ಪ್ರಧಾನಿ ಮೋದಿ ಸರ್ಕಾರಕ್ಕೆ ನಾಲ್ಕರ ಸಂಭ್ರಮ- 15 ದಿನಗಳ ವಿಶೇಷ ಅಭಿಯಾನಕ್ಕೆ ಬಿಜೆಪಿ ಸಿದ್ಧತೆ

Public TV
1 Min Read
MODI AMITH

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇಂದಿಗೆ 4 ವರ್ಷ. ನಾಲ್ಕು ವರ್ಷಗಳ ಹಿಂದೆ ಭರ್ಜರಿ ಜಯಭೇರಿಯೊಂದಿಗೆ ಪಟ್ಟವೇರಿದ್ದ ಪ್ರಧಾನಿ ನರೇಂದ್ರ ಮೋದಿ ಇದೇ ದಿನ ಪ್ರಮಾಣ ವಚನ ಸ್ವೀಕರಿಸಿದ್ದರು.

ಈ ನಾಲ್ಕು ವರ್ಷಗಳ ಸುದೀರ್ಘ ಪ್ರಯಾಣದ ಸ್ಮರಣಾರ್ಥವಾಗಿ ಬಿಜೆಪಿ 15 ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಾಳೆಯಿಂದ ಈ ಕಾರ್ಯಕ್ರಮ ಶುರುವಾಗಲಿದೆ.

npp yogi

ಇದರಲ್ಲಿ ಕೇಂದ್ರ ಮತ್ತು ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ರಾಜ್ಯಗಳ ಸಚಿವರು, ಸಂಸದರು, ಎಂಎಲ್‍ಎಗಳು, ಮೇಯರ್ ಗಳು ಸೇರಿದಂತೆ ಬಿಜೆಪಿ ನಾಯಕರು ದೇಶದಾದ್ಯಂತ ವಿವಿಧ ವರ್ಗಗಳ, ಸಮುದಾಯಗಳ ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಿ, ತಮ್ಮ ಸರ್ಕಾರದ ಸಾಧನೆಯನ್ನು ವಿವರಿಸಲಿದ್ದಾರೆ.

ಪ್ರತಿಯೊಬ್ಬ ನಾಯಕನೂ ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು, ನಿವೃತ್ತ ಸೈನಿಕರು, ಕ್ರೀಡಾಪಟುಗಳು, ಬರಹಗಾರರು ಹೀಗೆ ವಿವಿಧ ಕ್ಷೇತ್ರಗಳ 25 ಮಂದಿಗೆ ಮೋದಿ ಸರ್ಕಾರದ ಸಾಧನೆ ವಿವರಿಸುವ ಹೊಣೆ ಹೊತ್ತಿದ್ದಾರೆ. ಅಲ್ಲದೆ ಇದಕ್ಕಾಗಿ ಹಲವು ಸಂವಾದ, ಸಮಾರಂಭಗಳನ್ನೂ ಏರ್ಪಡಿಸುವಂತೆ ಸೂಚಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *