– ಅಂಬಿ ಭೇಟಿಯಾದ ಬಿಜೆಪಿ ಅಭ್ಯರ್ಥಿ
ಮಂಡ್ಯ: ಇಲ್ಲಿನ ಲೋಕಸಭಾ ಉಪಚುನಾವಣೆಯ ಕಾವು ಜೋರಾಗಿದ್ದು, ಈ ಬಾರಿಯಾದ್ರೂ ಕಮಲ ಅರಳಿಸಲೇ ಬೇಕು ಅಂತ ಬಿಜೆಪಿ ಇನ್ನಿಲ್ಲದ ಕಸರತ್ತು ಮಾಡ್ತಿದೆ.
ಮೈತ್ರಿ ಒಪ್ಪಂದದಂತೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್, ಜೆಡಿಎಸ್‍ಗೆ ಬಿಟ್ಟುಕೊಟ್ಟಿದೆ. ಆದ್ರೆ ಇಲ್ಲಿ ಮೊದಲಿನಿಂದ್ಲೂ ಜೆಡಿಎಸ್- ಕಾಂಗ್ರೆಸ್ ಬದ್ಧವೈರಿಗಾಳಾಗಿ ಚುನಾವಣೆ ಎದುರಿಸಿದ್ದವು. ಹೀಗಾಗಿ ದೋಸ್ತಿ ಅಭ್ಯರ್ಥಿ ಶಿವರಾಮೇಗೌಡಗೆ ನಮ್ಮ ಬೆಂಬಲವಿಲ್ಲ ಅಂತ ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಹೇಳ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಅಭ್ಯರ್ಥಿ ಸಿದ್ದರಾಮಯ್ಯ ಮಂಡ್ಯದಲ್ಲಿ ಕಮಲ ಅರಳಿಸಲು ಕಸರತ್ತು ಆರಂಭಿಸಿದ್ದಾರೆ. ಇದನ್ನು ಓದಿ: ಶಿವರಾಮೇಗೌಡ್ರಿಗೆ ಯಾವುದೇ ಕಾರಣಕ್ಕೂ ವೋಟ್ ಹಾಕಲ್ಲ: ರಮ್ಯಾ ಅಭಿಮಾನಿಗಳು
ಪ್ರತಿದಿನ ಕಾಂಗ್ರೆಸ್ ನಾಯಕರ ಮನೆಗೆ ತೆರಳಿ ಸಹಕಾರ ಯಾಚಿಸ್ತಿದ್ದಾರೆ. ಜೊತೆ ಮಂಡ್ಯದ ಗಂಡು ಅಂಬರೀಶ್ ಅವರನ್ನೂ ಭೇಟಿಯಾಗಿ ಬೆಂಬಲ ಕೋರೋದಾಗಿ ಹೇಳ್ತಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿಗೆ ಬಹುತೇಕ ಕಾಂಗ್ರೆಸ್ ಮುಖಂಡರು ಖುಷಿಯಿಂದಲೇ ಸಹಕಾರ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಆದ್ರೆ ಜೆಡಿಎಸ್ ಮುಖಂಡರು ಮಾತ್ರ, ಚುನಾವಣೆ ಸಮಯದಲ್ಲಿ ಎಲ್ಲ ಪಕ್ಷದ ಅಭ್ಯರ್ಥಿಗಳು ಬೇರೆ ಪಕ್ಷದ ಮುಖಂಡರನ್ನು ಭೇಟಿ ಮಾಡುವುದು ಸಹಜ. ಸಿದ್ದರಾಮಯ್ಯ ಕೇಳಿದ್ರು ಅಂತ ಕಾಂಗ್ರೆಸ್ ನಾಯಕರು ಜೆಡಿಎಸ್ ಅಭ್ಯರ್ಥಿಯನ್ನು ಕೈ ಬಿಡಲ್ಲ ಅಂತ ಹೇಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv