ಬೆಂಗಳೂರು: 37 ಶಾಸಕರನ್ನು ಹೊಂದಿರುವವರು ಸಿಎಂ ಆಗಬಹುದು, 104 ಶಾಸಕರನ್ನು ಹೊಂದಿರುವ ಬಿಎಸ್‍ವೈ ಏಕೆ ಸಿಎಂ ಆಗಬಾರದು ಎಂದು ಪ್ರಶ್ನಿಸಿರುವ ಮಾಜಿ ಡಿಸಿಎಂ ಆರ್ ಆಶೋಕ್ ಆಪರೇಷನ್ ಕಮಲ ಮುಂದುವರೆದಿದೆ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಯಾವ ಮನುಷ್ಯನಿಗೆ ಕನಸು ಇರುತ್ತೆ, ಅವನು ಗುರಿಯನ್ನು ಸಾಧಿಸುವುದು ಮುಖ್ಯ. ಅಂತೇ ನಾವು ಸರ್ಕಾರ ರಚನೆ ಮಾಡುವುದು ಶತಸಿದ್ಧ. 104 ಸ್ಥಾನಗಳನ್ನ ನೀಡುವ ಮೂಲಕ ಜನರು ನಮಗೆ ಬೆಂಬಲ ನೀಡಿದ್ದಾರೆ. 38 ಸ್ಥಾನ ಬಂದಿರುವ ಜೆಡಿಎಸ್ ಪಕ್ಷ ಎಚ್‍ಡಿ ಕುಮಾರಸ್ವಾಮಿ ಅವರು ಸಿಎಂ ಆದರೆ 104 ಸ್ಥಾನ ಪಡೆದಿರುವ ಬಿಎಸ್‍ವೈ ಏಕೆ ಸಿಎಂ ಆಗಬಾರದು. ನಾವೇನು ರಾಜಕೀಯ ಸನ್ಯಾಸಿಗಳಾ? ಪ್ರತಿಯೊಂದು ಎಂಎಲ್‍ಎ ಸ್ಥಾನ ಮುಖ್ಯ. ಅದ್ದರಿಂದಲೇ ನಾನು ಚುನಾವಣೆ ಸ್ಪರ್ಧೆ ಮಾಡಿಲ್ಲ ಎಂದು ಹೇಳಿದರು.
Advertisement
Advertisement
ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಹೊಂದಿರುವ ಶಾಸಕರ ಸಂಪರ್ಕದಲ್ಲಿ ನಿರಂತರವಾಗಿದ್ದು, ಮತ್ತೆ ಬಿಎಸ್ ವೈ ಅವರು ಪ್ರಮಾಣ ವಚನ ಸ್ವೀಕರಿಸಿ ಸಿಎಂ ಆಗ್ತಾರೆ. ಬಿಎಸ್ ವೈ ಅವರು ಕೂಡ ಈ ಕುರಿತು ಮುಂಖಡರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.
Advertisement
ರಾಜ್ಯ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯ ಉಪಕದನದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವ ಬಿಜೆಪಿಗೆ ಅಪರೇಷನ್ ಕಮಲ ಬಗ್ಗೆ ಮಾತನಾಡಿದ್ದು, 2 ತಿಂಗಳ ಬಳಿಕ ಸರ್ಕಾರ ರಚನೆ ಮಾಡುವ ಚಿಂತನೆಯಲ್ಲಿದೆ. ಈಗಾಗಲೇ ಮಂಡ್ಯ ಉಪಕದನಕ್ಕೆ ಡಾ. ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv