– ಬಿಜೆಪಿ ನಾಯಕರಿಂದ ಕಾಂಗ್ರೆಸ್ ವಿರುದ್ಧ ಸುದ್ದಿಗೋಷ್ಠಿ
– ಕಟೀಲ್ ಹೇಳಿಕೆ ಸುಳ್ಳು ಅಂತ ಕಾಂಗ್ರೆಸ್‍ನವರು ಹೇಳಲಿ
ಬೆಂಗಳೂರು: ಇದ್ದಿದ್ದನ್ನು ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದ ಹಾಗಾಗಿದೆ ಎಂದು ವಕ್ತಾರರಾದ ಗಣೇಶ್ ಕಾರ್ಣಿಕ್ ರಾಜ್ಯಾಧ್ಯಕ್ಷರ ನಳಿನ್ ಕಟೀಲ್ ಅವರ ರಾಹುಲ್ ಗಾಂಧಿ ಡ್ರಗ್ ಪೆಡ್ಲರ್, ಡ್ರಗ್ಗಿಸ್ಟ್ ಎಂಬ ಹೇಳಿಕೆ ಸಮರ್ಥಿಸಿ ಮಾತನಾಡಿದ್ದಾರೆ.
Advertisement
ಕಟೀಲ್ ಅವರ ಬಗ್ಗೆ ಕರ್ನಾಟಕ ಕಾಂಗ್ರೆಸ್ ಖಾತೆಯ ಟ್ವೀಟ್ ನಲ್ಲಿ ಅವಹೇಳನ ಪದ ಬಳಕೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ, ವಕ್ತಾರರಾದ ಗಣೇಶ್ ಕಾರ್ಣಿಕ್, ಚಲವಾದಿ ನಾರಾಯಣ ಸ್ವಾಮಿ ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿದರು. ಇದನ್ನೂ ಓದಿ: ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ
Advertisement
Advertisement
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಗಣೇಶ್ ಕಾರ್ಣಿಕ್ ಅವರು, ಇದ್ದಿದ್ದನ್ನು ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದ ಹಾಗಾಗಿದೆ. 2016 ರಲ್ಲಿ ನಡೆದ ಘಟನೆ ಬಗ್ಗೆ ವರದಿಯಾಗಿತ್ತು. ವರದಿಯಲ್ಲಿ ಉಲ್ಲೇಖವಾದ ವಿಚಾರವನ್ನು ಕಟೀಲ್ ಅವರು ಭಾಷಣದಲ್ಲಿ ಪ್ರಸ್ತಾಪಿಸಿದರು ಎಂದರು.
Advertisement
ಸುಬ್ರಮಣಿಯನ್ ಸ್ವಾಮಿ ಅವರು ಖಾಸಗಿ ವಾಹಿನಿಯಲ್ಲಿ ರಾಹುಲ್ ಗಾಂಧಿ ಅವರು ಮಾದಕ ವಸ್ತುಗಳ ಬಳಕೆ ಬಗ್ಗೆ ಪ್ರಸ್ತಾಪ ಮಾಡಿದ್ದರು. 2001ರಲ್ಲಿ 1.60 ಲಕ್ಷ ಡಾಲರ್ ಮೌಲ್ಯದ ಡ್ರಗ್ಸ್ ರಾಹುಲ್ ಗಾಂಧಿ ಬಳಿ ಪತ್ತೆ ಆಗಿತ್ತು. ಈ ಸಂಬಂಧ ಅಮೆರಿಕದ ಎಫ್‍ಬಿಐ ರಾಹುಲ್ ಗಾಂಧಿ ಅವರನ್ನು ವಶಕ್ಕೆ ಪಡೆದಿತ್ತು. ಈ ವೇಳೆ ಯುಪಿಎ ಅಧ್ಯಕ್ಷೆ ಆಗಿದ್ದ ಸೋನಿಯಾ ಗಾಂಧಿ ಅವರ ಮನವಿಯ ಮೇರೆಗೆ ಅಮರಿಕದ ಅಧ್ಯಕ್ಷ ಬುಷ್ ಅವರಿಗೆ ಪ್ರಧಾನಿ ವಾಜಪೇಯಿ ಮಾತನಾಡಿ ರಾಹುಲ್ ಗಾಂಧಿ ಅವರಿಗೆ ಬಿಡುಗಡೆಯ ಭಾಗ್ಯ ಒದಗಿಸಿದ್ದರು ಎಂದು ಮಾಹಿತಿ ನೀಡಿದರು.
ಈ ವರದಿಗಳ ಬಗ್ಗೆ ನಮ್ಮ ರಾಜ್ಯಾಧ್ಯಕ್ಷರು ನಿನ್ನೆ ಭಾಷಣದಲ್ಲಿ ಉಲ್ಲೇಖಿಸಿದ್ದರು. ರಾಹುಲ್ ಗಾಂಧಿ ಅವರ ಹೇಳಿಕೆ ಸುಳ್ಳು ಅಂತ ಯಾರೂ ಹೇಳಿಲ್ಲ. ಕಾಂಗ್ರೆಸ್‍ನವರು ಅನಗತ್ಯ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಖುದ್ದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೇ ಕಟೀಲ್ ಹೇಳಿಕ ವಿರೋಧ ಮಾಡಿಲ್ಲ. ಅಲ್ಲಿಗೆ ಆ ಆರೋಪ ನಿಜ ಅನ್ಸುತ್ತೆ ಅಲ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಎರಡು ಕ್ಷೇತ್ರಗಳಲ್ಲಿ ಹೆಚ್ಚಿನ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ: ಸಿಎಂ
ಕಾಂಗ್ರೆಸ್ ಪ್ರತಿಪಕ್ಷದಲ್ಲಿರಲು ಅನರ್ಹ. ಇತ್ತೀಚೆಗೆ ಆರ್‌ಎಸ್‌ಎಸ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಶೋಚನೀಯ ಪರಿಸ್ಥಿತಿ ಇದೆ. ಕಾಂಗ್ರೆಸ್ ನಲ್ಲಿ ಅಧ್ಯಕ್ಷರಾಗಲು ತಾಯಿ-ಮಗನಲ್ಲಿಯೇ ಸ್ಪರ್ಧೆ ಇದೆ ಎಂದು ಸಮರ್ಥಿಸಿಕೊಂಡರು.
ನಮ್ಮಲ್ಲಿ ಮೂರು ವರ್ಷಕ್ಕೆ ಆಂತರಿಕ ಚುನಾವಣೆ ನಡೆಯುತ್ತದೆ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ನಮ್ಮ ಪಕ್ಷ ನೋಡಿ ಕಾಂಗ್ರೆಸ್ ಕಲಿಯಲಿ. ಕಟೀಲ್ ಅವರು ರಾಹುಲ್ ಗಾಂಧಿ ಅವರ ಬಗ್ಗೆ ಹೇಳಿದ್ದರಲ್ಲಿ ಸತ್ಯ ಇದೆ ಎಂದು ತಿಳಿಸಿದರು.