– ಸಿಂಗ್ ಅಸ್ಥಿ ವಿಸರ್ಜನೆಗೆ ಕಾಂಗ್ರೆಸ್ ನಾಯಕರು ಹೋಗಿಲ್ಲ ಯಾಕೆ..?
– ಮುಂಬೈ ದಾಳಿ ನಡೆದಾಗಲೂ ರಾಹುಲ್ ಇಡೀ ರಾತ್ರಿ ಪಾರ್ಟಿ ಮಾಡಿದ್ರು; ಬಿಜೆಪಿ
ನವದೆಹಲಿ: ದಿ. ಮನಮೋಹನ್ ಸಿಂಗ್ (Manmohan Singh) ವಿಚಾರವಾಗಿ ಪರಸ್ಪರ ರಾಜಕೀಯ ಕೆಸರೆರಚಾಟ ಮುಂದುವರೆದಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಸ್ಥಿ ವಿಸರ್ಜನೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಯಾರೋಬ್ಬರರು ಹಾಜರಾಗದೇ ಇದ್ದುದನ್ನು ಉಲ್ಲೇಖಿಸಿದ ಬಿಜೆಪಿ, ಗಾಂಧಿ ಪರಿವಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಮನಮೋಹನ್ ಸಿಂಗ್ ನಿಧನ ಹಿನ್ನೆಲೆಯಲ್ಲಿ ಇಡೀ ದೇಶವೇ 7 ದಿನಗಳ ಶೋಕಾಚರಣೆ ನಡೆಸುವಾಗ ರಾಹುಲ್ ಗಾಂಧಿ ಮಾತ್ರ ಹೊಸ ವರ್ಷದ ಆಚರಣೆಗಾಗಿ ವಿಯೆಟ್ನಾಂ ಪ್ರವಾಸ (Vietnam Trip) ಕೈಗೊಂಡಿದ್ದಾರೆ. ಈ ಮೂಲಕ ಮನಮೋಹನ್‌ಸಿಂಗ್ ಅವರಿಗೆ ರಾಹುಲ್ ಗಾಂಧಿ (Rahul Gandhi) ಮತ್ತೆ ಮತ್ತೆ ಅಪಮಾನ ಮಾಡ್ತಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಈ ನಡುವೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಮಾತನಾಡಿರುವ ಬಿಜೆಪಿ ವಕ್ತಾರ ಬಿಜೆಪಿಯ ಶೆಹ್‌ಜಾದ್ ಪೂನಾವಾಲಾ, ರಾಹುಲ್ ವಿಪಕ್ಷ ನಾಯಕರಲ್ಲ.. ಬದಲಾಗಿ ಪ್ರವಾಸಿ ನಾಯಕ. ಅವರು ತಮ್ಮ ನಿರೀಕ್ಷೆಯಂತೆ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 25ನೇ ವರ್ಷದ ಅವರೆಬೇಳೆ ಮೇಳಕ್ಕೆ ಡಿಸಿಎಂ ಚಾಲನೆ – ಅವರೆಬೇಳೆ ದೋಸೆ ಮಾಡಲು ಪತ್ನಿಗೆ ಹೇಳ್ತೀನಿ ಎಂದ ಡಿಕೆಶಿ
ಅಲ್ಲದೇ ಮುಂಬೈ ಮೇಲಿನ ದಾಳಿಗಳು ನಿಮಗೆ ನೆನಪಿದೆಯೇ? ಎಂದು ಪ್ರಶ್ನಿಸಿರುವ ಅವರು 2008ರಲ್ಲಿ ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಆಗ 38 ವರ್ಷ ವಯಸ್ಸಿನವರಾಗಿದ್ದ ರಾಹುಲ್ ಗಾಂಧಿ ಇಡೀ ರಾತ್ರಿ ತಮ್ಮ ಸ್ನೇಹಿತ ಸಮೀರ್ ಶರ್ಮಾ ಅವರ ಮದುವೆಯಲ್ಲಿ ಪಾಲ್ಗೊಂಡಿದ್ದರು. ದೆಹಲಿ ಹೊರವಲಯದಲ್ಲಿ ಇಡೀ ರಾತ್ರಿ ಪಾರ್ಟಿ ಮಾಡಿದ್ದರು. ಅನೇಕ ವರದಿಗಳು ಈ ಸತ್ಯವನ್ನು ಉಲ್ಲೇಖಿಸಿವೆ ಎಂದು ಕುಟುಕಿದ್ದಾರೆ.
ಬಿಜೆಪಿ ನಾಯಕರ ಹೇಳಿಕೆಗೆ ಕಾಂಗ್ರೆಸ್ ಕೆರಳಿ ಕೆಂಡವಾಗಿದೆ. ಬಿಜೆಪಿ ಆರೋಕ್ಕೆ ಕಾಂಗ್ರೆಸ್ ಸಂಸದ ಬಿ ಮಾಣಿಕಂ ಟ್ಯಾಗೋರ್ ಸ್ಪಷ್ಟನೆ ನೀಡಿದ್ದಾರೆ. ವಿಯೆಟ್ನಾಂ ಪ್ರವಾಸ ರಾಹುಲ್ ಗಾಂಧಿ ಅವರ ವೈಯಕ್ತಿಕ ಭೇಟಿ, ಅದರಿಂದ ನಿಮಗೇನು ತೊಂದರೆ? ಹೊಸವರ್ಷದಲ್ಲಾದರೂ ಆರಾಮಾಗಿರಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಾಪ್ತತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿಯ ಶವ ಸ್ಕಾಟ್ಲೆಂಡ್‌ನ ನದಿಯಲ್ಲಿ ಪತ್ತೆ
ಅಲ್ಲದೇ ಮನಮೋಹನ್ ಸಿಂಗ್ ಕುಟುಂಬ ಅಸ್ಥಿ ವಿಸರ್ಜನೆ ಕಾರ್ಯದ ವೇಳೆ ಖಾಸಗಿತನ ಬಯಸಿತ್ತು. ಅದಕ್ಕೆ ಕಾಂಗ್ರೆಸ್ ನಾಯಕರು ಪಾಲ್ಗೊಂಡಿರಲಿಲ್ಲ ಎಂದು ಸ್ಪಷ್ಟನೆ ನೀಡಿದೆ. ಬಿಜೆಪಿ ನಾಯಕರು ತಮ್ಮ ತಪ್ಪುಗಳನ್ನು, ಹುಳುಕುಗಳನ್ನು ಮುಚ್ಚಿಕೊಳ್ಳಲು ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಕಿಡಿಕಾರಿದೆ. ಅಷ್ಟಕ್ಕೂ ರಾಹುಲ್ ಗಾಂಧಿ ಖಾಸಗಿ ಪ್ರವಾಸ ಕೈಗೊಂಡ್ರೆ ಅದ್ರಲ್ಲಿ ಏನಿದೆ ತಪ್ಪು..? ನಿಮಗೇಕೆ ಉರಿ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ ಆಹ್ವಾನಿತರಿಗೆ ಈ ಪಬ್‌ನಲ್ಲಿ ಕಾಂಡೋಮ್, ಒಆರ್‌ಎಸ್ ಗಿಫ್ಟ್ – ಕಾಂಗ್ರೆಸ್ ದೂರು