ಬೆಂಗಳೂರು: ಯುಗಾದಿ ಬಳಿಕ ಸರ್ಕಾರದ ವಿರುದ್ಧ ಬಿಜೆಪಿ (BJP) ವತಿಯಿಂದ ಸರಣಿ ಹೋರಾಟಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಲು, ವಿದ್ಯುತ್, ನೀರಿನ ದರ ಏರಿಸಿದ ಸರ್ಕಾರದ ವಿರುದ್ಧ ಬಿಜೆಪಿ ಅಹೋರಾತ್ರಿ ಹೋರಾಟಕ್ಕೆ ಮುಂದಾಗಿದೆ.
ಏ. 2ರಂದು ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ಬೆಲೆ ಏರಿಕೆ ವಿರುದ್ಧ ಅಹೋರಾತ್ರಿ ಧರಣಿ ಪ್ರಾರಂಭ ಆಗಲಿದೆ. ಪಕ್ಷದ ಶಾಸಕರು, ಸಂಸದರು, ಪರಿಷತ್ ಸದಸ್ಯರು, ಪದಾಧಿಕಾರಿಗಳಿಗೆ ಹೋರಾಟದಲ್ಲಿ ಭಾಗವಹಿಸಲು ಸೂಚಿಸಲಾಗಿದೆ. ಇದನ್ನೂ ಓದಿ: ಯತ್ನಾಳ್ ಉಚ್ಛಾಟನೆಗೆ ನಾನು ಹೊಣೆ ಅಲ್ಲ: ವಿಜಯೇಂದ್ರ
ಏ. 4ರಂದು ಜಿಲ್ಲಾ ಕೇಂದ್ರಗಳಲ್ಲಿ, 5ರಂದು ಮಂಡಲಗಳಲ್ಲಿ ಸರ್ಕಾರದ ಬೆಲೆಯೇರಿಕೆ ವಿರುದ್ಧ ಪ್ರತಿಭಟನೆಗೆ ತೀರ್ಮಾನಿಸಲಾಗಿದೆ. ಜೊತೆಗೆ 18 ಶಾಸಕರ ಅಮಾನತು ಖಂಡಿಸಿ ಏ. 2ರಂದು ವಿಧಾನಸೌಧದ ಕೆಂಗಲ್ ಗೇಟ್ ಬಳಿ ಧರಣಿಗೂ ಬಿಜೆಪಿ ಮುಂದಾಗಿದೆ. ಸ್ಪೀಕರ್ ತೀರ್ಮಾನ ಸಂವಿಧಾನ ವಿರೋಧಿ ನಡೆ, ಜನವಿರೋಧಿ ನಡೆ ಎಂದು ಖಂಡಿಸಿ ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಮಾಟಮಂತ್ರದ ಹೆಸರಿನಲ್ಲಿ ವ್ಯಕ್ತಿಯ ಶಿರಶ್ಛೇದನ – ದೇಹವನ್ನು ಹೋಳಿಕಾ ದಹನ್‌ನಲ್ಲಿ ಸುಟ್ಟ ಆರೋಪಿಗಳು
ಇನ್ನೂ ಶಾಸಕರ ಅಮಾನತು ಖಂಡಿಸಿ ವಿಧಾನಸೌಧ ಸಮಿತಿಗಳ ಯಾವುದೇ ಸಭೆಗಳಲ್ಲಿ ಭಾಗವಹಿಸದಿರಲು ಬಿಜೆಪಿ ನಿರ್ಧರಿಸಿದೆ. ಅಮಾನತು ನಿರ್ಧಾರ ವಾಪಸ್ ಪಡೆಯುವವರೆಗೂ ಕಮಿಟಿ ಸಭೆಗಳಲ್ಲಿ ಭಾಗವಹಿಸದಂತೆ ಶಾಸಕರಿಗೆ ಪಕ್ಷದಿಂದ ಸಂದೇಶ ರವಾನಿಸಲಾಗಿದೆ. ಇದನ್ನೂ ಓದಿ: ಉಚ್ಚಾಟನೆಯಿಂದ ಮುಜುಗರ, ಹಿನ್ನಡೆ ಆಗಿಲ್ಲ – ಹೈಕಮಾಂಡ್ ಬಳಿ ಮರಿಪರಿಶೀಲನೆ ಮನವಿ ಮಾಡಲ್ಲ: ಯತ್ನಾಳ್
ಇದರ ಜೊತೆಗೆ ಮುಸ್ಲಿಮರಿಗೆ ಗುತ್ತಿಗೆಗಳಲ್ಲಿ ಮೀಸಲಾತಿ ಖಂಡಿಸಿ, ಏ. 10ರ ನಂತರ ಎಲ್ಲಾ ಬಿಜೆಪಿ ತಂಡಗಳಾಗಿ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಜನಾಂದೋಲನ ರೂಪಿಸಲು ನಿರ್ಧರಿಸಲಾಗಿದೆ.