ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ತನ್ನ ಜಾಹೀರಾತುಗಳಲ್ಲಿ `ಪಪ್ಪು’ ಎಂಬ ಪದವನ್ನು ಬಳಸದಂತೆ ಚುನಾವಣಾ ಆಯೋಗ ತಿಳಿಸಿದೆ.
ಚುನಾವಣೆಯಲ್ಲಿ ಬಳಸುವ ಎಲ್ಲ ಜಾಹೀರಾತುಗಳ ಸ್ಕ್ರಿಪ್ಟ್ ನ್ನು ಒಂದ ತಿಂಗಳ ಮುಂಚಿತವಾಗಿಯೇ ಚುನಾವಣಾ ಆಯೋಗದ ಮಾಧ್ಯಮ ಕಮೀಟಿಗೆ ಕಳುಹಿಸಲಾಗಿತ್ತು. ಆದರೆ ಮಾಧ್ಯಮ ಕಮೀಟಿ `ಪಪ್ಪು’ ಎಂಬ ಪದದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದೆ. ಪಪ್ಪು ಪದದ ಬಳಕೆ ಅಗೌರವ ತೋರಿಸುತ್ತದೆ. ಹಾಗಾಗಿ ನಮ್ಮ ಜಾಹೀರಾತಿನ ಸ್ಕ್ರಿಪ್ಟ್ ನಲ್ಲಿಯ ಪಪ್ಪು ಪದವನ್ನು ತೆಗೆಯುವಂತೆ ಎಂದು ಚುನಾವಣಾ ಆಯೋಗ ತಿಳಿಸಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
Advertisement
Advertisement
ಜಾಹೀರಾತಿನ ಸ್ಕ್ರಿಪ್ಟ್ ನಲ್ಲಿಯ ಪಪ್ಪು ಪದವನ್ನು ತೆಗೆದು ಮತ್ತೊಮ್ಮೆ ಹಾಜರುಪಡಿಸಲು ಚುನಾವಣಾ ಆಯೋಗ ಹೇಳಿದೆ. ಸ್ಕ್ರಿಪ್ಟ್ ನಲ್ಲಿಯ ಪಪ್ಪು ಎಂಬ ಪದ ಯಾವುದೇ ವ್ಯಕ್ತಿಗೆ ಸಂಬಂಧಿಸಿಲ್ಲ ಹಾಗೂ ಈ ಪದದ ಮೂಲಕ ಯಾವುದೇ ವ್ಯಕ್ತಿಯ ಹೆಸರನ್ನು ಹೇಳಲಾಗುತ್ತಿಲ್ಲ. ಚುನಾವಣಾ ಆಯೋಗದ ಮನವಿಯಂತೆ ಪದದ ಬಳಕೆಗೆ ಇನ್ನೊಂದು ಸಾರಿ ಚರ್ಚೆ ನಡೆಸೋಣ ಅಂದ್ರು ಅದನ್ನು ಆಯೋಗ ರದ್ದುಪಡಿಸಿದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
Advertisement
ಪಪ್ಪು ಪದದ ಬಳಕೆ ಬಗೆಗಿನ ಬೆಳವಣಿಗೆಗೆ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಾಹಿತಿಯನ್ನು ಪಡೆದುಕೊಳ್ಳುತ್ತೇನೆ. ಅಲ್ಲಿವರೆಗೂ ನಾನು ಹೇಳಲಾರೆ ಎಂದು ಗುಜರಾತ್ ಚುನಾವಣಾ ಆಯೋಗದ ಮುಖ್ಯ ಆಯುಕ್ತೆ ಬೀಬೀ ಸ್ವೈನ್ ಸ್ಪಷ್ಟನೆ ನೀಡಿದ್ದಾರೆ.
Advertisement
ಸಾಮಾಜಿಕ ಜಾಲತಾಣಗಳಲ್ಲಿ ಪಪ್ಪು ಪದವನ್ನು ಬಳಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟಾರ್ಗೆಟ್ ಮಾಡಿ ಲೇವಡಿ ಮಾಡಲಾಗುತಿತ್ತು.