ಬೆಂಗಳೂರು: ಐಟಿ ದಾಳಿಯಲ್ಲಿ ಸಿಕ್ಕ ನೂರಾರು ಕೋಟಿ ರೂ. ಹಣ ಮೂಲದ ವಿಚಾರವಾಗಿ ಬಿಜೆಪಿಯಿಂದ ಪೋಸ್ಟರ್ ವಾರ್ ಮುಂದುವರಿದಿದೆ. ಇವತ್ತೂ ಕೂಡಾ ಸಚಿವರಿಗೆ ಎಷ್ಟೆಷ್ಟು ಕಲೆಕ್ಷನ್ ಟಾಸ್ಕ್ ಕೊಡಲಾಗಿದೆ ಅಂತ ಟ್ವೀಟ್ ಮೂಲಕ ಬಿಜೆಪಿ (BJP) ಟಕ್ಕರ್ ಕೊಟ್ಟಿದೆ. ಅಷ್ಟೇ ಅಲ್ಲ ಕಮೀಷನ್ ಕಲೆಕ್ಷನ್‍ಗೆ ವಾಮಮಾರ್ಗಗಳನ್ನೂ ಬಿಜೆಪಿ ಉಲ್ಲೇಖಿಸಿ ಟಾಂಗ್ ಕೊಟ್ಟಿದೆ.
ಕಾಂಗ್ರೆಸ್‌ನ ಪಾಲಿಗೆ ಕರ್ನಾಟಕ ಎಂದಿಗೂ ಮುಚ್ಚದ ATM.
ಆಗುವ ಕಲೆಕ್ಷನ್‌ನಲ್ಲಿ ಸೋರಿಕೆಯಾಗಿ ದೆಹಲಿಗೆ ಕಳಿಸುವುದರಲ್ಲಿ ಯಾವುದೇ ಕೊರತೆಯಾಗಬಾರದು ಎಂಬ ದೃಷ್ಟಿಯಿಂದ @siddaramaiah ಅವರ ಸರ್ಕಾರ ಪ್ರತಿ ಸಚಿವಾಲಯಕ್ಕೂ ತಿಂಗಳ ಕಲೆಕ್ಷನ್ ಟಾರ್ಗೆಟ್ ನಿಗದಿ ಮಾಡಿದೆ.#ATMSarkara#CongressLootsKarnataka pic.twitter.com/VqzhsgmpDK
— BJP Karnataka (@BJP4Karnataka) October 18, 2023
Advertisement
ಐಟಿ (Income Tax) ಪತ್ತೆ ಮಾಡಿದ ಹಣದ ಮೂಲವನ್ನು ಬಿಜೆಪಿ ಮತ್ತೆ ಕೆಣಕಿ ಕಾಂಗ್ರೆಸ್‍ಗೆ ತಿರುಗೇಟು ಕೊಟ್ಟಿದೆ. ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬಿಜೆಪಿ ಸಚಿವರಿಗೆ ಹಣದ ಕಲೆಕ್ಷನ್‍ಗೆ ಕೊಟ್ಟಿರುವ ಟಾಸ್ಕ್ ಬಗ್ಗೆ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಕಾಂಗ್ರೆಸ್‍ಗೆ ತಿವಿದಿದೆ. ಇಲಾಖಾವಾರು ಕಲೆಕ್ಷನ್ ಮೊತ್ತದ ವಿವರ ಇರುವ ಸ್ಲೇಟ್‍ಗಳನ್ನು ಹಿಡಿದ ಸಚಿವರ ಭಾವಚಿತ್ರ ಹಾಕಿ ಬಿಜೆಪಿ ಪೋಸ್ಟರ್ ರಿಲೀಸ್ ಮಾಡಿದೆ. ದೆಹಲಿಗೆ ಹಣ ಕಳಿಸುವ ಸಲುವಾಗಿ ಸರ್ಕಾರ ಪ್ರತಿ ಸಚಿವಾಲಯಕ್ಕೂ ಸರ್ಕಾರ ತಿಂಗಳ ಕಲೆಕ್ಷನ್ ಟಾರ್ಗೆಟ್ ನಿಗದಿ ಮಾಡಿದೆ ಎಂದು ಟ್ವೀಟ್‍ನಲ್ಲಿ ಟಾಂಗ್ ಕೊಟ್ಟಿದೆ. ಇದನ್ನೂ ಓದಿ: ಇಳಿವಯಸ್ಸಿನಲ್ಲೂ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡಿ ಸರ್ಕಾರಕ್ಕೆ ಚಾಟಿ ಬೀಸಿದ ಗ್ರಾಪಂ ಸದಸ್ಯ
Advertisement
Advertisement
ಬಿಜೆಪಿ ಪ್ರಕಾರ ಇಲಾಖಾವಾರು ಕಲೆಕ್ಷನ್ ಟಾಸ್ಕ್
* ಡಿ.ಕೆ. ಶಿವಕುಮಾರ್- ಬೆಂಗಳೂರು ನಗರಾಭಿವೃದ್ಧಿ 250 ಕೋಟಿ ರೂ.
* ಆರ್.ಬಿ. ತಿಮ್ಮಾಪುರ- ಅಬಕಾರಿ ಇಲಾಖೆ 150 ಕೋಟಿ ರೂ.
* ಸತೀಶ್ ಜಾರಕಿಹೊಳಿ- ಲೋಕೋಪಯೋಗಿ ಇಲಾಖೆ 115 ಕೋಟಿ ರೂ.
* ಪ್ರಿಯಾಂಕ್ ಖರ್ಗೆ- ಗ್ರಾಮೀಣ ಅಭಿವೃದ್ಧಿ ಇಲಾಖೆ 100 ಕೋಟಿ ರೂ.
* ದಿನೇಶ್ ಗೂಂಡುರಾವ್- ಆರೋಗ್ಯ ಇಲಾಖೆ 75 ಕೋಟಿ ರೂ.
* ಚೆಲುವರಾಯ ಸ್ವಾಮಿ- ಕೃಷಿ ಇಲಾಖೆ 125 ಕೋಟಿ ರೂ.
* ಹೆಚ್.ಸಿ.ಮಹದೇವಪ್ಪ- ಸಮಾಜ ಕಲ್ಯಾಣ ಇಲಾಖೆ 5 ಕೋಟಿ ರೂ.
* ಕೃಷ್ಣಭೈರೇಗೌಡ- ಕಂದಾಯ ಇಲಾಖೆ 90 ಕೋಟಿ ರೂ.
Advertisement
ಬಿಜೆಪಿ ಟಕ್ಕರ್ ಇಲ್ಲಿಗೆ ನಿಂತಿಲ್ಲ. ಈ ಕಲೆಕ್ಷನ್ ಟಾಸ್ಕ್ ಮುಟ್ಟಲು ಯಾವೆಲ್ಲ ವಾಮಮಾರ್ಗಗಳನ್ನು ಸರ್ಕಾರ ಆಯ್ಕೆ ಮಾಡಿಕೊಂಡಿದೆ ಅಂತಲೂ ಬಿಜೆಪಿ ಟ್ವಿಟ್ಟರ್ ಮೂಲಕ ಮಾಹಿತಿ ಕೊಟ್ಟಿದೆ. ಅದರಂತೆ, ಕೃಷಿ ಅಧಿಕಾರಿಗಳಿಂದ, ಅಬಕಾರಿ ಅಧಿಕಾರಿಗಳಿಂದ, ಗುತ್ತಿಗೆದಾರರಿಂದ, ಅಧಿಕಾರಿಗಳಿಂದ ದಸರಾ ಕಮೀಷನ್ ಹಾಗೂ ಶ್ಯಾಡೋ ಸಿಎಂ ಮೂಲಕ ವರ್ಗಾವಣೆ ಕಮೀಷನ್‍ಗಳಂಥ ವಾಮಮಾರ್ಗಗಳನ್ನು ಸರ್ಕಾರ ಆಯ್ಕೆ ಮಾಡಿಕೊಂಡಿದೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ.
ಕಾಂಗ್ರೆಸ್ (Congress) ಬಂದಿದೆ ಲೂಟಿ ಮಾಡುತ್ತಿದೆ ಅಂತ ಟೀಕಿಸಿರುವ ಬಿಜೆಪಿ, ಕಲೆಕ್ಷನ್ ಉಚಿತ, ಕಮಿಷನ್ ಖಚಿತ, ಕರಪ್ಷನ್ ನಿಶ್ಚಿತ ಎಂದು ಡಿಸಿಎಂ ಡಿಕೆಶಿಯವರ ಹಳೆಯ ಹೇಳಿಕೆಗೂ ಟಕ್ಕರ್ ಕೊಟ್ಟಿದೆ. ಒಟ್ಟಿನಲ್ಲಿ ಐಟಿ ದಾಳಿ ಬಳಿಕ ಬಿಜೆಪಿ ಉತ್ಸಾಹಭರಿತವಾಗಿ ಕಾಂಗ್ರೆಸ್ ವಿರುದ್ಧ ಪೋಸ್ಟರ್ ವಾರ್ ತೀವ್ರಗೊಳಿಸಿದ್ದು, ಹಿಂದಿನ ಪೇಸಿಎಂ ಅಭಿಯಾನದ ಡ್ಯಾಮೇಜ್ ಸೇಡು ತೀರಿಸಿಕೊಳ್ಳುವ ಉಮೇದಿಯಲ್ಲಿದೆ.
Web Stories