ಹೈದರಾಬಾರ್: ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ, ಬಿಜೆಪಿ ಭಾರತವನ್ನು ಮುಸ್ಲಿಂ ಮುಕ್ತ ಮಾಡಲು ಹೊರಟಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತೆಲಂಗಾಣದ ಬಹದ್ದೂರ್ ಪುರ್‍ನಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆ ನಡೆದಿತ್ತು. ಈ ವೇಳೆ ಮಾತನಾಡಿದ ಓವೈಸಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡಲು ಹೊರಟಿಲ್ಲ. ಮುಸ್ಲಿಂ ಮುಕ್ತ ಮಾಡಲು ಹೊರಟಿದ್ದಾರೆ. ಅಷ್ಟೇ ಅಲ್ಲದೇ ದೇಶದ ಅಲ್ಪಸಂಖ್ಯಾತ ಸಮುದಾಯದ ಜನರನ್ನು ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Advertisement
Advertisement
ಅಮಿತ್ ಶಾ ತೆಲಂಗಾಣಕ್ಕೆ ಬಂದಿದ್ದಾಗ ಮಜ್ಲಿಸ್ ಮುಕ್ತ ಹೈದರಾಬಾದ್ ಮಾಡುತ್ತೇನೆ ಅಂತಾ ಹೇಳಿದ್ದಕ್ಕೆ ಓವೈಸಿ, ಅಮಿತ್ ಶಾ ಅವರೇ ಯಾವುದನ್ನು ಮುಕ್ತ ಮಾಡುತ್ತೀರಾ? ಎಲ್ಲಿಂದ ಮುಕ್ತ ಮಾಡುತ್ತೀರಾ ಎಂದು ಪ್ರಶ್ನಿಸಿ ಕುಟುಕಿದರು. ನೀವು ಮಜ್ಲಿಸ್ ಮುಕ್ತ ಭಾರತ ಮಾಡುವ ಗುರಿ ಹೊಂದಿಲ್ಲ. ಹೊರತಾಗಿ ಮುಸ್ಲಿಂ ಮುಕ್ತ ಭಾರತಕ್ಕೆ ಮುಂದಾಗಿರುವಿರಿ ಎಂದು ದೂರಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv