ಕಾರವಾರ: ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರ `ಪಂಚರತ್ನ’ಯಾತ್ರೆ ಸಂಪೂರ್ಣ ಪಂಚರ್ ಆಗಿದೆ. ಕಾಂಗ್ರೆಸ್‌ಗೆ ಕ್ಷೇತ್ರ ಹುಡುಕಾಡುವ ಹೀನಾಯ ಸ್ಥಿತಿ ಬಂದೊದಗಿದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ (NalinKumar Kateel) ಲೇವಡಿ ಮಾಡಿದ್ದಾರೆ.
ಭಟ್ಕಳದ ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ 3 ಜನರ ನಡುವೆ ಕಿತ್ತಾಟ ನಡೆಯುತ್ತಿದೆ. ಆಂತರಿಕ ಕಲಹ ಪ್ರಾರಂಭವಾಗಿದೆ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಪರಮೇಶ್ವರ್ ಅವರನ್ನ ಮುಗಿಸಿರುವ ಸಿದ್ಧರಾಮಯ್ಯ (Siddaramaiah), ಡಿಕೆಶಿಯನ್ನೂ ಮುಗಿಸ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಧವೆಯರಿಗೆ ಪೆನ್ಷನ್, ರೇಷನ್ ಕಾರ್ಡ್ ತಂದಿದ್ದು ಇಂದಿರಾಗಾಂಧಿ ನೇತೃತ್ವದ ಸರ್ಕಾರ: ಉಮಾಶ್ರೀ
Advertisement
Advertisement
ಸಿದ್ದರಾಮಯ್ಯನವರಿಗೆ ಸದ್ಯ ಕ್ಷೇತ್ರವೇ ಇಲ್ಲದಂತಾಗಿದೆ. ವರುಣಾ (Varuna Constituency), ಬಾದಾಮಿ, ಕೋಲಾರದಲ್ಲಿ ಸೋಲಿನ ಭೀತಿ ಎದುರಾಗಿದೆ. ಕಾಂಗ್ರೆಸ್ಸಿಗೆ ಇಂತಹ ಹೀನಾಯ ಸ್ಥಿತಿ ಬಂದಿದೆ. ಪ್ರಶ್ನಾತೀತ ನಾಯಕರ ಸ್ಥಿತಿಯೇ ಹೀಗಾದ್ರೆ ಕಾರ್ಯಕರ್ತರ ಸ್ಥಿತಿ ಹೇಗಿರಬೇಕು? ಎಂದು ಪ್ರಶ್ನಿಸಿದ ಕಟೀಲ್, ರಾಹುಲ್‌ಗಾಂಧಿ ನಿವೃತ್ತಿಯ ಮೂಡ್‌ನಲ್ಲಿದ್ದಾರೆ. 10 ವರ್ಷಗಳ ಮೊದಲೇ ಇದನ್ನೆಲ್ಲಾ ಮಾಡಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಮುಚ್ಚಿದ ಲಕೋಟೆಯಲ್ಲಿ ದಾಖಲೆಗಳನ್ನು ನೀಡುವ ಪದ್ಧತಿಯನ್ನು ಅಂತ್ಯಗೊಳಿಸಲು ಚಿಂತಿಸುತ್ತಿದ್ದೇವೆ- ಸಿಜೆಐ
Advertisement
Advertisement
ಇದೇ ವೇಳೆ ಹೆಚ್‌ಡಿಕೆ ವಿರುದ್ಧ ವ್ಯಂಗ್ಯವಾಡಿದ ನಳಿನ್‌ಕುಮಾರ್ ಕಟೀಲ್, ಹಾಸನದ ಟಿಕೆಟ್ ಯಾರಿಗೆ ಕೊಡಬೇಕು ಎಂಬ ವಿಚಾರಕ್ಕೆ ಕುಟುಂಬದಲ್ಲೇ ಕಲಹ ಪ್ರಾರಂಭವಾಗಿದೆ. ಇದರಿಂದ `ಪಂಚರತ್ನ’ಯಾತ್ರೆ ಸಂಪೂರ್ಣ ಪಂಚರ್ ಆಗಿದೆ. ಶರ್ಟ್ ಹೊಲಿಸಿ ಮುಖ್ಯಮಂತ್ರಿಯಾಗುವ ಕನಸು ಹೊತ್ತವರಿಗೆ ಮುಂದಿನ ಚುನಾವಣೆಯಲ್ಲಿ ಮುಖಭಂಗವಾಗುತ್ತದೆ ಎಂದು ಕುಟುಕಿದ್ದಾರೆ.
ಉರಿಗೌಡ ನಂಜೇಗೌಡ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ಹತ್ತಾರು ಇತಿಹಾಸ ತಿರುಚಿದೆ. ಉರಿಗೌಡ, ನಂಜೇಗೌಡರ ವಿಚಾರದಲ್ಲೂ ನಡೆದಿರಬಹುದು. ಈ ಬಗ್ಗೆ ಹೇಳಿಕೆ ನೀಡಲು ನಾನು ಇತಿಹಾಸ ತಜ್ಞನಲ್ಲ, ಇತಿಹಾಸದ ವಿಚಾರದ ಬಗ್ಗೆ ಚರ್ಚೆಗಳಾಗಲಿ, ಸತ್ಯಾಸತ್ಯತೆಗಳು ಹೊರಗೆ ಬರಲಿ ಎಂದು ಒತ್ತಾಯಿಸಿದ್ದಾರೆ.