ಬೆಳಗಾವಿ/ಬೆಂಗಳೂರು: ಮುಂಬರುವ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ನಾಗಾ ಸಾಧುಗಳು ಭವಿಷ್ಯ ನುಡಿದಿದ್ದಾರೆ.
Advertisement
ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಸ್ವಾಮಿಗಳನ್ನು ಭೇಟಿ ಮಾಡಿದ ನಾಗಾ ಸಾಧುಗಳು, ಉತ್ತರ ಪ್ರದೇಶದಲ್ಲಿ ಅರಳಿದಂತೆ ಕರ್ನಾಟಕದಲ್ಲೂ ಬಿಜೆಪಿಯ ಕಮಲ ಅರಳುವುದು ನಿಶ್ಚಿತ ಎಂದು ಹೇಳಿದ್ದಾರೆ. ಶಿವರಾತ್ರಿ ದಿನಂದಂದೇ ನಾಗಾ ಸಾಧುಗಳು ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ಹೇಳಿರುವುದು ಕೂತುಹಲಕ್ಕೆ ಎಡೆ ಮಾಡಿಕೊಟ್ಟಿದೆ.
Advertisement
Advertisement
ಇತ್ತ ಶಿವರಾತ್ರಿ ಪ್ರಯುಕ್ತ ಬೆಂಗಳೂರಿಗೆ ನಾಗಸಾಧುಗಳು ಎಂಟ್ರಿ ನೀಡಿದ್ದಾರೆ. ಎಲೆಕ್ಷನ್ ಬೆನ್ನಲ್ಲೆ ನಾಗಸಾಧುಗಳ ಎಂಟ್ರಿ ಸಂಚಲನ ಮೂಡಿಸಿದೆ. ಹರಿದ್ವಾರದಿಂದ ಪವರ್ ಫುಲ್ ನಾಗಸಾಧು ಬಾಬಾ ಬನಖಂಡಿನಾಥ್ ಬಂದಿದ್ದು, ಚಿಕ್ಕಬಾಣಾವರದಲ್ಲಿ ಇಂದು ತಂಗಲಿದ್ದಾರೆ ಎಂದು ಹೇಳಲಾಗಿದೆ. ಸಾಕಷ್ಟು ರಾಜಕೀಯ ನಾಯಕರು ನಾಗಸಾಧುಗಳ ಗುಪ್ತ ಭೇಟಿಗೆ ಅವಕಾಶ ಕೋರಿದ್ದಾರೆ ಎನ್ನಲಾಗಿದೆ. ಎಲೆಕ್ಷನ್ ಬೆನ್ನಲ್ಲೆ ನಾಗಸಾಧುಗಳ ಆರ್ಶಿವಾದ ಪಡೆಯಲು ರಾಜಕೀಯ ನಾಯಕರು ಮುಗಿಬಿದ್ದಿದ್ದಾರೆ. ಈ ನಾಗಸಾಧು ಮುಖ ನೋಡಿಯೇ ಭವಿಷ್ಯದ ಆಗುಹೋಗುಗಳನ್ನು ಹೇಳುತ್ತಾರೆ. ಕುಂಭಮೇಳ ನಡೆಸುವಾಗ ಪ್ರಮುಖ ಸ್ಥಾನದಲ್ಲಿ ಇರುವವರು ಬನಖಂಡಿನಾಥ್ ಸ್ವಾಮೀಜಿ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬನಖಂಡಿನಾಥ್ ಸ್ವಾಮೀಜಿ, ಕರ್ನಾಟಕದ ರಾಜಕೀಯ ನಾಯಕರಿಗೆ ಕಿವಿ ಮಾತು ಹೇಳಿದ್ರು. ನಮಗೆ ಕರ್ನಾಟಕ ಬೇರೆಯಲ್ಲ, ಗುಜರಾತ್ ,ರಾಜಸ್ಥಾನ ಎಲ್ಲವೂ ಒಂದೇ. ಕರ್ನಾಟಕದಲ್ಲಿ ಚುನಾವಣೆ ಪ್ರಾರಂಭವಾಗಿದೆ. ಇಲ್ಲಿ ಜನರ ಮನಸ್ಸು ಗೆದ್ದು ಒಳ್ಳೆಯ ಕೆಲಸ ಮಾಡುವವರು ಗೆಲುವಿನ ಜಯಮಾಲೆ ಹಾಕಿಕೊಳ್ತಾರೆ. ನಾನು ಬಿಜೆಪಿ ಪರವೂ ಅಲ್ಲ, ಕಾಂಗ್ರೆಸ್ ಪರವೂ ಅಲ್ಲ. ನಾಗ ಸಾಧುಗಳು ಜಗತ್ತಿನ ಕಲ್ಯಾಣದ ಬಗ್ಗೆ ಯೋಚಿಸುವವರು. ಕರ್ನಾಟಕದ ಜನರಿಗೆ ಒಳ್ಳೆಯದನ್ನು ಮಾಡುವವರು ಜಯಗಳಿಸಲಿದ್ದಾರೆ ಎಂದು ಹೇಳಿದ್ರು.