ರಾಹುಲ್‌ ಗಾಂಧಿ ಮೊದಲು ಪಕ್ಷದ ನಾಯಕರಿಗೆ ನ್ಯಾಯ ಕೊಡಿಸಲಿ- ʼಕೈʼ ಯಾತ್ರೆಗೆ ಅಮಿತ್‌ ಮಾಳವಿಯಾ ವ್ಯಂಗ್ಯ

Public TV
1 Min Read
RAHUL GANDHI AMIT MALAVIYA

ಮುಂಬೈ: ಕಾಂಗ್ರೆಸ್ (Congress) ಪಕ್ಷದ ಹಿರಿಯ ನಾಯಕ ಮಿಲಿಂದ್ ದಿಯೋರಾ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಹಾಗೂ ಕಾಂಗ್ರೆಸ್‌ನ ಭಾರತ್‌ ಜೋಡೋ ನ್ಯಾಯ ಯಾತ್ರೆ (Bharat Jodo Nyay Yatre) ಕುರಿತು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ (Amit Malviya) ವ್ಯಂಗ್ಯವಾಡಿದ್ದಾರೆ.

ಮಿಲಿಂದ್ ದಿಯೋರಾ ಅವರ ರಾಜೀನಾಮೆ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ರಾಹುಲ್ ಗಾಂಧಿ (Rahul Gandhi) ಮೊದಲು ತಮ್ಮ ಪಕ್ಷದ ನಾಯಕರಿಗೆ ನ್ಯಾಯ ಕೊಡಿಸಬೇಕು. ನಂತರ ನ್ಯಾಯ ಯಾತ್ರೆ ಮಾಡಲಿ ಎಂದು ಹೇಳಿದ್ದಾರೆ.

ಮಿಲಿಂದ್‌ ಹೇಳಿದ್ದೇನು..?: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವುದಾಗಿ ಹೇಳಿರುವ ಹಿರಿಯ ನಾಯಕ ಮಿಲಿಂದ್ ದಿಯೋರಾ, ಇಂದು ನನ್ನ ರಾಜಕೀಯ ಪಯಣದಲ್ಲಿ ಮಹತ್ವದ ಅಧ್ಯಾಯವೊಂದು ಮುಕ್ತಾಯವಾಗಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಪಕ್ಷದೊಂದಿಗೆ ನನ್ನ ಕುಟುಂಬದ 55 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದ್ದೇನೆ. ನಾನು ಎಲ್ಲಾ ನಾಯಕರು, ಸಹೋದ್ಯೋಗಿಗಳು ಹಾಗೂ ಕೃತಜ್ಞನಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: 55 ವರ್ಷಗಳ ಬಾಂಧವ್ಯ ಅಂತ್ಯಗೊಳಿಸಿದ್ದೇನೆ – ಕಾಂಗ್ರೆಸ್‌ಗೆ ಮಿಲಿಂದ್‌ ದಿಯೋರಾ ಗುಡ್‌ಬೈ

ಇಂದಿನಿಂದ ಭಾರತ್ ನ್ಯಾಯ್ ಯಾತ್ರೆ ಎಂಬ ಹೆಸರಿನಲ್ಲಿ ಮಣಿಪುರದಿಂದ (Manipura) ಮಹಾರಾಷ್ಟ್ರದ (Maharastra) ಕಡೆಗೆ ರಾಗಾ ಯಾತ್ರೆ ಮಾಡಲಿದ್ದಾರೆ. ಮಣಿಪುರದಿಂದ ಮುಂಬೈಗೆ 67 ದಿನಗಳ ಅವಧಿಯಲ್ಲಿ ಪಾದಯಾತ್ರೆ ಮಾಡಲಿದ್ದಾರೆ. ಇಂದಿನಿಂದ ಮಾರ್ಚ್ 20 ರವರೆಗೆ ಇಂಫಾಲ್‍ನಿಂದ ಮುಂಬೈಗೆ ಯಾತ್ರೆ ಪ್ರಯಾಣಿಸಲಿದೆ. ಇದೇ ಹೊತ್ತಲ್ಲಿ ಮಿಲಿಂದ್ ದಿಯೋರಾ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗುತ್ತಾರೆ ಎಂಬ ಗುಮಾನಿ ಇದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.

Share This Article