Bengaluru City
ಮೌನಕ್ಕೆ ಶರಣಾದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ

ಬೆಂಗಳೂರು: ಜಯನಗರ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಜಯಗಳಿಸಿದೆ. ಸೋಲಿನಿಂದ ಬಿಜೆಪಿಗೆ ಆಘಾತವಾಗಿದ್ದು, ಪರಿಣಾಮ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದಾರೆ.
ವಿಧಾನಪರಿಷತ್ ಚುನಾವಣೆಯಲ್ಲಿದ್ದ ಒಂದು ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಿದೆ. ಹೀಗಾಗಿ ಸೋಲಿನಿಂದ ಕಂಗೆಟ್ಟಿರುವ ಯಡಿಯೂರಪ್ಪ ಅವರು ನಿನ್ನೆಯಿಂದಲೂ ಮನೆಯಿಂದ ಹೊರಬಂದಿಲ್ಲ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.
ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಆಪ್ತ ಸಹಾಯಕರ ಮೂಲಕ ಅವರು ಹೇಳಿ ಕಳುಹಿಸಿದ್ದಾರೆ. ಆಪ್ತರು ಹಾಗೂ ಪಕ್ಷದ ಪ್ರಮುಖರನ್ನೂ ಸಹ ಭೇಟಿ ಮಾಡಲು ಯಡಿಯೂರಪ್ಪ ಅವರು ನಿರಾಕರಿಸಿದ್ದಾರೆ.
ಜಯನಗರ ಸೋಲಿಗೆ ಸಂಬಂಧಿಸಿದಂತೆ ಬೆಂಗಳೂರು ಬಿಜೆಪಿ ನಾಯಕರ ವಿರುದ್ಧ ಬಿಎಸ್‍ವೈ ಇದೀಗ ಗರಂ ಆಗಿದ್ದು, ಈ ಸೋಲನ್ನು ಕೇಂದ್ರ ಸಚಿವ ಅನಂತಕುಮಾರ್ ಮತ್ತು ಪದ್ಮಾನಗರ ಕ್ಷೇತ್ರದ ಶಾಸಕ ಅಶೋಕ್ ತಲೆಗೆ ಕಟ್ಟಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
