ಆರ್‌ಎಸ್‌ಎಸ್‌ ಸದಸ್ಯನಾಗಿದ್ದ ಡಿಕೆಶಿಯವರೇ ಸಿದ್ದರಾಮಯ್ಯನವರ ಮಾತನ್ನು ಒಪ್ಪುತ್ತೀರಾ – ಬಿಜೆಪಿ ಪ್ರಶ್ನೆ

Public TV
1 Min Read
siddaramaia dk shivakumar

ಬೆಂಗಳೂರು:  ತಾಲಿಬಾನ್ ಅನ್ನುವ ಸಿದ್ದರಾಮಯ್ಯ ಹೇಳಿಕೆಗೆ ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿ ಈಗ ತಿರುಗೇಟು ನೀಡಿದೆ.

ನಾನು ಆರ್‌ಎಸ್‌ಎಸ್‌ ಸದಸ್ಯನಾಗಿದ್ದ ಡಿಕೆಶಿಯವರೇ ಸಿದ್ದರಾಮಯ್ಯನವರ ಮಾತನ್ನು ಒಪ್ಪುತ್ತೀರಾ – ಬಿಜೆಪಿ ಪ್ರಶ್ನೆ ಶಾಖೆಯ ಸದಸ್ಯನಾಗಿದ್ದೆ. ನಮಸ್ತೇ ಸದಾ ವತ್ಸಲೆ ಗೀತೆಯನ್ನೂ ಹಾಡಿದ್ದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಅದು ನಿಮ್ಮ ಹೇಳಿಕೆ ಅಲ್ಲವೇ? ಈಗ ನಿಮ್ಮ ಪಟಾಲಂಗಳ ಬಾಯಿಯಿಂದ ಹೊರಡುತ್ತಿರುವ ಮಾತುಗಳನ್ನು ನೀವು ಒಪ್ಪಿಕೊಳ್ಳುವಿರಾ? ನಿಮ್ಮನ್ನು ಅಡಕತ್ತರಿಯಲ್ಲಿ ಸಿಲುಕಿಸುವ ಹುನ್ನಾರವಿದು ಎಂದಿದೆ. ಇದನ್ನೂ ಓದಿ: ಆರ್‌ಎಸ್‌ಎಸ್‌ ಕೂಡಾ ತಾಲಿಬಾನ್ ಸಂಘಟನೆಯಂತೆ: ಧ್ರುವ ನಾರಾಯಣ್

ಸಿದ್ದರಾಮಯ್ಯ ಅವರ ತಾಲಿಬಾನ್ ಹೇಳಿಕೆಯನ್ನು ಕಾಂಗ್ರೆಸ್ ಒಪ್ಪುತ್ತದೆಯೇ? ಕೆಪಿಸಿಸಿ ಅಧ್ಯಕ್ಷರಾಗಿ ಈ ಹೇಳಿಕೆಯನ್ನು ದೃಢೀಕರಿಸುತ್ತಾರೆಯೇ? ಕೆಪಿಸಿಸಿ ಅಧ್ಯಕ್ಷರೇ, ಹಿಂದೂಗಳ ಭಾವನೆ ಕೆಣಕುವ ಸಿದ್ದರಾಮಯ್ಯ ಚಾಳಿಗೆ ನೀವೂ ಕೈ ಜೋಡಿಸುತ್ತೀರಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದೆ. ಇದನ್ನೂ ಓದಿ: ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ನೈತಿಕ ಹಕ್ಕು ಸಿದ್ದರಾಮಯ್ಯಗಿಲ್ಲ : ಮಹಾಂತೇಶ್ ಕವಟಗಿಮಠ

ಕಾಂಗ್ರೆಸ್ ಪಕ್ಷದ ಬೌದ್ಧಿಕ ಸಾಮಥ್ರ್ಯ ವಿಸ್ತಾರಗೊಳಿಸಿದ ಮಾಜಿ ರಾಷ್ಟ್ರಪತಿ ದಿ. ಪ್ರಣಬ್ ಮುಖರ್ಜಿ ಅವರು ಸಂಘ ಕಾರ್ಯಕ್ರಮಕ್ಕೆ ಭೇಟಿ ನೀಡಿ ಸೇವಾ ಕಾರ್ಯವನ್ನು ಶ್ಲಾಘಿಸಿದ್ದರು. ಆರ್‍ಎಸ್‍ಎಸ್ ಕಾರ್ಯಕ್ರಮಗಳನ್ನು ಮೆಚ್ಚಿ ಹೊಗಳಿದ್ದರು. ಹಾಗಾದರೆ ಜೆಡಿಎಸ್ ಬಿಟ್ಟು ವಲಸೆ ಬಂದಿರುವ ಸಿದ್ದರಾಮಯ್ಯ ಅವರಿಗೆ ನೈಜ ಕಾಂಗ್ರೆಸ್ಸಿಗರ ಬಗ್ಗೆ ಗೌರವವಿಲ್ಲ ಎಂದಾಯ್ತಲ್ಲವೇ? ಎಂದು ಬಿಜೆಪಿ ಟ್ವೀಟ್ ಮಾಡುವ ಮೂಲಕ ಟಾಂಗ್ ಕೊಟ್ಟಿದೆ.

ಭಾರತೀಯ ಹಿಂದೂ ಪರಿಷತ್ (ಬಿಎಚ್‍ಪಿ) ಸ್ಥಾಪಿಸುವುದಾಗಿ ಕಾಂಗ್ರೆಸ್ ಹೇಳಿತ್ತು. ಕೇಡರ್ ಮಾದರಿಯಲ್ಲಿ ಪಕ್ಷ ಸಂಘಟಿಸುತ್ತೇವೆ ಎಂದಿತ್ತು. ಪ್ರೇರಕ್ ಸೃಷ್ಟಿಸುತ್ತೇವೆ ಎಂದಿತ್ತು ಸಂದರ್ಭಾನುಸಾರವಾಗಿ ಪ್ರಶಂಸೆ ವ್ಯಕ್ತಪಡಿಸಿದ್ದ ಕಾಂಗ್ರೆಸ್, ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದೇ ಎಂದು ಮರು ಪ್ರಶ್ನೆಯನ್ನು ಹಾಕಿದೆ.

Share This Article
Leave a Comment

Leave a Reply

Your email address will not be published. Required fields are marked *