ಬೆಂಗಳೂರು: ಸಿದ್ದರಾಮಯ್ಯ ಅವರೇ ಶ್ಯಾಮನೂರು ಶಿವಶಂಕರಪ್ಪ ಅವರದ್ದು ಕಾಂಗ್ರೆಸ್‍ನಲ್ಲಿ ಎಷ್ಟನೇ ಬಣ ಎಂದು ಬಿಜೆಪಿ ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ನಾನೇ ಆಗಿರುತ್ತೇನೆ. ದಾವಣಗೆರೆ ದಕ್ಷಿಣದಿಂದ ಮುಂದೆ ಸ್ಪರ್ಧಿಸುವುದಕ್ಕೆ ನನ್ನ ಬಳಿ ಹಣ ಇಲ್ವಾ? ನನ್ನ ಬಳಿ ಶಕ್ತಿ ಇಲ್ವಾ? ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ ನಾನು ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದೇನೆ. ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ನನ್ನದು ಕೂಡ ಸ್ಪರ್ಧೆ ಇದೆ ಎಂದು ಕಾಂಗ್ರೆಸ್ ಹಿರಿಯ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದರು. ಇದನ್ನೂ ಓದಿ: ರಾಜ್ಯಸಭೆಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮನಿರ್ದೇಶನ – ಅವಿರೋಧವಾಗಿ ಆಯ್ಕೆಯಾಗಲಿರುವ ಬಜ್ಜಿ
Advertisement
Advertisement
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಸಿದ್ದರಾಮಯ್ಯರೇ, ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಬಣವಿದೆ? ಸೋನಿಯಾ ಗಾಂಧಿ ಬಣದ ವಿಚಾರ ಬಿಡಿ, ಅದು ಜಿ23 ಮೂಲಕ ಜಗಜ್ಜಾಹೀರಾಗಿದೆ. ರಾಜ್ಯ ಕಾಂಗ್ರೆಸ್‍ನಲ್ಲಿರುವ ಬಣಗಳ ಸಂಖ್ಯೆ ಎಷ್ಟು? ಪರಿಷತ್ ವಿಪಕ್ಷ ನಾಯಕರೊಂದಿಗೆ ನಿಮ್ಮ ಸೌಹಾರ್ದ ಸಂಬಂಧ ಹೇಗಿದೆ ಎಂದು ಸ್ವಲ್ಪ ವಿವರಿಸಬಹುದೇ ಎಂದು ಕೇಳುವ ಮೂಲಕ ಕಾಂಗ್ರೆಸ್ ಕಾಲೆಳೆದಿದೆ.
Advertisement
Advertisement
ಸಿದ್ದರಾಮಯ್ಯನವರೇ, ರಾಜ್ಯದಲ್ಲಿರುವ ನಿಮ್ಮ ಬಣಗಳಿಂದ ಕಾಂಗ್ರೆಸ್ ಪಕ್ಷ ಬುಸುಗುಡುತ್ತಿರುವುದು ನಿಮಗೆ ತಿಳಿಯದ ವಿಚಾರವೇ? ಡಿಕೆಶಿ ಬಣ, ಖರ್ಗೆ ಬಣ, ಹರಿಪ್ರಸಾದ್ ಬಣ, ಪರಮೇಶ್ವರ್ ಬಣ. ಮೇಲ್ನೋಟಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣ ಕಾದಾಡುತ್ತಿದ್ದರೂ, ಇದರ ಲಾಭ ಪಡೆಯಲು ಹಲವಾರು ಬಣಗಳು ಹೊಂಚು ಹಾಕುತ್ತಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮುಂದಿನ ಮುಖ್ಯಮಂತ್ರಿ ನಾನೇ: ಶಾಮನೂರು ಶಿವಶಂಕರಪ್ಪ
ಸಿದ್ದರಾಮಯ್ಯನವರೇ, ರಾಜ್ಯದಲ್ಲಿರು ನಿಮ್ಮ ಬಣಗಳಿಂದ ಕಾಂಗ್ರೆಸ್ ಪಕ್ಷ ಬುಸುಗುಡುತ್ತಿರುವುದು ನಿಮಗೆ ತಿಳಿಯದ ವಿಚಾರವೇ?
????ಡಿಕೆಶಿ ಬಣ
????ಖರ್ಗೆ ಬಣ
????ಹರಿಪ್ರಸಾದ್ ಬಣ
????ಪರಮೇಶ್ವರ್ ಬಣ
ಮೇಲ್ನೋಟಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣ ಕಾದಾಡುತ್ತಿದ್ದರೂ, ಇದರ ಲಾಭ ಪಡೆಯಲು ಹಲವಾರು ಬಣಗಳು ಹೊಂಚು ಹಾಕುತ್ತಿವೆ.#ಕಾಂಗ್ರೆಸ್‌ಕಲಹ
— BJP Karnataka (@BJP4Karnataka) March 21, 2022
ಸಿದ್ದರಾಮಯ್ಯ ಮತ್ತು ಡಿಕೆಶಿ ಮಾತ್ರ ಮುಖ್ಯಮಂತ್ರಿಯಾಗಬೇಕೇ? ನನ್ನ ಬಳಿಯೂ ದುಡ್ಡಿದೆ. ನಾನು ಸಿಎಂ ಆಗುತ್ತೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಅವರು ಹೇಳಿದ್ದಾರೆ. ಸಿದ್ದರಾಮಯ್ಯನವರೇ, ಇವರದು ಎಷ್ಟನೇ ಬಣ ಎಂದು ಪ್ರಶ್ನಿಸಿದ್ದಾರೆ.