ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi) ಅನಾವರಣ ಮಾಡಿದ G20 ಶೃಂಗಸಭೆಯ ಲೋಗೋಕ್ಕೆ ಈಗ ಕಾಂಗ್ರೆಸ್(Congress) ಆಕ್ಷೇಪ ಎತ್ತಿದೆ.
ಈ ಲೋಗೋದಲ್ಲಿ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಪಕ್ಷದ ಚಿನ್ಹೆಯಾದ ಕಮಲವನ್ನು(Lotus) ತುರುಕಿದೆ. ಇದು ಆಘಾತಕಾರಿ ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಈ ಹಿಂದೆ ಖುದ್ದು ನೆಹರೂ ಅವರು, ಕಾಂಗ್ರೆಸ್ ಪಕ್ಷದ ಚಿನ್ಹೆ ಬಳಸುವ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಆದರೆ ಈಗ ಎಲ್ಲೆಲ್ಲಿ ಅವಕಾಶ ಸಿಗುತ್ತೋ ಅಲ್ಲೆಲ್ಲ ಬಿಜೆಪಿ ತಮ್ಮ ಪಕ್ಷದ ಪ್ರಚಾರ ಮಾಡಿಕೊಳ್ಳುತ್ತಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.
Advertisement
Over 70 years ago, Nehru rejected the proposal to make Congress flag the flag of India. Now,BJP's election symbol has become official logo for India's presidency of G20! While shocking,we know by now that Mr.Modi & BJP won’t lose any opportunity to promote themselves shamelessly!
— Jairam Ramesh (@Jairam_Ramesh) November 9, 2022
Advertisement
ಇದಕ್ಕೆ ಬಿಜೆಪಿ(BJP) ರಾಜೀವ್ ಹೆಸರಿನ ಅರ್ಥ ಗೊತ್ತೆ? ಕಮಲ್‍ನಾಥ್ ಹೆಸರಿನಿಂದ ಕಮಲ ತೆಗೆಯುತ್ತೀರಾ ಎಂದು ಪ್ರಶ್ನಿಸಿ ಕಾಲೆಳೆದಿದೆ. ಕಮಲ ನಮ್ಮ ರಾಷ್ಟ್ರೀಯ ಹೂವು. ಇದು ಲಕ್ಷ್ಮಿಯ ಆಸನವೂ ಹೌದು. ನೀವು ರಾಷ್ಟ್ರೀಯ ಹೂವನ್ನು ವಿರೋಧಿಸುತ್ತೀರಾ? ರಾಷ್ಟ್ರೀಯ ಪುಷ್ಪಕ್ಕೆ ಅಪಮಾನ ಮಾಡುತ್ತೀರಾ? ಇಲ್ಲಿ ನಿಮಗೆ ಅಜೆಂಡಾ ಇದ್ದಂತಿಲ್ಲ. ಬಿಜೆಪಿಯ ಎಲ್ಲಾ ಕೆಲಸಗಳನ್ನು ಟೀಕಿಸುವುದೇ ನಿಮ್ಮ ಅಜೆಂಡಾ ಆಗಿದೆ ಎಂದು ತಿರುಗೇಟು ನೀಡಿದೆ. ಇದನ್ನೂ ಓದಿ: ನನ್ನ ತೇಜೋವಧೆ ಆಗ್ತಿದೆ – ವಿವಾದಿತ ಹೇಳಿಕೆಯನ್ನು ಹಿಂಪಡೆದ ಸತೀಶ್ ಜಾರಕಿಹೊಳಿ
Advertisement
ಭಾರತವು ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿನರೇಂದ್ರ ಮೋದಿ ಅವರು ಜಿ20 ಅಧ್ಯಕ್ಷ ಗಾದಿಯ ಲೋಗೊ, ಥೀಮ್(ಘೋಷವಾಕ್ಯ) ಮತ್ತು ವೆಬ್‌ಸೈಟ್ ಅನಾವರಣಗೊಳಿಸಿದ್ದರು.
Advertisement
If only CONgis had known that Lotus is the National Flower of India, they would not have exposed their ignorance to the World.
What else can one expect from those who serve the likes of Sonia Gandhi, Rahul Gandhi and Priyanka Vadra? https://t.co/5sJPDhrT51
— C T Ravi ???????? ಸಿ ಟಿ ರವಿ (@CTRavi_BJP) November 9, 2022
ಭೂಮಿಯನ್ನು ಕಮಲದೊಂದಿಗೆ ಜೋಡಿಸಲಾಗಿರುವ ಲೋಗೋ ಮತ್ತು ವಸುದೈವ ಕುಟುಂಬಕಂ(ವಿಶ್ವವೇ ಕುಟುಂಬ) ಘೋಷವಾಕ್ಯ ಬಿಡುಗಡೆ ಮಾಡಿ ಅದರ ಅರ್ಥವನ್ನು ವಿವರಿಸಿದ್ದರು.
ಮೋದಿ ಹೇಳಿದ್ದು ಏನು?
ಜಿ20 ಲೋಗೋದಲ್ಲಿನ ಕಮಲದ ಚಿಹ್ನೆಯು ಈ ಸಮಯದಲ್ಲಿ ಭರವಸೆಯ ಪ್ರಾತಿನಿಧಿಯಾಗಿದೆ. ಎಷ್ಟೇ ಪ್ರತಿಕೂಲ ಸಂದರ್ಭಗಳಿದ್ದರೂ ಕಮಲ ಅರಳುತ್ತಲೇ ಇರುತ್ತದೆ. ಜಗತ್ತು ಆಳವಾದ ಬಿಕ್ಕಟ್ಟಿನಲ್ಲಿದ್ದರೂ, ನಾವು ಇನ್ನೂ ಪ್ರಗತಿ ಸಾಧಿಸಬಹುದು ಮತ್ತು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಬಹುದು.
In case you don't know,
Lotus is the national flower of India
— Rishi Bagree (@rishibagree) November 9, 2022
ಭಾರತೀಯ ಸಂಸ್ಕೃತಿಯಲ್ಲಿ, ಜ್ಞಾನ ಮತ್ತು ಸಮೃದ್ಧಿಯ ದೇವತೆಗಳಿಬ್ಬರೂ ಕಮಲದ ಮೇಲೆ ಕುಳಿತಿದ್ದಾರೆ. ಇದು ಇಂದು ಜಗತ್ತಿಗೆ ಅತ್ಯಂತ ಅಗತ್ಯವಾಗಿದೆ. ನಮ್ಮ ಪರಿಸ್ಥಿತಿಗಳನ್ನು ಜಯಿಸಲು ನಮಗೆ ಸಹಾಯ ಮಾಡುವ ಹಂಚಿದ ಜ್ಞಾನ. ಕೊನೆಯ ಮೈಲಿನಲ್ಲಿರುವ ಕೊನೆಯ ವ್ಯಕ್ತಿಯನ್ನು ತಲುಪುವ ಹಂಚಿಕೆಯ ಸಮೃದ್ಧಿ. ಅದಕ್ಕಾಗಿಯೇ ಜಿ20 ಲಾಂಛನದಲ್ಲಿ ಭೂಮಿಯನ್ನು ಕಮಲದ ಮೇಲೆ ಇರಿಸಲಾಗಿದೆ.
Lotus is the National Flower of India. It is a sacred flower & occupies a unique position in the art & mythology of ancient India & has been an auspicious symbol of Indian culture since time immemorial.
If BJP chose Lotus as a symbol, it shows how the party is close to its roots.
— Padmaja ???????? (@prettypadmaja) November 9, 2022
ಲಾಂಛನದಲ್ಲಿರುವ ಕಮಲದ ಏಳು ದಳಗಳು ಮಹತ್ವಪೂರ್ಣವಾಗಿವೆ. ಆ ದಳಗಳು ಏಳು ಖಂಡಗಳನ್ನು ಪ್ರತಿನಿಧಿಸುತ್ತದೆ. ಸಂಗೀತದಲ್ಲಿ ಏಳು ಸ್ವರಗಳಿದ್ದು, ಈ ಸ್ವರಗಳು ಒಟ್ಟಿಗೆ ಸೇರಿದಾಗ, ಅವು ಪರಿಪೂರ್ಣ ಸಾಮರಸ್ಯವನ್ನು ಸೃಷ್ಟಿಸುತ್ತವೆ. ಈ ರೀತಿಯಾಗಿ ಎಲ್ಲ ದೇಶಗಳು ಸಾಮರಸ್ಯದಿಂದ ಒಂದಾಗಿ ಅಭಿವೃದ್ಧಿಯಾಗಬೇಕು.
ಪ್ರಸ್ತುತ ಅಧ್ಯಕ್ಷ ಸ್ಥಾನ ವಹಿಸಿರುವ ಇಂಡೋನೇಷ್ಯಾದಿಂದ ಡಿಸೆಂಬರ್ 1 ರಂದು ಭಾರತ ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ.