ಬೆಂಗಳೂರು: ದೇಶಾದ್ಯಂತ ಪಿಎಫ್‍ಐ (PFI) 5 ವರ್ಷ ಬ್ಯಾನ್ ಮಾಡಲಾಗಿದ್ದು. ಸದ್ಯ ಪಿಎಫ್‍ಐಗೆ ಮುಂದೆ ನಿಂತು ಹೋರಾಟ ಮಾಡುವವರು ಯಾರೂ ಇಲ್ಲ. ಈಗಾಗಲೇ ಎನ್‍ಐಎ (NIA) ಮೊದಲ ಹಾಗೂ ದ್ವಿತೀಯ ಹಂತದ ನಾಯಕರನ್ನು ಬಂಧಿಸಿಟ್ಟಿದೆ.
Advertisement
ಕೆಲ ಸದಸ್ಯರು ವಿದೇಶಗಳಲ್ಲಿ ತಲೆ ಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಮಧ್ಯೆ ಕೆಲ ದಿನಗಳ ಬಳಿಕ ಅಜ್ಞಾತವಾಗಿದ್ದುಕೊಂಡೇ ಬೇರೆ ಹೆಸರಲ್ಲಿ ಸಂಘಟನೆ ಸಕ್ರಿಯಗೊಳಿಸೋಕೆ ಮಾಸ್ಟರ್ ಪ್ಲಾನ್ ಮಾಡಲಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಮಾಸ್ಟರ್ ಸ್ಟ್ರೋಕ್ ಕೊಡೋಕೆ ಕೇಂದ್ರ ತನಿಖಾ ಸಂಸ್ಥೆಗಳು ರೆಡಿ ಆಗಿದೆ. ವಿದೇಶದಲ್ಲಿರುವ ಪಿಎಫ್‍ಐ ಸಂಘಟನೆಯವರ ಮೇಲೆ ಕಣ್ಣಿಡಲು ಸಿದ್ಧತೆ ನಡೆಸಿದೆ. ಅಲ್ಲದೇ ಪಿಎಫ್‍ಐನ ಎಲ್ಲ ಸದಸ್ಯರ ಆಧಾರ್, ಪ್ಯಾನ್, ಭಾವಚಿತ್ರಗಳ ಮಾಹಿತಿ ಸಂಗ್ರಹಿಸುತ್ತಿದೆ. ಯಾರದ್ದೇ ಹೆಸರಲ್ಲಿ ಹೊಸ ಸಂಘಟನೆ ಸ್ಥಾಪನೆಗೆ ಅರ್ಜಿ ಬಂದ್ರೆ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ಈ ಹಿಂದೆ ಇವರೆಲ್ಲ ನಿಷೇಧಿತ ಸಂಘಟನೆ ಸದಸ್ಯರಾಗಿದ್ರು ಅಂತಾ ಪ್ರೂವ್ ಮಾಡಲು ಸಿದ್ಧತೆ ಕೂಡ ಮಾಡಲಾಗಿದ್ದು, ತಲೆ ಮರೆಸಿಕೊಂಡಿರುವ ಸಂಘಟನೆ ಸದಸ್ಯರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಇದನ್ನೂ ಓದಿ: ಪಿಎಸ್‍ಐ ಮರು ಪರೀಕ್ಷೆಗೆ ಹೈಕೋರ್ಟ್ ತಡೆ
Advertisement
Advertisement
ಈ ನಡುವೆ ದೇಶದಲ್ಲಿ ಪಿಎಫ್‍ಐ ಬ್ಯಾನ್ ಮಾಡಿದ ಕೇಂದ್ರ ಬಿಜೆಪಿ ಸರ್ಕಾರದ ಹೊಸ ಗೇಮ್ ಎಂಬ ಮಾತು ಕೇಳಿಬರುತ್ತಿದೆ. ದೇಶಾದ್ಯಂತ 5 ವರ್ಷ ಪಿಎಫ್‍ಐ ಚಟುವಟಿಕೆಗೆ ಗೃಹ ಇಲಾಖೆ ನಿರ್ಬಂಧ ಹೇರಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಈ ನಿರ್ಧಾರದ ಹಿಂದಿನ ಸೀಕ್ರೆಟ್ ಏನು ಎಂಬ ಪ್ರಶ್ನೆ ಕಾಡತೊಡಗಿದೆ. ಪಿಎಫ್‍ಐ ನಿಷೇಧದ ಹಿಂದೆ ರಾಜಕೀಯ ರಹಸ್ಯ ಕೂಡ ಅಡಗಿದೆ. ಇದೀಗ ಪಿಎಫ್‍ಐ ನಿಷೇಧಕ್ಕೆ ಕಾರಣವಾಯ್ತಾ ಕರ್ನಾಟಕ ಎಂಬ ಅನುಮಾನವು ಎದ್ದಿದೆ. ಪ್ರವೀಣ್ ಕುಮಾರ್ ನೆಟ್ಟಾರು (Praveen Kumar Nettar) ಹತ್ಯೆ ಬಳಿಕ ಪಕ್ಷದ ವಿರುದ್ಧವೇ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದ್ದರು. ಕೇಂದ್ರ, ರಾಜ್ಯ ನಾಯಕರ ವಿರುದ್ಧ ಹಿಂದೂಪರ ಕಾರ್ಯಕರ್ತರು ಸಿಡಿದೆದ್ದಿದ್ದರು. ಮತ್ತೊಂದ್ಕಡೆ ದೇಶದಲ್ಲಿ ನಡೆಯಲಿರುವ ಸರಣಿ ಚುನಾವಣೆ ಕೂಡ ಪಿಎಫ್‍ಐ ನಿಷೇಧಕ್ಕೆ ಅಸ್ತ್ರವಾಯಿತೇ ಎಂಬ ಅನುಮಾನ ಮೂಡಿದೆ. ಹಿಮಾಚಲಪ್ರದೇಶ, ಗುಜರಾತ್, ಕರ್ನಾಟಕ ಚುನಾವಣೆಗೆ ಕೌಂಟ್‍ಡೌನ್ ಶುರುವಾಗಿದೆ. ಹೀಗಾಗಿಯೇ ಕೇಂದ್ರ ಪಿಎಫ್‍ಐ ನಿಷೇಧಕ್ಕೆ ಗಟ್ಟಿ ನಿರ್ಧಾರ ಮಾಡಿದೆ. ಈ ಮೂಲಕ ಹಿಂದೂಪರ ನಾಯಕರಿಗೆ ಸಂದೇಶ ರವಾನಿಸಿದ್ರಾ ಅಮಿತ್ ಶಾ (Amit Shah) ಎಂಬ ಪ್ರಶ್ನೆಯೊಂದು ಎದ್ದಿದೆ. ಇದರೊಂದಿಗೆ ಸಿದ್ದರಾಮಯ್ಯ ಅವಧಿಯಲ್ಲಿ ಪಿಎಫ್‌ಐ ಮೇಲಿದ್ದ ಒಟ್ಟು 176 ಕೇಸ್ ವಾಪಸ್ ಮಾಡಲಾಗಿತ್ತು. 175 ಪ್ರಕರಣಗಳಲ್ಲಿ 1,764 ಜನರ ಮೇಲಿನ ಕೇಸ್ ವಾಪಸ್ ಪಡೆಯಲಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ ಎಂಬ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ತುಮಕೂರಿನಲ್ಲಿ ಕೊನೆಗೂ ರಸ್ತೆಗಿಳಿದ ಕಸ ಸಾಗಿಸುವ ಆಟೋಗಳು!