ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರದ ಭರಾಟೆಯಲ್ಲಿ ನಾಲಗೆ ಹರಿಬಿಟ್ಟಿದ್ದಾರೆ. ಶ್ರೀರಾಮಲು ಅವರ ಜತೆಗೆ ವಾಲ್ಮೀಕಿ ಸಮಯದಾಯವನ್ನೂ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ. ವಾಲ್ಮೀಕಿ ಸಮುದಾಯವನ್ನು ಸಿದ್ದರಾಮಯ್ಯ ಕೂಡಲೇ ಕ್ಷಮೆ ಯಾಚಿಸಬೇಕು ಅಂತ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮೊಳಕಾಲ್ಮೂರು ಶಾಸಕ ಶ್ರೀರಾಮಲು 420 ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಚಾರದ ಭರಾಟೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ನಾಲಗೆ ಹರಿಯಬಿಟ್ಟಿದ್ದು, ಈ ತರಹದ ಮಾತುಗಳು ಅವರ ಘನತೆಗೆ ತಕ್ಕದ್ದಲ್ಲ. ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಅಂತ ವಾಗ್ದಾಳಿ ನಡೆಸಿದ್ರು.
ಚುನಾವಣೆಯ ಅಂತಿಮ ತೀರ್ಪು ಮತದಾರನದ್ದಾಗಿದೆ. ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಕುಮಾರಸ್ವಾಮಿ ಅವರನ್ನ ಪ್ರಶ್ನಿಸಿದ ಬಿ.ಎಸ್.ವೈ, ಪ್ರಧಾನಿ ಅಭ್ಯರ್ಥಿಯ ಬಗ್ಗೆ ಅವರಲ್ಲೇ ಗೊಂದಲ ಇದೆ. ಕೆಲವರು ರಾಹುಲ್ ಗಾಂಧಿ ಪ್ರಧಾನಿ ಅಂದುಕೊಂಡ್ರೆ ಇನ್ನೂ ಕೆಲವರು ಚಿದಂಬರಂ ಹೆಸರು ಹೇಳ್ತಿದ್ದಾರೆ. ಆದ್ರೆ ಎಲ್ಲ ಸಮೀಕ್ಷೆಗಳಲ್ಲಿಯೂ ನರೇಂದ್ರ ಮೋದಿಯವರೇ ಪ್ರಧಾನಿ ಅಂತ ವರದಿ ಬಂದಿದೆ ಅಂತ ಅವರು ಹೇಳಿದ್ರು.
ಬಳ್ಳಾರಿ, ಶಿವಮೊಗ್ಗ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರವನ್ನ ಈಗಾಗಲೇ ಗೆದ್ದಿದ್ದೇವೆ. ಹೆಚ್ಚು ಅಂತರದ ಗೆಲುವಿಗೆ ಪ್ರಯತ್ನ ನಡೆದಿದೆ. ಆರೋಪ, ಪ್ರತ್ಯಾರೋಪಗಳಿಗೆ ಜನ ಮುಂತಿನ ತಿಂಗಳು 6 ರಂದು ಉತ್ತರಿಸಲಿದ್ದಾರೆ. ಮಂಡ್ಯ ಪ್ರಚಾರದ ವೇಳೆ ನಿರೀಕ್ಷೆಗೂ ಮೀರಿ ಜನ ಸೇರಿದ್ದರು ಅಂತ ಅವರು ತಿಳಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv