ಬಿಜೆಪಿ 39, ಕಾಂಗ್ರೆಸ್ 33 ಜೆಡಿಎಸ್ 01 ಎಐಎಂಐಎಂ 3 ಪಕ್ಷೇತರರು 6 ಸ್ಥಾನ ಗಳಿಸಿದ್ದಾರೆ.
Advertisement
Advertisement
5 ಶಾಸಕರು, 1 ಎಂಪಿ, 1 ವಿಧಾನ ಪರಿಷತ್ ಸದಸ್ಯರಿಗೆ ಮತದಾನದ ಅವಕಾಶ ಹಿನ್ನೆಲೆಯಲ್ಲಿ ಬಿಜೆಪಿ ಸಂಖ್ಯಾ ಬಲ 45ರ ಜೊತೆಗೆ ಇಬ್ಬರು ಪಕ್ಷೇತರರು ಸೇರ್ಪಡೆಯಾಗಿದ್ದು, ಸಂಖ್ಯಾ ಬಲ 47 ಆಗಲಿದೆ. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬರುವುದು ಸ್ಪಷ್ಟವಾಗಿದೆ. ಆದರೆ 33 ಸದಸ್ಯರ ಬಲ ಹೊಂದಿರುವ ಕಾಂಗ್ರೆಸ್, ಜೆಡಿಎಸ್‍ನ 1, ಎಐಎಂಐಎಂನ 3, ಪಕ್ಷೇತರರ 4 ಹಾಗೂ ವಿಶೇಷ ಪ್ರತಿನಿಧಿ ಶಾಸಕ ಪ್ರಸಾದ ಅಬ್ಬಯ್ಯಾರ ಮತ ಗಣನೆಗೆ ಪಡೆದ್ರೂ ಕೇವಲ 41 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳ ಬೇಕಾಗಿದೆ.
Advertisement
ಈ ಮಧ್ಯೆ ಮೇಯರ್ ಆಯ್ಕೆಗೆ ನಿನ್ನೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಸಭೆ ಕೂಡ ನಡೆದಿದೆ.