ಅಮಿತ್‌ ಶಾಗೆ ಹೂ ಗುಚ್ಛ ನೀಡಿ ಸ್ವಾಗತಿಸಿದ್ದ ಗೋವಿಂದ ಬಾಬು

Public TV
1 Min Read
Govind Babu Poojari

ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapur) ವಂಚನೆ ಪ್ರಕರಣ ಸಂಬಂಧ ದೂರು ನೀಡಿದ್ದ ಉದ್ಯಮಿ ಗೋವಿಂದ ಬಾಬು ಪೂಜಾರಿ (Govind Babu Poojari) ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Election) ಸಮಯದಲ್ಲಿ ಬೈಂದೂರು (Byndoor) ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮಾಡಿದ್ದರು.

ಹಲವು ಸಮಾಜ ಮುಖಿ ಕೆಲಸ ಮಾಡಿದ್ದ ಪೂಜಾರಿ ಅವರಿಗೆ ಬಿಜೆಪಿ ನಾಯಕರ (BJP Leaders) ಜೊತೆ ಓಡನಾಟ ಚೆನ್ನಾಗಿತ್ತು. ಸಮಾಜ ಸೇವೆ ಹೆಸರಿನಲ್ಲಿ ಅವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದರು. ಇದನ್ನೂ ಓದಿ: ನನ್ನ ಮುಖ ನೋಡಿ ಯಾರ್ ದುಡ್ಡು ಕೊಡ್ತಾರೆ ಮೇಡಂ: ಚೈತ್ರಾ ಹೇಳಿದ್ದೇನು?

ಚುನಾವಣಾ ಸಮಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಉದ್ಯಮಿ ಗೋವಿಂದ ಬಾಬು ಪೂಜಾರಿ ಭೇಟಿ ಮಾಡಿದ್ದರು. ಬಿಜೆಪಿ ನಾಯಕರೇ ಅಮಿತ್ ಶಾಗೆ ಪರಿಚಯ ಮಾಡಿಸಿದ್ದರು. ಈ ವೇಳೆ ಶಾಗೆ ಹೂ ಗುಚ್ಚ ಕೊಟ್ಟು ಶುಭಾಶಯ ಹೇಳಿದ್ದರು.

ರಾಷ್ಟ್ರೀಯ ನಾಯಕರ ಹತ್ತಿರ ಸುಳಿಯಲು ಭಾರೀ ಪ್ರಭಾವಿಯಾಗಿರಬೇಕು. ಈ ಬಾರಿ ಟಿಕೆಟ್‌ ನಿಮಗೆ ಸಿಗಲಿದೆ ಎಂದು ಬಿಜೆಪಿ ನಾಯಕರೇ ಭರವಸೆ ನೀಡಿದ್ದರು. ಆದರೆ ಬಿಜೆಪಿ ನಾಯಕರಿಗೆ ಟಿಕೆಟ್ ವಿಚಾರದ ಬಗ್ಗೆ ಎಲ್ಲವೂ ಗೊತ್ತಿತ್ತು. ಗೊತ್ತಿದ್ದರೂ ರಾಜ್ಯ ಬಿಜೆಪಿ ನಾಯಕರು ಸುಮ್ಮನಾಗಿದ್ದೆ ಗೋವಿಂದ ಬಾಬು ಪೂಜಾರಿ ದೂರು ನೀಡಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

Web Stories

Share This Article