ಬೆಂಗಳೂರು: ಕೊನೆಗೂ ಬಿಜೆಪಿ ರಾಜ್ಯಾಧ್ಯಕ್ಷ (BJP President) ನೇಮಕ ಮಾಡಿದರೂ ಕಮಲ ಪಾಳಯದಲ್ಲಿ ಬೇಗುದಿ ಇನ್ನೂ ಶಮನವಾಗಿಲ್ಲ. ವಿಜಯೇಂದ್ರಗೆ (BY Vijayendra) ಪಕ್ಷದ ಚುಕ್ಕಾಣಿ ಕೊಟ್ಟ ನಂತರ ಹಿರಿಯರ ಅಸಮಾಧಾನ ಇನ್ನಷ್ಟು ಹೆಚ್ಚಾಗಿದ್ದು ರಾಜ್ಯಾಧ್ಯಕ್ಷ ಸ್ಥಾನ ಭರ್ತಿ ಬಳಿಕ ಬಿಜೆಪಿಯಲ್ಲಿ ಒಳಗೊಳಗೇ ಕೋಪ, ತಾಪ ಮುನಿಸು ಜೋರಾಗಿದೆ.
ಕಾರ್ಯಕರ್ತರು, ಮೂರನೇ ಹಂತದ ಮುಖಂಡರಿಗೆ ಸಂಭ್ರಮ ಒಂದು ಕಡೆ ಆದರೆ ಆದರೆ ರಾಜ್ಯಾಧ್ಯಕ್ಷ ಪಟ್ಟದ ಮೇಲೆ ಕಣ್ಣಿಟ್ಟಿದ್ದ ಹಿರಿಯ ನಾಯಕರ ಬೇಗುದಿಯಿಂದಾಗಿ ಕಮಲ ಮನೆ ಬೂದಿ ಮುಚ್ಚಿದ ಕೆಂಡದಂತಾಗಿದೆ.
Advertisement
Advertisement
ರಾಜ್ಯಾಧ್ಯಕ್ಷ ಹುದ್ದೆಯ ಬಿಸಿ ಇರುವಾಗಲೇ ವಿಪಕ್ಷ ನಾಯಕನ (Opposition Leader) ನೇಮಕಕ್ಕೂ ಮುಹೂರ್ತ ಫಿಕ್ಸ್ ಆಗಿದೆ. ಇದೇ ಶುಕ್ರವಾರ ವಿಪಕ್ಷ ನಾಯಕನ ಆಯ್ಕೆ ಮಾಡಲು ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಲಿಂಗಾಯತ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದ ಹಿನ್ನೆಲೆ ಇದೀಗ ವಿಪಕ್ಷ ನಾಯಕ ಸ್ಥಾನಕ್ಕೆ ಭಾರೀ ಪೈಪೋಟಿ ಎದುರಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಗ್ನಿ ಅವಘಡ – ಐಟಿ ಕಂಪನಿ ಭಾಗಶಃ ಭಸ್ಮ
Advertisement
ಒಬಿಸಿ ಮತ್ತು ಒಕ್ಕಲಿಗ ಸಮುದಾಯಗಳ ನಾಯಕರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಮತ್ತೊಂದು ಉನ್ನತ ಸ್ಥಾನವಾದ ವಿಪಕ್ಷ ನಾಯಕನಾಗಲು ಹಲವರು ಕಸರತ್ತು ನಡೆಸುತ್ತಿದ್ದು. ಶಾಸಕರಾದ ಸುನೀಲ್ ಕುಮಾರ್ ಒಬಿಸಿ ಪ್ರತಿನಿಧಿಸುತ್ತಿದ್ದರೆ, ಒಕ್ಕಲಿಗ ಸಮಯದಾಯದಿಂದ ಮೂವರ ಮಧ್ಯೆ ಪೈಪೋಟಿ ಇದೆ. ವಿಪಕ್ಷ ನಾಯಕ ಹುದ್ದೆ ಮೇಲೆ ಒಕ್ಕಲಿಗ ಶಾಸಕರಾದ ಅಶ್ವಥ್ ನಾರಾಯಣ, ಆರಗ ಜ್ಞಾನೇಂದ್ರ, ಆರ್.ಅಶೋಕ್ ಕಣ್ಣಿಟ್ಟಿದ್ದಾರೆ.