ಕಾರ್ ಚೇಸ್ ಮಾಡಿ ಯುವತಿಗೆ ಕಿರುಕುಳ ನೀಡಲು ಯತ್ನ – ಮಜಾವಾದಿ ಸರ್ಕಾರ ಏಸಿ ರೂಮಲ್ಲಿ ಮಲಗಿದೆ ಎಂದ ಬಿಜೆಪಿ

Public TV
1 Min Read
Three men booked for allegedly chasing Young woman car in Bengaluru 1

ಬೆಂಗಳೂರು: ನಗರದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಯುವತಿಯನ್ನು ಬೆನ್ನಟ್ಟಿ ಡೋರ್ ತೆಗೆಯಲು ಯತ್ನಿಸಿದ ಪ್ರಕರಣ ಸೇರಿದಂತೆ, ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ (BJP) ಕಿಡಿಕಾರಿದೆ.

ಸಿದ್ದರಾಮಯ್ಯ (Siddaramaiah) ನೇತೃತ್ವದ ಮಜಾವಾದಿ ಸರ್ಕಾರ ಮಹಿಳೆಯರಿಗೆ ಆತಂಕ ಸೃಷ್ಟಿಸಿದೆ. ಕರ್ನಾಟಕವನ್ನು ಕಾಂಗ್ರೆಸ್ (Congress) ಗೂಂಡಾ ರಾಜ್ಯವನ್ನಾಗಿ ಮಾಡುತ್ತಿದೆ. ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಿ ಗೂಂಡಾಗಳ ಕೈಗೆ ಅಧಿಕಾರ ಕೊಟ್ಟಿದೆ ಎಂದು ಬಿಜೆಪಿ ಎಕ್ಸ್‌ನಲ್ಲಿ ಚಾಟಿ ಬೀಸಿದೆ. ಇದನ್ನೂ ಓದಿ: ಇವಿಎಂ ಫಿಕ್ಸಿಂಗ್ ಎಂದ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಬೆಂಗಳೂರಿನಂತಹ ರಾಜಧಾನಿಯಲ್ಲೇ ಯುವತಿಯನ್ನು ಚೇಸ್ ಮಾಡಿಕೊಂಡು ಹೋಗಿ ಕಾರಿನ ಡೋರ್ ತೆಗೆಯಲು ಯತ್ನಿಸಿದ್ದಾರೆ ಎಂದರೆ ಸರ್ಕಾರ ಏಸಿ ಕೋಣೆಯಲ್ಲಿ ಮಲಗಿದೆ ಎಂದೇ ಅರ್ಥ. ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ, ಅತ್ಯಾಚಾರ ಆಗುತ್ತಿದ್ದರೂ ಕ್ರಮ ಕೈಗೊಳ್ಳದೆ ಗೂಂಡಾಗಳ ರಕ್ಷಣೆ ಮಾಡುತ್ತಿರುವುದರಿಂದಲೇ, ರಾಜಾರೋಷವಾಗಿ ಬೀದಿ ಕಾಮಣ್ಣರು ರಾಜ್ಯದಲ್ಲಿ ಮಹಿಳೆಯರ ಮೇಲೆ ಎರಗುತ್ತಿದ್ದಾರೆ ಎಂದು ಬಿಜೆಪಿ ತೀವ್ರವಾಗಿ ರಾಜ್ಯ ಸರ್ಕಾರವನ್ನು ಟೀಕಿಸಿದೆ. ಇದನ್ನೂ ಓದಿ: ಕಾರು ಫಾಲೋ ಮಾಡಿ ಡೋರ್‌ ತೆಗೆಯಲು ಯತ್ನ – ಬೆಂಗಳೂರಲ್ಲಿ ಯುವತಿಗೆ ಕಿಡಿಗೇಡಿಗಳಿಂದ ಕಿರುಕುಳ

Share This Article