– ನಾಗಮಂಗಲ ಗಲಭೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲು ಆಗ್ರಹ
ಬೆಂಗಳೂರು: ಶಾಸಕ ಮುನಿರತ್ನ (Munirathna) ಬಂಧನವನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಸಂವಿಧಾನ ಪಾಲನೆ ಆಗಿಲ್ಲ ಅಂತಾ ಕಿಡಿಕಾರಿದ್ದಾರೆ ಅಶ್ವಥ್ ನಾರಾಯಣ್ (Ashwath Narayan), ರವಿಕುಮಾರ್, ಸಿ.ಟಿ ರವಿ ಸೇರಿದಂತೆ ಹಲವು ನಾಯಕರು ಖಂಡಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು (Bengaluru) ಮಾತನಾಡಿದ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್, ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಯಾರೇ ತಪ್ಪು ಮಾಡಿದ್ರು ಕ್ರಮ ಆಗಬೇಕು. ಆದರೆ ಈ ಸರ್ಕಾರದಲ್ಲಿ ಏನು ಕಾನೂನು ಪಾಲನೆ ಆಗಿದೆ? ಇವರು ಕಾನೂನಿಗೆ ಬೆಲೆ ಕೊಡ್ತಿದ್ದಾರಾ? ಅಂತಾ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: Democracy Day | ಅತೀ ಉದ್ದದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ಸಿಎಂ ಚಾಲನೆ
Advertisement
Advertisement
ಕಲಬುರಗಿಯಲ್ಲಿ ಪಿಎಸ್‌ಐ ಪರಶುರಾಮ (PSI Parashuram) ಆತ್ಮಹತ್ಯೆ ಮಾಡಿಕೊಂಡರು. ಅಲ್ಲಿನ ಶಾಸಕ, ಶಾಸಕನ ಮಗನ ಬಂಧನ ಆಗಿದೆಯಾ? ವಿಜಯಪುರದಲ್ಲೂ ಕೃಷಿ ಸಚಿವರ ಮೇಲೆ ಆಪಾದನೆ ಮಾಡಿ ಆತ್ಮಹತ್ಯೆ ಆಗಿದೆ ಇದರ ಕ್ರಮ ಆಗಿದೆಯಾ? ಶಿವಮೊಗ್ಗದಲ್ಲಿ ಆತ್ಮಹತ್ಯೆ ಹತ್ಯೆ ಆಗಿದೆ, ಕ್ರಮ ಆಗಿದೆಯಾ? ಸರಣಿ ಪ್ರಶ್ನೆಗಳನ್ನ ಸರ್ಕಾರದ ಮುಂದಿಟ್ಟರು. ಇದನ್ನೂ ಓದಿ: ಶಾಸಕ ಮುನಿರತ್ನ ಬಂಧನ ಪ್ರಕರಣ – ತಪ್ಪು ಮಾಡಿರೋದು ಸಾಮಾನ್ಯ ವ್ಯಕ್ತಿಯಲ್ಲ ಒಬ್ಬ ಮಾಜಿ ಮಂತ್ರಿ: ಡಿಕೆ ಸುರೇಶ್
Advertisement
Advertisement
ಇನ್ನೂ ಎಂಎಲ್‌ಸಿ ರವಿಕುಮಾರ್ (Ravikumar) ಮಾತನಾಡಿ, ಮುನಿರತ್ನ ಬಂಧನ ಪ್ರಕರಣದಲ್ಲಿ ಪಕ್ಷದ ಅಧ್ಯಕ್ಷರು, ವಿಪಕ್ಷ ನಾಯಕರು ಚರ್ಚೆ ಮಾಡುತ್ತಾರೆ. ನೋಟಿಸ್ ಅಂತೂ ಬಿಜೆಪಿ ಜಾರಿ ಮಾಡಿದೆ. ಆಡಿಯೋ ಅವರದ್ದೇನಾ? ಕಟ್ ಅಂಡ್ ಪೇಸ್ಟ್ ಆಗಿದ್ಯಾ? ಅಥವಾ ಕಾಂಗ್ರೆಸ್‌ನವರೇ ಸೃಷ್ಟಿ ಮಾಡಿದ್ರಾ? ಅಂತಾ ಗೊತ್ತಾಗಬೇಕು. ಬಿಜೆಪಿ ಶಾಸಕರನ್ನು ಅರೆಸ್ಟ್ ಮಾಡ್ತೀರಿ, ಕಾಂಗ್ರೆಸ್ ಶಾಸಕರನ್ನು ಮೆರೆಯಲು ಬಿಡುತ್ತೀರಾ? ಎಂದು ಪ್ರಶ್ನಿಸಿದ ಅವರು, ನಾಗಮಂಗಲ ಗಲಭೆ ಪ್ರಕರಣ, ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ, ಮುನಿರತ್ನ ಬಂಧನ ವಿಚಾರಗಳಲ್ಲಿ ವಿಪಕ್ಷವನ್ನು ಸರ್ಕಾರ ಮಾತುಕತೆಗೆ ಕರೆಯಬೇಕು ಎಂದು ಒತ್ತಾಯಿಸಿದರು.
ನಾಗಮಂಗಲ ಗಲಭೆ ಕೇಸ್ ತನಿಖೆಯನ್ನು ಎನ್‌ಐಎಗೆ ವಹಿಸಿ:
ಇದೇ ವೇಳೆ ನಾಗಮಂಗಲ ಗಲಭೆ ಪ್ರಕರಣದ ತನಿಖೆಯನ್ನ ಎನ್‌ಐಎಗೆ ವಹಿಸಬೇಕು ಅಂತ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಅವರು ಆಗ್ರಹಿಸಿದರು. ಇದನ್ನೂ ಓದಿ: ಪರಪ್ಪನ ಅಗ್ರಹಾರಕ್ಕೆ ಏಕಾಏಕಿ ಸಿಸಿಬಿ ದಾಳಿ: 18 ಮೊಬೈಲ್, ಮಾದಕ ವಸ್ತು, ಹಣ ಸೀಜ್
ರಾಜ್ಯ ಸರ್ಕಾರದ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಕಾಂಗ್ರೆಸ್ ಕಾನೂನು ನಿರ್ವಹಣೆ ಮಾಡೋದ್ರಲ್ಲಿ ವಿಫಲವಾಗಿದೆ. ನಾಗಮಂಗಲ ವಿಚಾರವಾಗಿ ನನ್ನ ನೇತೃತ್ವದಲ್ಲಿ ಸತ್ಯ ಸಂಶೋಧನೆಗಾಗಿ ಒಂದು ಕಮಿಟಿ ಮಾಡಲಾಗಿದೆ. ಸತ್ಯ ಶೋಧನೆ ಮಾಡಲು ಅಲ್ಲಿಗೆ ಭೇಟಿ ನೀಡಿ ಜನರಿಂದ ಮಾಹಿತಿ ಪಡೆಯುತ್ತೇವೆ. ಆದ್ರೆ ಆಡಳಿತದಲ್ಲಿ ಸ್ಪಷ್ಟತೆ ಇಲ್ಲದ ಕಾರಣ ರಾಜ್ಯದಲ್ಲಿ ಭಯದ ವಾತಾವರಣ ಉಂಟಾಗಿದೆ. ಗಣೇಶ ಹಬ್ಬ ಆಚರಣೆ ಮಾಡೋದು ನಮ್ಮ ಸಂಸ್ಕೃತಿ. ಇದಕ್ಕೆ ಎಲ್ಲರೂ ಸಪೋರ್ಟ್ ಮಾಡಬೇಕು. ಈದ್ ಮಿಲಾದ್ ಇದೆ ಎಂದು ಗಣೇಶ ಇಡಲು ಕೆಲವು ಕಡೆ ಬಿಟ್ಟಿಲ್ಲ ಅಂತಾ ಆರೋಪಿಸಿದರು.