ಬೆಂಗಳೂರು: ಬೆಂಗಳೂರಿನ ರಾಜಕಾಲುವೆ (Bengaluru Rajkaluve) ವಿಚಾರಕ್ಕೆ ಸಂಬಂಧಿಸಿದಂತೆ #ಭ್ರಷ್ಟರಾಮಯ್ಯ ಹ್ಯಾಶ್‌ಟ್ಯಾಗ್‌ನೊಂದಿಗೆ ಸರಣೀ ಟ್ವೀಟ್‌ಗಳನ್ನು ಮಾಡಿರುವ ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಕಿಡಿಕಾರಿದೆ.
ಅಷ್ಟಕ್ಕೂ ಬೆಂಗಳೂರಿನ (Bengaluru) ಸಂಕಷ್ಟದ ದಿನಗಳಿಗೆ #ಭ್ರಷ್ಟರಾಮಯ್ಯ ಅವರೇ ನೇರ ಕಾರಣ ಎಂದು ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಉಗ್ರನ ಶವವನ್ನು ಹೊರತೆಗೆದು ಅಂತ್ಯಸಂಸ್ಕಾರಕ್ಕೆ ಅವಕಾಶ ಕೋರಿದ್ದ ಅರ್ಜಿ ವಜಾ
Advertisement
ಕೆರೆಗಳನ್ನು ಡಿ-ನೋಟಿಫಿಕೇಶನ್ ಮಾಡಲು ಅವಕಾಶ ಇಲ್ಲವೆಂದು ಅಧಿಕಾರಿಗಳು ತಿಳಿಸಿದರೂ #ಭ್ರಷ್ಟರಾಮಯ್ಯ ಸರ್ಕಾರ ಕಾಯ್ದೆಯನ್ನೇ ತಿದ್ದುಪಡಿ ಮಾಡಿತು.
ಈ ಜನವಿರೋಧಿ ನಿರ್ಧಾರದ ಮೂಲಕ @siddaramaiah ಮತ್ತು @INCKarnataka ಸರ್ಕಾರ ಪಡೆದ ಕಪ್ಪಕಾಣಿಕೆ ಎಷ್ಟು? pic.twitter.com/3Etdl09TUm
— BJP Karnataka (@BJP4Karnataka) September 12, 2022
Advertisement
ಟ್ವೀಟ್‌ನಲ್ಲಿ ಏನಿದೆ?
ಕೆರೆಗಳನ್ನು ಡಿನೋಟಿಫೈ ಮಾಡಲು ತಡೆಯಿದ್ದ ಕಾಯ್ದೆಯನ್ನೇ ಅಂದು ಬದಲಾವಣೆ ಮಾಡಿ ಅನುಮೋದನೆ ನೀಡಿದ್ದು ಏಕೆ? ಅಕ್ರಮ ಒತ್ತುವರಿಗೆ ಕಾಂಗ್ರೆಸ್ (Congress) ಸರ್ಕಾರವೇ ನೇರ ಕಾರಣ. ಅಂದು ಸಮಸ್ಯೆ ಸೃಷ್ಟಿಸಿ ಇಂದು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದವಲ್ಲವೇ?
Advertisement
ಕೆರೆಗಳನ್ನು ಡಿ-ನೋಟಿಫಿಕೇಶನ್ ಮಾಡಲು ಅವಕಾಶ ಇಲ್ಲವೆಂದು ಅಧಿಕಾರಿಗಳು ತಿಳಿಸಿದರೂ #ಭ್ರಷ್ಟರಾಮಯ್ಯ ಸರ್ಕಾರ ಕಾಯ್ದೆಯನ್ನೇ ತಿದ್ದುಪಡಿ ಮಾಡಿತು. ಈ ಜನವಿರೋಧಿ ನಿರ್ಧಾರದ ಮೂಲಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ಪಡೆದ ಕಪ್ಪಕಾಣಿಕೆ ಎಷ್ಟು?
Advertisement
ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಅಕಾಲಿಕ ಮಳೆಯ ಸಂದರ್ಭದಲ್ಲಿ, ಮೊಳಕಾಲುದ್ದ ನೀರಿನಲ್ಲೂ ಬೋಟ್ ರೈಡ್ ಮೂಲಕ ನೆರೆ ಪ್ರದೇಶಕ್ಕೆ ತೆರಳಿ ಜನ ಸ್ಪಂದನೆಯ ನಾಟಕ ಮಾಡಿದ್ದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಷ್ಟಕ್ಕೂ ಬೆಂಗಳೂರಿನ ಮೊನ್ನೆಯ ಸಂಕಷ್ಟದ ದಿನಗಳಿಗೆ #ಭ್ರಷ್ಟರಾಮಯ್ಯ ಅವರೇ ನೇರ ಕಾರಣ ಎಂದು ಆರೋಪಿಸಿದೆ.