– ಸುಧಾಕರ್ ಹಗುರವಾಗಿ ಮಾತನಾಡಬಾರದು
ಬೆಂಗಳೂರು: ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರ ಏನೂ ಇಲ್ಲ. ನನ್ನ ಮೇಲೆ ತಪ್ಪು ಹೊರಿಸೋದು ಬೇಡ ಎಂದು ಸಂಸದ ಸುಧಾಕರ್ ಟೀಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (Vijayendra) ಅಸಮಾಧಾನ ಹೊರಹಾಕಿದರು.
Advertisement
ಸುಧಾಕರ್ (Sudhakar) ಅವರ ಆಕ್ರೋಶದ ಮಾತು ನೋಡಿದೆ. ದಯವಿಟ್ಟು ಈ ರೀತಿ ಮಾತಾಡಲು ಹೋಗಬೇಡಿ. ರಾಜ್ಯದ ಅಧ್ಯಕ್ಷ ಆಗಿ ನಾನು ಯಾವುದೇ ಜಿಲ್ಲೆಗೆ ಅಭಿಪ್ರಾಯ ಕೊಟ್ಟಿಲ್ಲ. ನಾನು ಅಭಿಪ್ರಾಯ ಕೊಡಲು ಸಾಧ್ಯವೂ ಇಲ್ಲ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಚುನಾವಣಾಧಿಕಾರಿ ಆಗಿದ್ರು. ೧೩ ಜನ ವೀಕ್ಷಕರು ಇದ್ರು. ಇವ್ರು ಜಿಲ್ಲೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತಗೊಂಡು ಜಿಲ್ಲೆಗೆ ತಲಾ ಮೂರು ಹೆಸರು ಹೈಕಮಾಂಡ್ಗೆ ಕಳಿಸಿಕೊಟ್ಟಿದ್ರು. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರ ಏನೂ ಇಲ್ಲ, ಶೂನ್ಯ. ನನ್ನ ಜಿಲ್ಲೆಗೆ ನಾನು ಅಭಿಪ್ರಾಯ ಕೊಡಬಹುದೇ ಹೊರತು, ಬೇರೆ ಜಿಲ್ಲೆಗೆ ಅಭಿಪ್ರಾಯ ಕೊಡುವ ಅಧಿಕಾರ ನನಗೆ ಇಲ್ಲ. ಸುಧಾಕರ್ ಅವರಿಗೆ ಇದನ್ನು ಹೇಳಲು ಇಷ್ಟಪಡ್ತೇನೆ. ವಿಜಯೇಂದ್ರ ನನ್ನನ್ನು ರಾಜಕೀಯ ಸಮಾಧಿ ಮಾಡಲು ಹೊರಟಿದ್ದಾರೆ ಅಂತ ಸುಧಾಕರ್ ಹೇಳಿದ್ದಾರೆ. ಸುಧಾಕರ್ ಅವರು ಹಿರಿಯರು, ಹೀಗೆಲ್ಲ ಮಾತಾಡಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ವಿಜಯೇಂದ್ರ ಇದ್ರೆ ಬಿಜೆಪಿಗೆ ಭವಿಷ್ಯ ಇಲ್ಲ: ಸಂಸದ ಸುಧಾಕರ್
Advertisement
Advertisement
ಸುಧಾಕರ್ ಆಕ್ರೋಶದ ಮಾತಾಡಿದ್ದಾರೆ. ಅವರು ಹಾಗೆಲ್ಲ ಮಾತಾಡೋದು ಅವರಿಗೂ ಗೌರವ ಕೊಡಲ್ಲ, ಪಕ್ಷಕ್ಕೂ ಗೌರವ ಸಿಗಲ್ಲ. ಸುಧಾಕರ್ ಆ ರೀತಿ ಮಾತಾಡಬಾರದು. ಪಕ್ಷ ನನ್ನ ಸ್ವತ್ತೂ ಅಲ್ಲ, ಅವರ ಸ್ವತ್ತೂ ಅಲ್ಲ. ಮುಂದಿನ ಸಿಎಂ ಆಗಲು ನಾನು ಪಕ್ಷ ಸಂಘಟನೆ ಮಾಡ್ತಿಲ್ಲ. ಸುಧಾಕರ್ ಹಾಗೆಲ್ಲ ಮಾತಾಡಬಾರದು. ಸುಧಾಕರ್ ಜಿಲ್ಲೆಯಲ್ಲಿ ಗೆದ್ದಿರೋರೂ ಒಬ್ಬ ಕಾರ್ಯಕರ್ತರೇ, ಅವರು ಸುಧಾಕರ್ ಸಂಬAಧಿಯೂ ಹೌದು. ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಆಯ್ಕೆಯಲ್ಲಿ ನನ್ನ ಪಾತ್ರ ಇಲ್ಲ. ಯಾವ ಜಿಲ್ಲೆಯಲ್ಲೂ ನನ್ನ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಸುಧಾಕರ್ ಹಗುರವಾಗಿ ಮಾತಾಡಬಾರದು, ಅದು ಅವರಿಗೆ ಶೋಭೆ ತರಲ್ಲ. ಸುಧಾಕರ್ ಅವರು ಹಾಗೆಲ್ಲ ಮಾತಾಡಬಾರದು ಅಂತ ಆಗ್ರಹ ಮಾಡಲ್ಲ, ಮನವಿ ಮಾಡ್ತೇನೆ. ನಾನು ಸುಧಾಕರ್ ಅವರನ್ನೂ ಭೇಟಿ ಮಾಡ್ತೇನೆ. ನನ್ನ ಮೇಲೆ ಸುಧಾಕರ್ ಆರೋಪ ಮಾಡೋದು ಸರಿಯಲ್ಲ. ಸುಧಾಕರ್ ಅನ್ಯಥಾ ಭಾವಿಸಬಾರದು, ತಪ್ಪು ತಿಳ್ಕೋಬಾರದು. ನನ್ನ ಪಾತ್ರ ಏನೂ ಇಲ್ಲ ತಿಳಿಸಿದರು. ಇದನ್ನೂ ಓದಿ: ಕಂದಾಯ ನ್ಯಾಯಾಲಯಗಳಲ್ಲಿ ಸಮರೋಪಾದಿಯಲ್ಲಿ ಪ್ರಕರಣಗಳ ವಿಲೇವಾರಿ – ಸಿಎಂ ಫುಲ್ ಖುಷ್
ಶ್ರೀರಾಮುಲು ಅಸಮಾಧಾನ ವಿಚಾರವಾಗಿ ಮಾತನಾಡಿ, ಶ್ರೀರಾಮುಲು ಅವರು ಹಿರಿಯರು. ಸಚಿವರಾಗಿ, ಹಿರಿಯರಾಗಿ ಪಕ್ಷಕ್ಕೆ ಅವರದ್ದೇ ಆದ ಶಕ್ತಿ ತುಂಬಿದ್ದಾರೆ. ಕೋರ್ ಕಮಿಟಿ ಆದ ನಂತರ ನಾನೂ ಮಾತಾಡಿದ್ದೇನೆ. ಕೋರ್ ಕಮಿಟಿಯಲ್ಲಿ ನಡೆದಿದ್ದು ಮಾಧ್ಯಮಗಳಲ್ಲಿ ಚರ್ಚೆ ಮಾಡಬಾರದು ಅಂತ ಅವರಿಗೆ ಮನವಿ ಮಾಡಿದ್ದೇನೆ. ಏನೇ ಇದ್ದರೂ ಕೂತು ಚರ್ಚಿಸಿ ಬಗೆಹರಿಸಿಕೊಳ್ಳೋಣ ಅಂದಿದ್ದೇನೆ ಎಂದರು. ನಾಳೆ ಯತ್ನಾಳ್ ಟೀಮ್ ಸಭೆ ಹಾಗೂ ರಾಜ್ಯಾಧ್ಯಕ್ಷ ಅಭ್ಯರ್ಥಿ ಆಯ್ಕೆ ವಿಚಾರವಾಗಿ, ‘ಆಲ್ ದಿ ಬೆಸ್ಟ್, ಒಳ್ಳೆಯದಾಗಲಿ ಅವರಿಗೆ’ ಎಂದು ಟಾಂಗ್ ಕೊಟ್ಟರು.
ನಾನು ತಿದ್ದುಕೊಳ್ಳಬೇಕು ಅಂತ ಅವರು ಮತ್ತು ಇತರರು ಹೇಳಿದ್ದಾರೆ. ಏನಾದರೂ ಇದ್ರೆ ನಾನು ಖಂಡಿತ ತಿದ್ದಿಕೊಳ್ತೇನೆ. ಸುಧಾಕರ್ ಅವರು ತಾಳ್ಮೆ ಮುಗೀತು ಇನ್ನು ಯುದ್ಧ ಎಂದಿದ್ದಾರೆ. ಆ ರೀತಿ ಮಾತಾಡಬಾರದು. ನಾನು ಸುಧಾಕರ್ ಅವರ ಜೊತೆ ಮತ್ತು ಇತರರ ಜೊತೆ ಮಾತಾಡ್ತೀನಿ. ನಾನು ಪಕ್ಷ ಸಂಘಟನೆ ಮಾತ್ರ ಮಾಡ್ತಿದ್ದೇನೆ. ನನ್ನ ಮೇಲೆ ತಪ್ಪು ಹೊರೆಸೋದು ಬೇಡ ಎಂದು ಹೇಳಿದರು.