ತಾತನ ಹೆಸರು ಗೊತ್ತಿಲ್ಲವೆಂದರೆ ತಾತ ಇಲ್ಲವೆಂದಲ್ಲ- ಜಿ.ಪರಮೇಶ್ವರ್ ಹೇಳಿಕೆಗೆ ಬಿಜೆಪಿ ಕಿಡಿ

Public TV
2 Min Read
G.Parameshwara

ಬೆಂಗಳೂರು: ಯಾರಿಗಾದರೂ ಅವರ ಮುತ್ತಾತನ ಹಾಗೂ ತಾತನ ಹೆಸರು ಗೊತ್ತಿಲ್ಲವೆಂದರೆ ಅವರಿಗೆ ತಾತ, ತಂದೆಯಿಲ್ಲ ಎಂದಲ್ಲ. ಅವರಿಗೆ ಆ ಬಗ್ಗೆ ಜ್ಞಾನವಿಲ್ಲ ಎಂದಷ್ಟೇ ಅರ್ಥ. ಪಾಪ ಪರಮೇಶ್ವರ್ (G.Parameshwara) ಅವರ ಸ್ಮೃತಿ ಐ.ಎನ್.ಡಿ.ಐ.ಎ (I.N.D.I.A) ಮೈತ್ರಿಕೂಟದ ಪ್ರಭಾವದಿಂದಾಗಿ ಕೊಂಚ ಪಲ್ಲಟವಾದ ಹಾಗಿದೆ ಎಂದು ಬಿಜೆಪಿ (BJP) ಟ್ವಿಟ್ಟರ್‌ನಲ್ಲಿ ಕಿಡಿಕಾರಿದೆ.

ಹಿಂದೂ ಧರ್ಮ ಒಬ್ಬ ಪುರುಷ ಅಥವಾ ಒಂದು ಪುಸ್ತಕದಿಂದ ಹುಟ್ಟಿದ ಧರ್ಮವಲ್ಲ. ಅದಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಇದೊಂದು ಸಾವಿರಾರು ವರ್ಷಗಳಿಂದ ನಡೆದು ಬಂದ ಬಹು ಉಪಾಸನಾ ವಿಧದ ಜೀವನ ಪದ್ಧತಿ ಎಂಬ ಕಾರಣಕ್ಕೇ ಇದು ಸನಾತನ ಧರ್ಮ ಮತ್ತು ಭಾರತ ಸನಾತನ ಭೂಮಿ ಎಂದು ಕರೆಯಲಾಗುತ್ತದೆ ಎಂದು ಬಿಜೆಪಿ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದೆ. ಇದನ್ನೂ ಓದಿ: ಹಿಂದೂ ಧರ್ಮವನ್ನು ಹುಟ್ಟಿಸಿದವರು ಯಾರು? – ಉದಯ್‌ನಿಧಿ ಬಳಿಕ ಜಿ. ಪರಮೇಶ್ವರ್ ಪ್ರಶ್ನೆ

ಔರಂಗಜೇಬ್‍ನಿಂದ ಹಿಡಿದು ಉದಯನಿಧಿ ಸ್ಟಾಲಿನ್‍ವರೆಗೆ (Udhayanidhi Stalin) ಅವೆಷ್ಟೋ ದಾಳಿಕೋರರನ್ನು ಈ ಮಣ್ಣು ಕಂಡ ಮೇಲೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಧರ್ಮ ಜಿಜ್ಞಾಸೆಗಿಂತಲೂ ಹೆಚ್ಚು ಸದ್ಯಕ್ಕೆ ನಿಮ್ಮ ಪಕ್ಷದಲ್ಲೇ ನಿಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಕಡೆಗೆ ಹೆಚ್ಚಿನ ಗಮನ ಕೊಡುವುದು ನಿಮ್ಮ ವೈಯಕ್ತಿಕ ಹಿತದ ದೃಷ್ಟಿಯಿಂದ ಒಳಿತು ಎಂದು ಟಾಂಗ್ ಕೊಟ್ಟಿದೆ.

ಗೃಹ ಸಚಿವ ಜಿ.ಪರಮೇಶ್ವರ್ ಅವರು ಹಿಂದೂ ಧರ್ಮ ಯಾವಾಗ ಹುಟ್ಟಿತು? ಅದನ್ನು ಯಾರು ಹುಟ್ಟಿಸಿದ್ರು ಅನ್ನೋದು ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ ಎಂದು ತುಮಕೂರಿನಲ್ಲಿ ಹೇಳಿದ್ದರು. ಈ ಮೂಲಕ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. ಇದನ್ನೂ ಓದಿ: ದೇಶಕ್ಕೆ ಭಾರತ ಎಂಬ ಹೆಸರೇಕೆ ಬಂತು? ಇಂಡಿಯಾ ಹೆಸರು ಹೇಗೆ ಬಂತು?

Web Stories

Share This Article