ಯಾದಗಿರಿ: ಬಿಜೆಪಿ (BJP) ವಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಚಿವ ರಾಜೂಗೌಡ (Raju Gowda) ಯಾದಗಿರಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಹೈಕಮಾಂಡ್ಗೆ ರಾಜ್ಯ ನಾಯಕರ ಮೇಲೆ ನಂಬಿಕೆಯಿದೆ. ಲೇಟ್ ಆಗಿ ಆದ್ರೂ ಲೇಟೆಸ್ಟ್ ಆಗಿ ಒಳ್ಳೆಯ ನಾಯಕನ ಆಯ್ಕೆಗಾಗಿ ಆಲೋಚನೆ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
Advertisement
ಒಂದೆರಡು ತಿಂಗಳಲ್ಲಿ ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷನ ಆಯ್ಕೆ ಮಾಡ್ತಾರೆ ಎಂದ ರಾಜೂಗೌಡ, ಬಾಂಬೆ ಬಾಯ್ಸ್ ಘರ್ ವಾಪ್ಸಿ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಚರ್ಚೆ ಮಾಡಿದಾಗ ಪಕ್ಷ ಬಿಟ್ಟು ಹೋಗಲ್ಲ ಎಂದಿದ್ದಾರೆ. ಈಗ ಯಾರು ಹೋಗ್ತಿನಿ ಅಂತ ಹೇಳಂಗಿಲ್ಲ, ಅವರ ಮನಸ್ಸಿನಲ್ಲಿ ಇದ್ದದ್ದನ್ನ ಮಾಡ್ತಾರೆ. ನಾವು ಸ್ನೇಹಿತರಾಗಿ ಕೆಲವು ಸಲಹೆ ಕೊಡ್ತಿವಿ ಅಷ್ಟೇ. ಪಕ್ಷದಲ್ಲಿ ಅಸಮಾಧಾನ ಆಗಿದ್ರಿಂದ ಸ್ವಲ್ಪ ಕೋಪಗೊಂಡಿದ್ದು ನಿಜ ಎಂದಿದ್ದಾರೆ. ನೆಗಡಿ ಆಗೇತಿ ಅಂತ ಮೂಗು ಕೋಯ್ಕಂಡ್ರೆ ತಪ್ಪು. ಕಾದು ನೋಡೋಣ ಯಾರು ಯಾವಾಗ ಹೋಗ್ತಾರೆ. ನಮಗೂ ಅಧಿಕಾರ ಸಿಗುತ್ತೆ ಅಂತ ಬಾಂಬೆ ಟಿಂ ಸೇರಿಸ್ಕೊಂಡಿದ್ದೇವೆ. ಈಗ ಅವರು ಹೋಗ್ತಿದ್ದಾರೆ ಅಂದ್ರೆ ಯಾಕೆ ಹೋಗ್ತಾರೆ ಕೇಳೋಣ ಎಂದರು. ಇದನ್ನೂ ಓದಿ: ಕಾಣೆಯಾಗಿದ್ದ ಹಸ್ಕಿ ತಳಿಯ ಕುರುಡು ಶ್ವಾನ ಪತ್ತೆ ಹಚ್ಚಿದ ಪೊಲೀಸರು – ಸಂತಸ ಹಂಚಿಕೊಂಡ ಕುಟುಂಬ
Advertisement
Advertisement
ಇನ್ನೂ ರೇಣುಚಾರ್ಯ (Renukacharya) ಕಾಂಗ್ರೆಸ್ ಸೇರ್ಪಡೆ ವದಂತಿ ವಿಚಾರಕ್ಕೆ ವ್ಯಂಗ್ಯವಾಡಿದ ರಾಜೂಗೌಡ, ನಮ್ಮ ರೇಣುಕಾ ಮುತ್ಯಾ ಏನ್ ಕಾಂಗ್ರೆಸ್ (Congress) ಸೇರೋದಿಲ್ಲ. ನಮ್ಮ ಮುತ್ಯಾಗ ಸ್ವಲ್ಪ ಭೇಟಿಯಾಗುವ ಚಾಳಿ ಇದೆ. ಅದಕ್ಕಾಗಿ ಕಾಂಗ್ರೆಸ್ ನಾಯಕರನ್ನ ಭೇಟಿ ಆಗಿದ್ದಾರೆ ಅಷ್ಟೇ. ಇದಕ್ಕಾಗಿ ನಾನು ಇವತ್ತೇ ಹೇಳ್ತಿದ್ದೀನಿ ರೈತರ ಹೊಲಗಳಿಗೆ ನೀರು ಹರಿಸೋ ವಿಚಾರವಾಗಿ ನಾನು ಸಿಎಂ ಹಾಗೂ ಡಿಸಿಎಂ ಭೇಟಿಯಾಗಿ ರೈತರಿಗೆ ನೀರು ಹರಿಸುವ ಬಗ್ಗೆ ಚರ್ಚಿಸ್ತೀನಿ. ಕಾಂಗ್ರೆಸ್ ನಾಯಕರನ್ನ ಭೇಟಿಯಾದ ರಾಜುಗೌಡ ಅಂತಾ ಬ್ರೇಕಿಂಗ್ ಮಾಡ್ಬೇಡಿ ಎಂದು ನಗೆಯಾಡಿದ್ರು.
Advertisement
Web Stories