ಬೆಂಗಳೂರು: ದೆಹಲಿ ವಿಧಾನಸಭೆ ರಿಸಲ್ಟ್ (Delhi Assembly Results) ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿಗೆ ಗ್ರೀನ್ ಸಿಗ್ನಲ್ ಸಿಗಲಿದೆ. ವಿಜಯೇಂದ್ರ (BY Vijayendra) ಮುಂದುವರಿಯಬೇಕಾ? ಬೇಡ್ವಾ ಎಂಬುದನ್ನ ಪ್ರಧಾನಿ ನರೇಂದ್ರ ಮೋದಿಯೇ (Narendra Modi) ತೀರ್ಮಾನಿಸಲಿದ್ದಾರೆ ಎನ್ನಲಾಗಿದೆ.
ರಾಜ್ಯ ಬಿಜೆಪಿ (BJP) ಚೂರುಚೂರಾಗಿ ಬಣಗಳ ರಗಳೆ ಬಿಜೆಪಿ ಹೈಕಮಾಂಡ್‌ಗೆ ತಲೆನೋವು ತಂದಿದ್ದು, ಗೊಂದಲ ಹೆಚ್ಚಾಗಿರುವ ಕಾರಣ ರಾಷ್ಟ್ರೀಯ ಬಿಜೆಪಿ ನಾಯಕರು ಮೋದಿ ತೀರ್ಮಾನಕ್ಕೆ ಬಿಟ್ಟಿದ್ದಾರೆ ಎಂಬುದು ಬಿಜೆಪಿ ಮೂಲಗಳ ಮಾಹಿತಿ. ಇದನ್ನೂ ಓದಿ: ಉದ್ಯೋಗ ಖಾತ್ರಿ | 150 ಮಾನವ ದಿನಗಳಿಗೆ ಏರಿಸದಿರುವುದು ಬೇಸರದ ಸಂಗತಿ – ಪ್ರಿಯಾಂಕ್ ಖರ್ಗೆ
Advertisement
Advertisement
ಮೋದಿ ಮುಂದೆ ರಾಷ್ಟ್ರೀಯ ನಾಯಕರ ತಂಡ ಮೂರು ಆಯ್ಕೆ ಮುಂದಿಟ್ಟಿದ್ದಾರೆ. ಬಿಜೆಪಿ ಹೈಕಮಾಂಡ್ ಮುಂದೆ ಮೂರು ಆಯ್ಕೆಗಳಿವೆ ಎನ್ನಲಾಗಿದೆ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸುವುದು. ವಿಜಯೇಂದ್ರ ವಿರೋಧಿ ಬಣಕ್ಕೆ ಒಪ್ಪಿತವಾಗುವ ತಟಸ್ಥ ಬಣದವರಲ್ಲಿ ಒಬ್ಬರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವುದು. ಯಾವ ಬಣವೂ ಬೇಡ, ಆರ್‌ಎಸ್‌ಎಸ್ ನಿಷ್ಠರನ್ನ ಸದ್ಯಕ್ಕೆ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವುದು ಎಂಬ ಆಯ್ಕೆಗಳು ಮುಂದಿವೆ. ಇದನ್ನೂ ಓದಿ: ಕೊಡವರ ಸಂಸ್ಕೃತಿ ಉಳಿವಿಗಾಗಿ ಪಾದಯಾತ್ರೆ – ಫೆ.7ರಂದು ದಕ್ಷಿಣ ಕೊಡಗಿನ 5 ಶಾಲಾ ಕಾಲೇಜಿಗೆ ರಜೆ ಘೋಷಣೆ
Advertisement
Advertisement
ಈ ನಡುವೆ ಆರ್‌ಎಸ್‌ಎಸ್ ನಾಯಕರಿಂದ ಕೋಟಾ ಶ್ರೀನಿವಾಸ ಪೂಜಾರಿ ಅವರ ಬಗ್ಗೆ ಬಿಜೆಪಿ ಹೈಕಮಾಂಡ್ ರಿಪೋರ್ಟ್ ತರಿಸಿಕೊಂಡಿದ್ದಾರೆ. ಯಾವುದೇ ಬಣದವರಿಗೂ ಮಣೆ ಅದೇ ಸಂಘ ನಿಷ್ಠರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಬಗ್ಗೆಯೂ ಹೈಕಮಾಂಡ್ ಆಯ್ಕೆ ಓಪನ್ ಇಟ್ಟುಕೊಂಡಿದೆ. ಹಾಗಾದ್ರೆ ತಟಸ್ಥ ಬಣ, ವಿಜಯೇಂದ್ರ ಬಣ, ಯತ್ನಾಳ್ ಬಣಗಳಿಗೂ ಶಾಕ್ ಕೊಡ್ತಾರಾ ಮೋದಿ? ಅಥವಾ ಯಾರಿಗಾದರೂ ಲಕ್ ಕುದುರುತ್ತಾ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: Delhi Exit Poll | ದೆಹಲಿಯಲ್ಲಿ ಆಪ್ ಹ್ಯಾಟ್ರಿಕ್ ಸಾಧನೆ: WeePreside ಸಮೀಕ್ಷೆ