ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಬಿಜೆಪಿ ಧನ್ಯವಾದ ತಿಳಿಸಿದೆ.
ಟ್ವೀಟ್ ಮಡಿರುವ ಬಿಜೆಪಿ, ದೇಶವನ್ನು ಕಾಂಗ್ರೆಸ್ ಮುಕ್ತವಾಗಿಸುವ ನಮ್ಮ ಸಂಕಲ್ಪಕ್ಕೆ ನೀವು ಧ್ವನಿಯಾಗಿದ್ದೀರಿ. ಹೀಗಾಗಿ ನಿಮಗೆ ಧನ್ಯವಾದಗಳು ಎಂದು ಬರೆದುಕೊಳ್ಳಲಾಗಿದೆ.
ಟ್ವೀಟ್‍ನಲ್ಲೇನಿದೆ..?
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಧನ್ಯವಾದಗಳು. ದೇಶವನ್ನು ಕಾಂಗ್ರೆಸ್ ಮುಕ್ತವಾಗಿಸುವ ನಮ್ಮ ಸಂಕಲ್ಪಕ್ಕೆ ನೀವು ಧ್ವನಿಯಾಗಿದ್ದೀರಿ. ಅಂತೂ ಮತ್ತೊಮ್ಮೆ ಗುಲಾಮಗಿರಿಯ ಪರಾಕಾಷ್ಠೆ ತೋರಿದ್ದೀರಿ. ಸೋಲಿನ ಮೇಲೆ ಸೋಲು ಕಾಣುತ್ತಿರುವ ಕಾಂಗ್ರೆಸ್ ಪಕ್ಷ ಈಗ ನಿರೋದ್ಯೋಗಿಗಳ ಸಂಗಮವಾಗಿದೆ. ಅಧ್ಯಕ್ಷರಾಗಿ 2 ವರ್ಷ ಕಳೆದರೂ ಪದಾಧಿಕಾರಿಗಳ ಪಟ್ಟಿ ಭರ್ತಿ ಮಾಡಲು ಸಾಧ್ಯವಾಗದವರು ನೀವು. ನಿಮ್ಮಂಥವರು ದೇಶದ ನಿರುದ್ಯೋಗದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ಗುದ್ದು ನಿಡಿದೆ.
ಮೊದಲು ನಿಮ್ಮ ಕಾರ್ಯಕರ್ತರಿಗೆ ಪಕ್ಷ ಜವಾಬ್ದಾರಿ ಎಂಬ ಉದ್ಯೋಗ ಕಲ್ಪಿಸಿ. ಡಿಕೆಶಿ ಅವರು ಕಾಂಗ್ರೆಸ್ ಕಂಡ ವಿಫಲಾಧ್ಯಕ್ಷ. ಅಧಿಕಾರ ಸ್ವೀಕರಿಸಿ 2 ವರ್ಷ ಕಳೆದರೂ ಪದಾಧಿಕಾರಿಗಳ ನೇಮಕ ಮಾಡಲಾಗದೆ ಅಸಹಾಯಕರಾಗಿದ್ದಾರೆ. ಕರ್ನಾಟಕ ಕಾಂಗ್ರೆಸ್ ಈಗ ಕನಕಪುರ ಕಾಂಗ್ರೆಸ್ ಆಗಿ ಪರಿವರ್ತಿತಗೊಂಡಿದೆ ಎಂದು ಬರೆದು ಕಾಂಗ್ರೆಸ್ ಮುಕ್ತ ಕರ್ನಾಟಕ ಎಂದು ಹ್ಯಾಶ್ ಟ್ಯಾಗ್ ಹಾಕಲಾಗಿದೆ.