ನವದೆಹಲಿ: ಇತ್ತೀಚೆಗೆ ಪಂಚರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಬರೋಬ್ಬರಿ 252 ಕೋಟಿ ರೂ. ಖರ್ಚು ಮಾಡಿದೆ. ಒಟ್ಟು ಮೊತ್ತದಲ್ಲಿ ಶೇ. 60ರಷ್ಟು ಹಣವನ್ನು ಪಶ್ಚಿಮ ಬಂಗಾಳ ರಾಜ್ಯ ಒಂದಕ್ಕೇ ಬಿಜೆಪಿ ವಿನಿಯೋಗಿಸಿದೆ.
Advertisement
ಚುನಾವಣಾ ಸಮಿತಿಗೆ ಸಲ್ಲಿಸಿರುವ ಚುನಾವಣಾ ವೆಚ್ಚದ ವರದಿಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಅಸ್ಸಾಂ, ಪುದುಚೇರಿ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಒಟ್ಟು 252,02,71,753 ರೂ. ಅನ್ನು ಖರ್ಚು ಮಾಡಿದೆ. ಅದರಲ್ಲಿ 43.81 ಕೋಟಿ ಅಸ್ಸಾಂ ಹಾಗೂ 4.79 ಕೋಟಿ ರೂ. ಅನ್ನು ಪುದುಚೇರಿ ಚುನಾವಣೆಗಾಗಿ ಬಳಸಿದೆ. ಇದನ್ನೂ ಓದಿ: ಕಂಗನಾಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿ ವಾಪಸ್ ಪಡೆಯುವಂತೆ ನವಾಬ್ ಮಲ್ಲಿಕ್ ಒತ್ತಾಯ
Advertisement
ತಮಿಳುನಾಡಿನಲ್ಲಿ ಡಿಎಂಕೆ ತನ್ನ ಎದುರಾಳಿ ಎಐಎಡಿಎಂಕೆ ವಿರುದ್ಧ ಗೆಲುವು ಸಾಧಿಸಿ ಅಧಿಕಾರ ತನ್ನದಾಗಿಸಿಕೊಂಡಿತು. ಈ ರಾಜ್ಯದಲ್ಲಿ ಕೇವಲ ಶೇ. 2.6 ಮತಗಳನ್ನು ಪಡೆದ ಬಿಜೆಪಿ ಪ್ರಚಾರಕ್ಕಾಗಿ 22.97 ಕೋಟಿ ರೂ. ಖರ್ಚು ಮಾಡಿದೆ.
Advertisement
Advertisement
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಚಾರಕ್ಕೆ ಒಟ್ಟು ಮೊತ್ತದ ಬಹುಪಾಲು ಹಣ ಅಂದರೆ 151 ಕೋಟಿ ರೂ. ಅನ್ನು ಬಳಸಿದೆ. ಕೇರಳದಲ್ಲಿ 29.24 ಕೋಟಿ ರೂ. ವೆಚ್ಚ ಮಾಡಿದೆ. ಇದನ್ನೂ ಓದಿ: ಜೈ ಶ್ರೀರಾಮ್ ಅನ್ನೋರು ರಾಕ್ಷಸರು: ರಶೀದ್ ಅಲ್ವಿ
ರಾಜಕೀಯ ಪಕ್ಷಗಳು ಚುನಾವಣಾ ವೆಚ್ಚದ ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ.