ಬೆಂಗಳೂರು: ತೆಲಂಗಾಣದಲ್ಲಿ ಆಪರೇಷನ್ ಕಮಲ (Operation Kamala) ಶುರುವಾಗಿದ್ದು, ತೆಲಂಗಾಣ ರಾಷ್ಟ್ರ ಸಮಿತಿ (TRS) ಶಾಸಕರನ್ನು ಖರೀದಿಸಲು ಬಿಜೆಪಿ (BJP) ಸಾವಿರಾರು ಕೋಟಿ ಆಮಿಷ ಒಡ್ಡಿದೆ ಎಂದು ಕಾಂಗ್ರೆಸ್ (Congress) ಗಂಭೀರ ಆರೋಪ ಮಾಡಿದೆ.
By offering Rs 50 Crores for each MLA…they (BJP) are not believing in democracy. Not only in Goa, everywhere they do Operation Kamala. They will offer money, they will purchase MLAs: Siddaramaiah, Congress leader
"No, it's not possible in Karnataka," he says. pic.twitter.com/ssMHQiW9dT
— ANI (@ANI) July 11, 2022
ಈ ಕುರಿತು ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ (Congress), ಮೂಲಗಳ ಪ್ರಕಾರ ಆಪರೇಷನ್ ಕಮಲದ (Operation Kamala) ರೂವಾರಿಗಳು ಅಮಿತ್ ಶಾ (Amit Shah), ಬಿ.ಎಲ್ ಸಂತೋಷ್ ಹಾಗೂ ಜೆ.ಪಿ ನಡ್ಡಾ (JP Nadda). ಸಂಸ್ಕಾರ, ಚಾರಿತ್ರ್ಯ ಹಾಗೂ ನೈತಿಕ ರಾಜಕಾರಣದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿ.ಎಲ್.ಸಂತೋಷ್ ಮಾಡುವುದು ಮಾತ್ರ ಅನಾಚಾರ. ಆಪರೇಷನ್ ಕಮಲ ಯಾವ ಸಂಸ್ಕಾರ ಎಂದು ಪ್ರಶ್ನಿಸಿದೆ.
ಟಿಆರ್‌ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಶಾಸಕರನ್ನು ಖರೀದಿಸಲು ಸಾವಿರಾರು ಕೋಟಿ ಆಮಿಷ ಒಡ್ಡಲಾಗಿದೆ. ಬಿಜೆಪಿಯವರಿಗೆ ಇಷ್ಟೊಂದು ದುಡ್ಡು ಬರುವುದು ಎಲ್ಲಿಂದ? ಆಪರೇಷನ್ ಕಮಲಕ್ಕೆ ಪಿಎಂ ಕೇರ್ (PM Cares) ನಿಧಿ ಬಳಸಲಾಗುತ್ತಿದೆಯೇ ಅಥವಾ ಭ್ರಷ್ಟಾಚಾರದಿಂದ ಗಳಿಸಿದ ಹಣ ಬಳಕೆಯಾಗುತ್ತಿದೆಯೇ? ನಾ ಖಾವೂಂಗಾ, ನಾ ಖಾನೇದೂಂಗಾ ಎನ್ನುವ ಮೋದಿಯವರೆ (Narendra Modi), ಆಪರೇಷನ್ ಕಮಲದ ಹಣದ ಮೂಲ ಯಾವುದು ತಿಳಿಸುವಿರಾ? ಎಂದು ಕುಟುಕಿದೆ.
ಈಗಾಗಲೇ ಹಲವು ರಾಜ್ಯಗಳಲ್ಲಿ ಆಪರೇಷನ್ ಕಮಲದ ಮೂಲಕ ಅಕ್ರಮವಾಗಿ ಅಧಿಕಾರಕ್ಕೇರಿರುವ ಬಿಜೆಪಿ (BJP) ಈಗ ತೆಲಂಗಾಣದಲ್ಲೂ ಅನಿಷ್ಟ ಪ್ರಯತ್ನಕ್ಕೆ ಕೈ ಹಾಕಿದೆ. ಆದರೆ ತೆಲಂಗಾಣದಲ್ಲಿ ಆಪರೇಷನ್ ಕಮಲ ಯಶಸ್ವಿಯಾಗಿಲ್ಲ. ಏಕೆಂದರೆ ಆಪರೇಷನ್ ಕಮಲ ಬಿಜೆಪಿಯ ಅನೈತಿಕ ಶಿಶು. ಬಿಜೆಪಿಯವರು ಪ್ರಜಾಪ್ರಭುತ್ವದ ರಕ್ಷಕರಾಗದೇ ಭಕ್ಷಕರಾಗುತ್ತಿದ್ದಾರೆ ಎಂದು ಕಿಡಿ ಕಾರಿದೆ.