ಬೆಂಗಳೂರು: ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಸಂಜೆ ಯತ್ನಾಳ್ ಅವರಿಗೆ ಯಡಿಯೂರಪ್ಪ ದೂರವಾಣಿ ಕರೆ ಮಾಡಿ, ಇಂತಹ ಹೇಳಿಕೆ ಕೊಡೋದು ಸರಿಯಲ್ಲ. ಯಾವುದೇ ಹೇಳಿಕೆ ಕೊಡುವಾಗ ಎಚ್ಚರಿಕೆ ಇರಲಿ. ವಿವಾದಾತ್ಮಕ ಹೇಳಿಕೆಗಳಿಂದ ದೂರವಿರಿ ಎಂದು ಸೂಕ್ಷ್ಮವಾಗಿ ಯತ್ನಾಳ್ ಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಎಂ.ಬಿ ಪಾಟೀಲ್ ಪರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬ್ಯಾಟಿಂಗ್
Advertisement
ವಿವಾದಾತ್ಮಕ ಹೇಳಿಕೆಯೇನು?
ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್, ಜೆಡಿಎಸ್ ಸಹಕಾರದೊಂದಿಗೆ ಸ್ಪರ್ಧಿಸುವಾಗ ದರ್ಗಕ್ಕೂ ಹೋಗಿದ್ದರು. ಇದೀಗ `ನಾನು ಮುಸ್ಲಿಮರ ಮತಗಳಿಂದ ಗೆದ್ದಿಲ್ಲ. ಸಾಬ್ರ ಕೆಲಸ ಮಾಡಬೇಡಿ’ ಎಂದು ಕಾರ್ಪೋರೇಟರ್ ಗೆ ತಿಳಿಸಿದ್ದೇನೆ ಎಂಬ ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿವಾದಾತ್ಮಕ ಹೇಳಿಕೆಯನ್ನು ಹೇಳಿದ್ದರು.
Advertisement
ಅಷ್ಟೇ ಅಲ್ಲದೇ ಮಾಜಿ ಸಚಿವ ಎಂ.ಬಿ.ಪಾಟೀಲ್ ಪರ ಯತ್ನಾಳ್ ಬ್ಯಾಟಿಂಗ್ ಮಾಡಿದ್ದು, ಕಾಂಗ್ರೆಸ್ ಪಕ್ಷ ಎಂ.ಬಿ.ಪಾಟೀಲ್‍ಗೆ ಅಪಮಾನ ಮಾಡಿದೆ. ಎಂ.ಬಿ ಪಾಟೀಲ್ ಸಾಕಷ್ಟು ನೀರಾವರಿ ಕುರಿತು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಅವರಿಗೆ ಗಾಳ ಹಾಕಿ ಬಿಜೆಪಿಗೆ ಕರೆಯಲು ನಾನ್ಯಾರು? ಅವರೇನು ಚಿಕ್ಕವರಲ್ಲ ಎಂದರು.
Advertisement
ದೇಶ ಭಕ್ತ ಅಬ್ದುಲ್ ಕಲಾಂರನ್ನು ಹೊಗಳಲೇ ಬೇಕು. ಒವೈಸಿ ಅಂತವರಿಗೆ ಲೋಫರ್ ಎಂದು ಕರೆಯಲೇ ಬೇಕು. ಎಂ.ಬಿ ಪಾಟೀಲ್ ಪಕ್ಷಕ್ಕೆ ಬರೋದಾದರೆ ರಾಜ್ಯ ಮುಖಂಡರೊಂದಿಗೆ ಚರ್ಚಿಸಿ ನಿರ್ಣಯ ಮಾಡೋದಾಗಿ ಹೇಳಿದ ಅವರು, ಇದೇ ವೇಳೆ ಮೂರು ತಿಂಗಳಲ್ಲಿ ಈ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಿದ್ದು ಹೋಗುದೆಂದು ಭವಿಷ್ಯ ನುಡಿದ್ದರು.