ಬೆಂಗಳೂರು: ತಾನು ಬಹಳ ಸಚ್ಚಾರಿತ್ರ್ಯ ಹೊಂದಿದವರಂತೆ ಬಿಂಬಿಸಿಕೊಳ್ಳುವ ಬಾದಾಮಿ ಶಾಸಕ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಪುಂಖಾನುಪುಂಖ ಮಾತನಾಡುತ್ತಿದ್ದಾರೆ. ಅವರೇ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದೇನು? ತಮ್ಮ ಮೇಲಿದ್ದ 50 ಪ್ರಕರಣಗಳಿಂದ ಪಾರಾಗಲು ಲೋಕಾಯುಕ್ತವನ್ನೇ ಖತಂ ಮಾಡಿದ ಭೂಪ ಈ ಮಹರಾಯ ಎಂದು ಬಿಜೆಪಿ ಟ್ವಿಟ್ಟರ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದೆ.
ಟ್ವೀಟ್‍ನಲ್ಲಿ ಏನಿದೆ:
ತಾನು ಬಹಳ ಸಚ್ಚಾರಿತ್ರ್ಯ ಹೊಂದಿದವರಂತೆ ಬಿಂಬಿಸಿಕೊಳ್ಳುವ ಬಾದಾಮಿ ಶಾಸಕ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಪುಂಖಾನುಪುಂಖ ಮಾತನಾಡುತ್ತಿದ್ದಾರೆ. ಅವರೇ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದೇನು? ತಮ್ಮ ಮೇಲಿದ್ದ 50 ಪ್ರಕರಣಗಳಿಂದ ಪಾರಾಗಲು ಲೋಕಾಯುಕ್ತವನ್ನೇ ಖತಂ ಮಾಡಿದ ಭೂಪ ಈ ಮಹರಾಯ! ತಾನು ಕಳ್ಳ, ಪರರ ನಂಬ ಸಿದ್ದರಾಮಯ್ಯರದು ಸ್ಪ್ಲಿಟ್ ಪರ್ಸನಾಲಿಟಿ ಪಕ್ಷದ ಪ್ರಣಾಳಿಕೆಯಲ್ಲಿ ಭಾಗ್ಯಗಳ ಪುಂಗಿ ಊದಿ ಆಶ್ವಾಸನೆ ಕೊಟ್ಟ ಧನರಾಶಿಯೇ ಬೇರೆ. ಸಮ್ಮಿಶ್ರ ಸರ್ಕಾರದ ಬಜೆಟ್ಟಿನಲ್ಲಿ ಆ ಭಾಗ್ಯಗಳಿಗೆ ಘೋಷಿಸಿದ ಪುಡಿಗಾಸು ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ಸರಿ ಇಷ್ಟೆಲ್ಲಾ ಹಳವಂಡಗಳ ಮೇಲೆ ಭಾಗ್ಯಗಳ ದುಡ್ಡನ್ನೂ ದೋಚಿದ್ದಾಯಿತು. ಇದನ್ನೂ ಓದಿ: ಇಡಿ ದಾಳಿ ಬೆನ್ನಲ್ಲೇ ದೇಶ ತೊರೆದ ವಿವೋ ನಿರ್ದೇಶಕರು
ಕೈಪಕ್ಷದ ರಾಜ್ಯಾಧ್ಯಕ್ಷರಿಗೆ ಭ್ರಷ್ಚಾಚಾರದ ವಿರುದ್ಧ ಮಾತಾಡೋ ನೈತಿಕ ಅರ್ಹತೆಯೇ ಇಲ್ಲ. 317 ಬ್ಯಾಂಕ್ ಖಾತೆಗಳ ಮೂಲಕ ಹವಾಲಾ ದಂಧೆ ಮಾಡಿರುವವರು, ಶಾಂತಿನಗರ ಗೃಹ ನಿರ್ಮಾಣ ಸೊಸೈಟಿಯ 1,456 ಕೋಟಿ ರೂ. ಮೊತ್ತದ ಆಸ್ತಿಗುಳುಂ ಮಾಡಿರುವವರು. ಸುಭಗರಂತೆ ಬುಡಬುಡಿಕೆ ಮಾತುಗಳನ್ನಾಡುವುದು ಬದನೇಕಾಯಿ ತಿಂದು ವೇದಾಂತ ನುಡಿದಂತೆ. ಕೈಪಕ್ಷ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ. ಪಕ್ಷದ ಅಧ್ಯಕ್ಷೆಯಿಂದ ಹಿಡಿದು ಚಾಮರಾಜಪೇಟೆಯ ಪುಢಾರಿ ಶಾಸಕನವರೆಗೂ ಸಾಲುಸಾಲಾಗಿ ಇ.ಡಿ. ಹಿಡಿತದಲ್ಲಿದ್ದಾರೆ. ಜಾಮೀನಿನ ಮೇಲೆ ಹೊರಬಂದು ಈಗ ಭ್ರಷ್ಟಾಚಾರದ ಬಗ್ಗೆ ಗಂಟಲು ಹರಿಯುವಂತೆ ಕೂಗುವುದು ಕೈಪಕ್ಷದ ಅಧೋಗತಿಯ ಸೂಚನೆ. ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ಮಾತ್ರ ನೀರು!. ಇದನ್ನೂ ಓದಿ: ಕಾಳಿ ವಿವಾದ ಆಯ್ತು, ಇದೀಗ ಶಿವ, ಪಾರ್ವತಿ ಪಾತ್ರಧಾರಿಗಳ ಚಿತ್ರ ಹಂಚಿಕೊಂಡ ಲೀನಾ
ಸಿದ್ದರಾಮಯ್ಯರದು ಸ್ಪ್ಲಿಟ್ ಪರ್ಸನಾಲಿಟಿ. ಪಕ್ಷದ ಪ್ರಣಾಳಿಕೆಯಲ್ಲಿ ಭಾಗ್ಯಗಳ ಪುಂಗಿ ಊದಿ ಆಶ್ವಾಸನೆ ಕೊಟ್ಟ ಧನರಾಶಿಯೇ ಬೇರೆ, ಸಮ್ಮಿಶ್ರ ಸರ್ಕಾರದ ಬಜೆಟ್ಟಿನಲ್ಲಿ ಆ ಭಾಗ್ಯಗಳಿಗೆ ಘೋಷಿಸಿದ ಪುಡಿಗಾಸು ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ಸರಿ. ಇಷ್ಟೆಲ್ಲಾ ಹಳವಂಡಗಳ ಮೇಲೆ ಭಾಗ್ಯಗಳ ದುಡ್ಡನ್ನೂ ದೋಚಿದ್ದಾಯಿತು! #CorruptCONgress pic.twitter.com/1JGb4DwYrX
— BJP Karnataka (@BJP4Karnataka) July 7, 2022
ರಾಜ್ಯಸಭೆಗೆ ದಕ್ಷಿಣ ಭಾರತದ ನಾಲ್ವರು ಗಣ್ಯರ ನಾಮನಿರ್ದೇಶನ ವಿಚಾರವಾಗಿ ಇದು ಬಿಜೆಪಿಯ ಮಿಷನ್ ದಕ್ಷಿಣ್ ತಂತ್ರ ಎಂಬ ಟೀಕೆ ಕುರಿತಾಗಿ ಬಿಜೆಪಿ ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿದೆ. ಮಿಷನ್ ದಕ್ಷಿಣ್ ಎಂದರೆ ಕೇವಲ ಅಧಿಕಾರ ಹಿಡಿಯುವ ರಾಜಕೀಯ ತಂತ್ರಗಾರಿಕೆಯಲ್ಲ. ದಕ್ಷಿಣದ ರಾಜ್ಯಗಳ ಭಾಷಾ ಅಸ್ಮಿತೆ, ಸಾಧನೆ, ಜ್ಞಾನ ಭಂಡಾರ, ಅಭಿವೃದ್ಧಿ ಎಲ್ಲದಕ್ಕೂ ಗೌರವ ನೀಡುವುದಾಗಿದೆ. ಪ್ರತಿಭೆ ಹಾಗೂ ಅರ್ಹತೆಯನ್ನೇ ಮೋದಿ ಸರ್ಕಾರ ಮಾನದಂಡವಾಗಿ ಪರಿಗಣಿಸುತ್ತದೆ. ಇದಕ್ಕೆ ರಾಜ್ಯ ಸಭಾ ನಾಮನಿರ್ದೇಶಿತರೇ ಸಾಕ್ಷಿಯಾಗಿದ್ದಾರೆ. ರಾಷ್ಟ್ರದ ಕೀರ್ತಿ ಎತ್ತಿ ಹಿಡಿಯುವುದರಲ್ಲಿ ದಕ್ಷಿಣದ ರಾಜ್ಯಗಳ ಈ ಪ್ರತಿಯೊಂದು ‘ಪ್ರತಿಭಾ ವಜ್ರ’ ಗಳ ಕೊಡುಗೆ ಅಪಾರ. ಭಾರತ ರತ್ನ ಸೇರಿದಂತೆ ದೇಶದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಒಂದು ಕುಟುಂಬ ಹಾಗೂ ಆ ಕುಟುಂಬದ ಗುಣಗಾನ ಮಾಡುತ್ತಿದ್ದವರಿಗೆ ನೀಡುತ್ತಿದ್ದ ಕಾಲದ ಯುಗಾಂತ್ಯವಾಗಿದೆ. ಮೋದಿ ಯುಗದಲ್ಲಿ ಅರ್ಹರಿಗೆ ಮಾತ್ರ ಆದ್ಯತೆ ರಾಜ್ಯಸಭಾ ನಾಮನಿರ್ದೇಶಿತಗೊಂಡ ಸದಸ್ಯರ ಸಾಧನೆಯೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.