ಬೆಂಗಳೂರು: ಭಾನುವಾರ ನವದೆಹಲಿಯಲ್ಲಿ ಬಿಜೆಪಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ 72 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಭಿನ್ನಮತ ಸ್ಫೋಟಗೊಂಡಿದೆ.
ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಆಕಾಂಕ್ಷಿಯಾಗಿದ್ದ ಎನ್.ಆರ್.ರಮೇಶ್ ಬದಲಾಗಿ ಉದಯ್ ಗರುಡಾಚಾರ್ ಟಿಕೆಟ್ ಸಿಕ್ಕಿದೆ. ತ್ತ ಎನ್.ಆರ್.ರಮೇಶ್ ಅವರಿಗೆ ಟಿಕೆಟ್ ಲಭಿಸದ ಹಿನ್ನೆಲೆಯಲ್ಲಿ ಕಾರ್ಯಕರ್ತರೆಲ್ಲಾ ಮಾಜಿ ಡಿಸಿಎಂ ಆರ್.ಅಶೋಕ್ ಮನೆ ಮುಂದೆ ಧರಣಿ ನಡೆದಿದ್ದಾರೆ. ಟಿಕೆಟ್‍ಗಾಗಿ ಭಿನ್ನಮತ ಸ್ಫೋಟಗೊಳ್ಳುತ್ತಿದ್ದಂತೆ ಫೇಸ್‍ಬುಕ್ ಮತ್ತು ವಾಟ್ಸಪ್ ಗಳಲ್ಲಿ ಕೆಲವು ಮೆಸೇಜ್ ಗಳು ಹರಿದಾಡಲು ಆರಂಭವಾಗಿವೆ. ಇದನ್ನೂ ಓದಿ: ಎನ್‍ಆರ್ ರಮೇಶ್‍ಗೆ ಟಿಕೆಟ್ ಸಿಗದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ!
Advertisement
Advertisement
ವೈರಲ್ ಮೇಸೆಜ್‍ನಲ್ಲಿ ಏನಿದೆ?
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಆರ್.ವಿ.ದೇವರಾಜ್ ಅವರೇ ತಮ್ಮ ಎದುರಾಳಿಯನ್ನು ನಿರ್ಧರಿಸಿಕೊಂಡಿದ್ದು, 2 ಕೋಟಿ ರೂ. ಹಣವನ್ನ ನೀಡಿ ಗೆಲವನ್ನು ಸುಲಭ ಮಾಡಿಕೊಂಡಿದ್ದಾರೆ ಎಂಬ ಬಿಸಿ ಬಿಸಿ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಆರಂಭವಾಗಿವೆ. ಟಿಕೆಟ್ ಗಾಗಿ ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ 2 ಕೋಟಿ ರೂ. ನೀಡಲಾಗಿದೆ ಎಂಬ ಮೆಸೇಜ್‍ಗಳು ಹರಿದಾಡುತ್ತಿವೆ. ಇದನ್ನೂ ಓದಿ: ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ
Advertisement
ಬಿಜೆಪಿ ವಿರುದ್ಧ ಮೆಸೇಜ್‍ಗಳು ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, 2 ಕೋಟಿಗೆ ಟಿಕೆಟ್ ಸೇಲ್ ಆಗಿದೆ ಎಂಬ ಆರೋಪಗಳೆಲ್ಲಾ ಸುಳ್ಳು. ಎನ್.ಆರ್.ರಮೇಶ್ ಹಾಗೆಲ್ಲಾ ಮಾತನಾಡಲ್ಲ. ಅವರನ್ನು ಕರೆಸಿಕೊಂಡು ನಾನು ಮಾತನಾಡಿ ತಪ್ಪು ಗ್ರಹಿಕೆಯಾಗಿದ್ರೆ ಅದನ್ನ ಸರಿಪಡಿಸುತ್ತೇನೆ. ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಅಸಮಾಧಾನವಿಲ್ಲ ಅಂತಾ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ 72 ಮಂದಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?