ಹುಬ್ಬಳ್ಳಿ: ಈಗಾಗಲೇ ನಾವು ಎರಡೂ ರಾಜ್ಯಗಳಲ್ಲಿ ಗೆಲುವಿನತ್ತ ಮುಂದುವರೆದಿದ್ದೇವೆ ಎಂದು ವಿಧಾನ ಸಭೆಯ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.
ನಾವು ಎರಡೂ ರಾಜ್ಯಗಳಲ್ಲಿ ಬಹುಮತ ಸಾಧಿಸುತ್ತೇವೆ. ಅದು ಮೋದಿಯವರ ಸಾಧನೆ ನೋಡಿ ಜನರು ಮನ್ನಣೆ ಹಾಕಿದ್ದಾರೆ. ಕಾಂಗ್ರೆಸ್ ನಲ್ಲಿ ತಳಮಳ ಶುರುವಾಗಿದೆ ಹಾಗೂ ಇಡೀ ದೇಶ ಬಿಜೆಪಿ ಮಯವಾಗುತ್ತದೆ. ಕೆಲವು ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಇರಬಹುದು. ಮುಂದಿನ ದಿನಗಳಲ್ಲಿ ಅಲ್ಲೂ ಕಮಲ ಅರಳಲಿದೆ. ಈ ಚುನಾವಣೆ ರಾಜ್ಯದ ಮೇಲೆ ಸಾಕಷ್ಟು ಪರಿಣಾಮ ಬಿರುತ್ತೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
Advertisement
Advertisement
ನಾವು ಕಳೆದ ಬಾರಿಗಿಂತ ಹೆಚ್ಚಿನ ಸೀಟುಗಳಿಸುತ್ತವೋ ಬಿಡುತ್ತೆವೋ ಗೊತ್ತಿಲ್ಲ. ಆದರೆ ಗುಜರಾತ್ ನಲ್ಲಿ ನಾವು ಸರಳ ಬಹುಮತ ಪಡೆಯುತ್ತೇವೆ. ಗುಜರಾತ್ ನಲ್ಲಿ ಮೋದಿ ವಿರುದ್ಧ ಕೆಟ್ಟ ಅಪಪ್ರಚಾರ ಮಾಡಿದರು. ಆದರೂ ಏನು ವರ್ಕೌಟ್ ಆಗಲಿಲ್ಲ. ಜಿಎಸ್ ಟಿ, ನೋಟ್ ಬ್ಯಾನ್ ಗೆ ಜನ ವಿರೋಧಿಸಿಲ್ಲ. ವಿರೋಧಿಸಿದರೆ ಗುಜರಾತ್ ನಲ್ಲಿ ನಮಗೆ ಇಷ್ಟೊಂದು ಸೀಟುಗಳು ಬರುತ್ತಿರಲಿಲ್ಲ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.