ಬೆಂಗಳೂರು: ಮುಸ್ಲಿಂ ಹೆಣ್ಣು ಮಕ್ಕಳೂ ಒಂದು ದುಪ್ಪಟ್ಟ ಹಾಕಿ ಕೊಳ್ಳುತ್ತಾರೆ. ಸ್ವಾಮೀಜಿಗಳೂ ತಲೆಯ ಮೇಲೆ ಬಟ್ಟೆ ಹಾಕುತ್ತಾರೆ. ಹಿಜಬ್ ವಿವಾದಕ್ಕೆ ಬಿಜೆಪಿಯೇ ಕಾರಣ ಎಂದು ಸಿದ್ದರಾಮಯ್ಯರ ಮೈಸೂರಿನಲ್ಲಿ ನೀಡಿರುವ ಹೇಳಿಕೆಗೆ ಬಿಜೆಪಿ ಟ್ವೀಟ್ ಮಾಡಿ ಖಂಡಿಸಿದೆ.
ಟ್ವೀಟ್‍ನಲ್ಲಿ ಏನಿದೆ?: ಮಾನ್ಯ ಸಿದ್ದರಾಮಯ್ಯನವರೇ, ಓಲೈಕೆಗೂ ಒಂದು ಮಿತಿ ಎನ್ನುವುದಿರುತ್ತದೆ. ನೀವು ಅದೆಲ್ಲವನ್ನೂ ದಾಟಿ ಸಾಗುತ್ತಿದ್ದೀರಿ. ಮೊದಲನೆಯದಾಗಿ ಹಿಜಬ್, ದುಪ್ಪಟ್ಟ, ಮುಂಡಾಸು, ಪೇಟ ಇವುಗಳ ನಡುವಿನ ವ್ಯತ್ಯಾಸವನ್ನು ಮೊದಲು ಅರಿತುಕೊಳ್ಳಿ ಎಂದು ವಾಗ್ದಾಳಿ ಮಾಡಿದೆ. ಇದನ್ನೂ ಓದಿ: ನನಗೆ ವಯಸ್ಸಾಯ್ತು ಅಂತ ಕಾಲೆಳೆಯುತ್ತಾರೆ ಅದಕ್ಕೆ ವಾರಕ್ಕೊಮ್ಮೆ ಶೇವ್ ಮಾಡಿಸ್ತೀನಿ: ಸಿದ್ದರಾಮಯ್ಯ
Advertisement
ಹಿಜಾಬ್‌ಗೆ ಎಲ್ಲಿ ವಿರೋಧ ವ್ಯಕ್ತವಾಗಿದೆ ಎನ್ನುವುದರ ಬಗ್ಗೆಯೇ @siddaramaiah ಅವರಿಗೆ ಗೊಂದಲವಿದೆ.
ಹಾದಿಬೀದಿಯಲ್ಲಿ, ಕಾಲೇಜಿನ ಆವರಣದಲ್ಲಿ ಹಿಜಾಬ್ ನಿಷೇಧಿಸಿಲ್ಲ. ವಸ್ತ್ರಸಂಹಿತೆಯ ಪ್ರಕಾರ ತರಗತಿಯಲ್ಲಿ ಅವಕಾಶ ನೀಡಿಲ್ಲ.
ಹಿಜಾಬ್ ಒಳಗೆ ಅಡಗಿರುವ ʼಅಲ್ಪʼ ಮತಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.#ಬುರುಡೆರಾಮಯ್ಯ
— BJP Karnataka (@BJP4Karnataka) March 25, 2022
ಹಿಜಬ್ ನಿಷೇಧಿಸಿಲ್ಲ, ತರಗತಿಯೊಳಗೆ ಹಿಜಬ್‍ಗೆ ಅವಕಾಶ ನಿರಾಕರಿಸಲಾಗಿದೆ ಅಷ್ಟೇ. ಹಿಜಾಬ್‍ಗೆ ಎಲ್ಲಿ ವಿರೋಧ ವ್ಯಕ್ತವಾಗಿದೆ ಎನ್ನುವುದರ ಬಗ್ಗೆಯೇ ಸಿದ್ದರಾಮಯ್ಯ ಅವರಿಗೆ ಗೊಂದಲವಿದೆ. ಹಾದಿಬೀದಿಯಲ್ಲಿ, ಕಾಲೇಜಿನ ಆವರಣದಲ್ಲಿ ಹಿಜಬ್ ನಿಷೇಧಿಸಿಲ್ಲ. ವಸ್ತ್ರಸಂಹಿತೆಯ ಪ್ರಕಾರ ತರಗತಿಯಲ್ಲಿ ಅವಕಾಶ ನೀಡಿಲ್ಲ. ಹಿಜಬ್ ಒಳಗೆ ಅಡಗಿರುವ ಅಲ್ಪ ಮತಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂದು ಕಿಡಿಕಾರಿದೆ. ಇದನ್ನೂ ಓದಿ: ಗ್ರಾಮದ ಜಾತ್ರೆಯಲ್ಲಿ ನೃತ್ಯ ಮಾಡಿ ರಂಜಿಸಿದ ಸಿದ್ದರಾಮಯ್ಯ
Advertisement
ಸುಳ್ಳುಗಳ ಹೊರತಾಗಿ ನಿಮ್ಮ ರಾಜಕೀಯ ನಡೆಯುವುದಿಲ್ಲ, ಅಲ್ವೇ ಸಿದ್ದರಾಮಯ್ಯ?
ಹಿಜಾಬ್ ವಿಚಾರದಲ್ಲಿ ಹಿಜಾಬ್ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದರು, ನ್ಯಾಯಾಲಯ ಇವರ ಹೇಳಿಕೆಗೆ ವಿರುದ್ಧವಾದ ತೀರ್ಪು ನೀಡಿತು.
ರಾಷ್ಟ್ರಧ್ವಜವೇ ಇರದ ಸ್ಥಂಭದಲ್ಲಿ ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾಕಿದ್ದಾರೆ ಎಂಬ ಸುಳ್ಳು ಹೇಳಿದರು.#ಬುರುಡೆರಾಮಯ್ಯ
— BJP Karnataka (@BJP4Karnataka) March 25, 2022
ಸಿದ್ದರಾಮಯ್ಯ ಹೇಳಿದ್ದೇನು?: ಹಿಜಬ್ ವಿವಾದಕ್ಕೆ ಬಿಜೆಪಿಯೇ ಕಾರಣ. ಹಿಂದೂ ಹೆಣ್ಣು ಮಕ್ಕಳು ತಲೆಯ ಮೇಲೆ ಬಟ್ಟೆ ಹಾಕಿ ಕೊಳ್ಳಲ್ವಾ? ಹಾಗೆಯೇ ಮುಸ್ಲಿಂ ಹೆಣ್ಣು ಮಕ್ಕಳೂ ಒಂದು ದುಪ್ಪಟ್ಟ ಹಾಕಿ ಕೊಳ್ಳುತ್ತಾರೆ ಅಂದರೆ ಅದರಲ್ಲಿ ತಪ್ಪೇನಿದೆ?. ಸ್ವಾಮೀಜಿಗಳೂ ತಲೆಯ ಮೇಲೆ ಬಟ್ಟೆ ಹಾಕುತ್ತಾರೆ ಅದನ್ನು ನೀವು ಪ್ರಶ್ನೆ ಮಾಡುತ್ತೀರಾ? ಇಂತಹ ವಿವಾದಗಳನ್ನು ಸೃಷ್ಟಿಸಿ ಅದನ್ನು ಅರಗಿಸಿ ಕೊಳ್ಳುತ್ತೇವೆ ಎಂದು ಬಿಜೆಪಿ ಅಂದುಕೊಂಡಿದೆ. ಆದರೆ, ಜನ ಬುದ್ದಿವಂತರು. ಜನರಿಗೆ ಬಿಜೆಪಿಯ ತಂತ್ರ ಅರ್ಥವಾಗಿದೆ ಎಂದು ತಿಳಿಸಿದ್ದಾರೆ.
Advertisement
ಸಂಘ ಪರಿವಾರದವರು ಅಲ್ಪ ಸಂಖ್ಯಾತರನ್ನು ಕೊಲೆ ಮಾಡಿದರೆ ಅವರಿಗೆ ಕಡಿಮೆ ಪರಿಹಾರ ಹಣ ಕೊಡ್ತಾರೆ. ಅದೇ ಮುಸ್ಲಿಮರು ಹಿಂದೂಗಳನ್ನು ಕೊಲೆ ಮಾಡಿದರೆ ಜಾಸ್ತಿ ಪರಿಹಾರ ಕೊಡ್ತಾರೆ. ಇಂತಹ ತಾರತಮ್ಯ ಏಕೆ? ಇಂತಹ ವರ್ತನೆಯಿಂದ ಮತ ಕ್ರೂಢೀಕರಣ ಆಗುತ್ತದೆ ಎಂಬ ಬಿಜೆಪಿ ಲೆಕ್ಕಾಚಾರ ಉಲ್ಟಾ ಆಗುತ್ತೆ ನೋಡಿ ಎಂದು ಹೇಳಿದ್ದಾರೆ.