ಹಾವೇರಿ: ಬಿಜೆಪಿಯವರು (BJP) ಹತ್ತು ಹಲವಾರು ಭರವಸೆ ಕೊಟ್ಟಿದ್ದು ಬಿಟ್ಟರೆ ಯಾವುದೂ ಈಡೇರಿಲ್ಲ. ದಲಿತರಲ್ಲಿ (Dalits) ಒಗ್ಗಟ್ಟು ಮೂಡಬಾರದು ಅನ್ನೋ ಭಾವನೆ ಅವರದು. ಅಂಬೇಡ್ಕರ್ ಅವರ ಸಂವಿಧಾನದ ಅಡಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ದಲಿತರ ಏಳಿಗೆಗಾಗಿ ಕಾಂಗ್ರೆಸ್ (Congress) ಹೋರಾಟ ಮಾಡುತ್ತಿದೆ ಎಂದು ಎಸ್‌ಸಿ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಧರ್ಮಸೇನಾ (Dharmasena) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾವೇರಿಯಲ್ಲಿ (Haveri) ಮಾತನಾಡಿದ ಅವರು ಜನವರಿ 8 ರಂದು ಎಸ್‌ಸಿ, ಎಸ್‌ಟಿ ಸಮಾವೇಶ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ರಾಹುಲ್, ಪ್ರಿಯಾಂಕಾ ಮತ್ತು ಸೋನಿಯಾ ಮೂವರಲ್ಲಿ ಒಬ್ಬರು ಬರುವ ನಿರೀಕ್ಷೆ ಇದೆ. ಜೀತಮುಕ್ತ ವಿಮೋಚನೆ ಮಾಡಿದ್ದು, ಮಲ ಹೊರುವ ಪದ್ಧತಿ ತೆಗೆದಿದ್ದು ಕಾಂಗ್ರೆಸ್ ಎಂದರು. ಇದನ್ನೂ ಓದಿ: ಜನವರಿ 1ರ ನಸುಕಿನ ಜಾವ 2 ಗಂಟೆವರೆಗೂ ನಮ್ಮ ಮೆಟ್ರೋ ಸಂಚರಿಸಲಿದೆ: BMRCL
Advertisement
Advertisement
ಕೇಂದ್ರದಲ್ಲಿ ಶೇ.50 ಮೀರಲು ಆಗೋದಿಲ್ಲ ಅಂತಿದ್ದಾರೆ. ದಲಿತರಲ್ಲಿ ಗೊಂದಲ ಮೂಡಿಸುವ ಕೆಲಸವಾಗುತ್ತಿದೆ. ದಲಿತರ ಸ್ಕೀಂ ಗಳನ್ನು ಬಿಜೆಪಿಯವರು ಹಾಳು ಮಾಡಿದ್ದಾರೆ. ದಲಿತರ ಹಣವನ್ನು ಬೇರೆಯದಕ್ಕೆ ಉಪಯೋಗಿಸಬಾರದು ಎಂದು ಹೇಳಿದರು.
Advertisement
2019ರಲ್ಲಿ ಪ್ರವಾಹ ಬಂದಾಗ ಸಾಕಷ್ಟು ಹಾನಿಯಾಗಿದೆ. ಮನೆ ಕೊಡಿ ಎಂದರೆ 5 ಲಕ್ಷಕ್ಕೆ 1 ಲಕ್ಷ ಕೇಳುತ್ತಿದ್ದಾರೆ. ಇದು ಕೇವಲ 40 ಪರ್ಸೆಂಟ್ ಅಲ್ಲ, ಎಷ್ಟಾಗುತ್ತದೆ ನೀವೇ ನೋಡಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ