ಬೆಂಗಳೂರು: ಲೋಕಸಭಾ ಚುನಾವಣೆ ಮಂಡ್ಯದಲ್ಲಿ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈ ಮಧ್ಯೆ ಸುಮಲತಾ ವರ್ಸಸ್ ನಿಖಿಲ್ ನಡುವಿನ ಫೈಟ್ ಬೆನ್ನಲ್ಲೇ ಈಗ ಬಿಜೆಪಿ ಎಂಟ್ರಿಯಾಗಲು ಸಿದ್ಧತೆ ನಡೆಸಿದೆ.
ಮಂಡ್ಯ ಅಖಾಡಕ್ಕೆ ಬಿಜೆಪಿಯಿಂದ ಹೊಸ ಎಂಟ್ರಿಗೆ ಕಸರತ್ತು ನಡೆಯುತ್ತಿದ್ದು, ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಮಾಜಿ ಪರಿಷತ್ ಸದಸ್ಯ ಅಬ್ದುಲ್ ಅಜೀಂ ಅವರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ. ಅಬ್ದುಲ್ ಅಜೀಂ ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಜೊತೆ ಇದ್ದರು. ಆಗ ಪರಿಷತ್ ಸದಸ್ಯರಾಗಿದ್ದರು. ಈಗ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದಾರೆ.
Advertisement
Advertisement
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅಬ್ದುಲ್ ಅಜೀಂ, ನಾನು ಮೊದಲು ಮಂಡ್ಯದವನು ಆನಂತರ ಭಾರತದವನು. ನಾನು ನಿಜವಾದ ಹೀರೋ, ನನಗೆ ಎಲ್ಲಾ ಅರ್ಹತೆಗಳಿವೆ. ಮಂಡ್ಯದಲ್ಲಿ ನಮ್ಮ ಕುಟುಂಬಕ್ಕೆ 600 ವರ್ಷಗಳ ಇತಿಹಾಸವಿದೆ. ನನಗೆ ಮಂಡ್ಯದವರನ್ನು ಹೇಗೆ ಮನವೊಲಿಸಬೇಕೆಂಬುದು ಗೊತ್ತಿದೆ. ನನಗೆ ಟಿಕೆಟ್ ಕೊಡಬೇಕು. ಈಗಾಗಲೇ ನಾನು ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ. ಟಿಕೆಟ್ ವಿಚಾರವಾಗಿ ಅಶೋಕ್ ಅವರನ್ನು ಭೇಟಿ ಮಾಡಿ ಮಾತುಕತೆ ಮಾಡಿದ್ದೇನೆ. ಈ ಹಿಂದೆ ನಾನು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಒಂದೂವರೆ ಲಕ್ಷ ಮತ ಪಡೆದಿದ್ದೇನೆ ಎಂದು ಹೇಳಿದ್ದಾರೆ.
Advertisement
Advertisement
ಈಗಾಗಲೇ ಅಮಿತಾ ಶಾ ಅವರನ್ನು ಭೇಟಿ ಮಾಡಿ ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೂ ಪೆಂಡಿಂಗ್ ಉಳಿಸಿಕೊಂಡಿದೆ. ಯಾಕೆಂದ್ರೆ ಮಂಡ್ಯ ಮತ್ತು ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು, ಕಾಂಗ್ರಸ್ಸಿನ ತಂತ್ರವೇನು ಎಂದು ತಿಳಿದುಕೊಂಡು ಬಿಜೆಪಿ ಹೆಜ್ಜೆ ಹಿಡಲು ಪ್ಲಾನ್ ಮಾಡಿಕೊಂಡಿದೆ. ಇಂತಹ ಸಂದರ್ಭದಲ್ಲಿ ಈ ರೀತಿ ಅಬ್ದುಲ್ ಅಜೀಂ ಮನವಿ ಮಾಡಿಕೊಂಡಿದ್ದಾರೆ. ಬಿಜೆಪಿ ಈಗ ಅಜೀಂ ಅವರ ಈ ಮನವಿಯನ್ನು ಯಾವ ರೀತಿ ಪರಿಗಣಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv