ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯ ಜೋರಾಗುತ್ತಿದ್ದರೂ ಫೆಬ್ರವರಿಯಲ್ಲಿ ಮಾತ್ರ ಬಂದಿದ್ದ ಪ್ರಧಾನಿ ಮೋದಿ ಪ್ರಚಾರಕ್ಕೆ ಬರ್ತಿಲ್ಲ ಯಾಕೆ ಅನ್ನೋ ಚರ್ಚೆ ವ್ಯಾಪಕವಾಗುತ್ತಿದೆ.
ಈ ಪ್ರಶ್ನೆಗೆ ಉತ್ತರ ಎಂಬಂತೆ ಏಪ್ರಿಲ್ ಕೊನೆಯ ವಾರದಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಬರುತ್ತಿದ್ದು, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಅಥವಾ ಬೆಳಗಾವಿಯಲ್ಲಿ ಮೆಗಾ ರೋಡ್ ಶೋ ಸೇರಿದಂತೆ 16 ಕಡೆ ಸಮಾವೇಶ ನಡೆಸಲಿದ್ದಾರೆ ಎನ್ನಲಾಗಿದೆ. ಸಮಾವೇಶಕ್ಕಾಗಿ ಸ್ಥಳ, ದಿನಾಂಕ ನಿಗದಿ ಕಾರ್ಯ ಜೋರಾಗಿ ನಡೆಯುತ್ತಿದೆ.
Advertisement
ಇದರ ಜೊತೆಗೆ, ಹಿಂದುತ್ವದ ಪ್ರಭಾವ ಇರೋ ಕರಾವಳಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬರುತ್ತಿದ್ದು ಚುನಾವಣೆಗೆ ಕನಿಷ್ಠ 15 ದಿನ ಸಮಯ ನೀಡುತ್ತೇನೆ ಎಂದು ಹೇಳಿದ್ದಾರಂತೆ.
Advertisement
ಮೋದಿ, ಯೋಗಿಯ ಜೊತೆಗೆ ನಾಮಪತ್ರ ಸಲ್ಲಿಕೆಯ ನಂತರ ಕೇಂದ್ರ ಸಚಿವರ ದಂಡೇ ಕರ್ನಾಟಕಕ್ಕೆ ಇಳಿಯಲಿದೆ. ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಸ್ಮೃತಿ ಇರಾನಿ, ನಿತಿನ್ ಗಡ್ಕರಿ, ಮುಖ್ತಾರ್ ಅಬ್ಬಾಸ್ ನಖ್ವಿ, ಮಹಾರಾಷ್ಟ್ರ ಸಿಎಂ ದೇವಂದ್ರ ಫಡ್ನಾವಿಸ್, ಮಧ್ಯಪ್ರದೇಶ ಸಿ.ಎಂ ಶಿವರಾಜ್ ಸಿಂಗ್ ಚೌಹಾಣ್ ಸ್ಟಾರ್ ಪ್ರಚಾರಕರಾಗಿ ಬರಲಿದ್ದಾರೆ.
Advertisement